ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮೂಲಕ ದಸರಾ ಉದ್ಘಾಟಿಸಿದ ಬಾನು ಮುಷ್ತಾಕ್

ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ-2025ಕ್ಕೆ ಇಂದು ಬೂಕರ್ ಪ್ರಶಸ್ತಿ ವಿಜೇತೆ, ಖ್ಯಾತ ಸಾಹಿತಿ ಬಾನು ಮುಷ್ತಾಕ್ ಅವರು ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಜನೆ ಸಲ್ಲಿಸುವ ಮೂಲಕ ದಸರಾ ಉತ್ಸವ ಉದ್ಘಾಟಿಸಿ ಚಾಲನೆ ನೀಡಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರಿಗೆ ಮೈಸೂರು ಪೇಟ ತೊಡಿಸಿ ಶಾಲು ಹೊದಿಸಿ ಗೌರವಿಸಿದರು.

ಬಳಿಕ ಮಾತನಾಡಿದ ಬಾನು ಮುಷ್ತಾಕ್ ಅವರು, ಚಾಮುಂಡಿ ಸನ್ನಿಧಿ ಬಳಿ ಕರೆದೊಯ್ಯುವುದಾಗಿ ನನ್ನ ಸ್ನೇಹಿತೆ ಒಬ್ಬರು ಹೇಳಿದ್ದರು.ಈಗ ಸರ್ಕಾರ ನನ್ನನ್ನು ದಸರಾ ಉದ್ಘಾಟನೆಗೆ ಅಹ್ವಾನಿಸಿದದ ಬಳಿಕ ಬೇಕಾದಷ್ಟು ಏರುಪೇರು ಹಾಗೂ ಸನ್ನಿವೇಶಗಳು ನಡೆದರೂ ಕೂಡ, ತಾಯಿ ಚಾಮುಂಡಿ ನನ್ನನ್ನು ಕರೆಸಿಕೊಂಡಿದ್ದಾಳೆ. ನಾನು ಈಗ ತಾನೆ ಹಾಗೆ ಸನ್ನಿಧಿಯಿಂದ ನಿಮ್ಮೆಲ್ಲರಿಗೆ ಬಂದು ನಿಂತಿದ್ದೇನೆ. ದಸರಾ ಅಂದರೆ ಇದು ಕೇವಲ ಹಬ್ಬ ಮಾತ್ರ ಅಲ್ಲ ಇದು ನಾಡಿನ ಒಂದು ನಾಡಿಮಿಡಿತ ಸಂಸ್ಕøತಿಯ ಉತ್ಸವ ಎಲ್ಲರನ್ನೂ ಒಳಗೊಳ್ಳುವಂತಹ ಗಳಿಗೆ ಸಮನ್ವಯದ ಮೇಳವಾಗಿದೆ. ಹೆಸರು ಅರಸರ ಸಂಸ್ಕೃತಿಯ ಪರಂಪರೆಯಿಂದ ಹಿಡಿದು ಕನ್ನಡ ಭಾಷೆಯ ಹೃದಯದ ಆಳದ ಸ್ಪಂದನದ ವರೆಗೆ ಈ ಹಬ್ಬವು ನಮಗೆ ನೆನಪಿಸುತ್ತದೆ.

ಸಂಸ್ಕೃತಿ ಎಂದರೆ ಬೇರೆ ಬೇರೆ ಧ್ವನಿಗಳ ಸಂಗಮ ವಿಭಿನ್ನತೆಯಲ್ಲೇ ಏಕತೆಯ ಸುಗಂಧ. ದಸರಾ ನಮ್ಮ ಸಮಗ್ರ ಮತ್ತು ಸಂಸ್ಕೃತಿಯ ಪ್ರತೀಕವಾಗಿದೆ. ನನಗೆ ಗೊತ್ತಿರುವ ಹಾಗೆ ಮೈಸೂರಿನ ಉರ್ದು ಭಾಷಿಕರು ನವರಾತ್ರಿಯ ಎಲ್ಲಾ 10 ದಿನಗಳಿಗೂ ಉರ್ದುವಿನಲ್ಲಿ ಅವರದೇ ಆದಂತಹ ಗುರುತನ್ನ ಕೊಟ್ಟಿರುತ್ತಾರೆ.ನನಗೆ ನೆನಪಿನಲ್ಲಿ ಇರುವ ಹೇಳುವ ಹಾಗೆ ವಿಜಯದಶಮಿಗೆ ಇಲ್ಲಿನ ಉರ್ದು ಭಾಷಿಕರು ಸಿಲಿಂಗನ್ ಅಂತ ಕರೆಯುತ್ತಾರೆ ಅದು ಅವರ ಸಾಹಿತ್ಯ ಸಂಸ್ಕೃತಿ ಮತ್ತು ಬದುಕಿನಲ್ಲಿ ಭಾಗವಾಗಿದೆ ಯಾರು ಭಿನ್ನರಲ್ಲ, ಯಾರು ಪರಕಿಯರಲ್ಲ ಇರಲ್ಲ ಎಲ್ಲರೂ ಕೂಡ ಒಳಗೊಂಡಂತಹ ಆಚರಿಸುವಂತಹ ಒಂದು ಸಾಂಸ್ಕೃತಿಕ ಉತ್ಸವವಾಗಿದೆ.

ನನ್ನ ಆತ್ಮ ಸಂಬಂಧಿ ಒಬ್ಬರು ನನಗೆ ಅವರು ಮಾವ ಆಗಬೇಕು. ಮೈಸೂರು ಮಹಾರಾಜರ ಅಂಗರಕ್ಷಕ ಪಡೆಯ ಒಬ್ಬ ಸೈನಿಕರಾಗಿದ್ದರು. ಅವರು ನಮ್ಮ ಎಲ್ಲಾ ಮನೆಗಳಲ್ಲಿ ಸಿಪಾಯಿ ಮೊಮ್ಮಗಳು ಅಂತನೇ ಕರೆಯುತ್ತಿದ್ದರು. ನನಗೆ ಈಗ ಹೆಮ್ಮೆ ಅನಿಸುವಂತದ್ದು ಏನೆಂದರೆ , ಮಹಾರಾಜರು ಜಯಚಾಮರಾಜೇಂದ್ರ ಒಡೆಯರು ಮುಸ್ಲಿಮರನ್ನು ನಂಬಿ ಮುಸ್ಲಿಮರ ಬಗ್ಗೆ ಅನುಮಾನ ಪಡದೆ ತಮ್ಮ ಅಂಗ ರಕ್ಷಕ ಪಡೆಯ ಸದಸ್ಯರನ್ನು ಮಾಡಿಕೊಂಡರು ಅವರ ಬಗ್ಗೆ ಭರವಸೆ ಇಟ್ಟಿದ್ದು, ನನಗೆ ನಿಜವಾಗಿಯೂ ನನಗೆ ಹೆಮ್ಮೆ ತರುತ್ತದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *