“ಎಕ್ಸ್‍ಪ್ಲೋರಿಂಗ್ ಎಐ ಅಂಡ್ ಎಂ.ಎಲ್ ಟುಮಾರೋ” ವಿಷಯದ ಮೇಳೆ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ

ತುಮಕೂರು:ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ ನವದೆಹಲಿ(ಎಐಸಿಟಿಇ)ಹಾಗೂ ಶ್ರೀಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ತುಮಕೂರು, ಮತ್ತು ಗಣಕಯಂತ್ರ ವಿಭಾಗ ಇವರ ಸಹಯೋಗದಲ್ಲಿ 2025 ಸೆಪ್ಟೆಂಬರ್ 26 ಮತ್ತು 27ರಂದು “ಎಕ್ಸ್‍ಪ್ಲೋರಿಂಗ್ ಎಐ ಅಂಡ್ ಎಂ.ಎಲ್ ಟುಮಾರೋ””(Exploring AI AND ML better tomorrow) ಎಂಬ ವಿಷಯದ ಮೇಲೆ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಸಿದ್ದಗಂಗಾ ಕಾಲೇಜಿನ ಡಾ.ಶ್ರೀಶಿವಕುಮಾರಸ್ವಾಮೀಜಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಶ್ರೀಸಿದ್ದಗಂಗಾ ಶಿಕ್ಷಣ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ಡಾ.ಶಿವಕುಮಾರಯ್ಯ ತಿಳಿಸಿದರು.

ಅವರಿಂದು ಪತ್ರಿಕಾಗೋಷ್ಠೀಯಲ್ಲಿ ಮಾತನಾಡಿ, ಕೃತಕ ಬುದ್ದಿಮತ್ತೆ ಮತ್ತು ಮಿಷನ್ ಲರ್ನಿಂಗ್ ಕ್ಷೇತ್ರದಲ್ಲಿ ಆಗುತ್ತಿರುವ ಪ್ರಗತಿಯನ್ನು ಅದರಲ್ಲಿನ ಆವಿಷ್ಕಾರಗಳು,ಅದರಿಂದ ಉಂಟಾಗುವ ಸವಾಲುಗಳು,ಮುಂದಿನ ಭವಿಷ್ಯದ ದಿನಗಳಲ್ಲಿ ಹೇಗೆ ಸಮಾಜಕ್ಕೆ, ಉಪಯುಕ್ತವಾಗ ಬಲ್ಲವೂ ಎಂಬುದನ್ನು ಚರ್ಚಿಸಲು ದೇಶದ ವಿವಿಧ ಭಾಗಗಳಿಂದ ಪ್ರಖ್ಯಾತ ಸಂಶೋಧಕರು, ಶಿಕ್ಷಣ ತಜ್ಞರು,ಉದ್ಯಮ ತಜ್ಞರು ಉಪಯುಕ್ತವಾದ ಮಾಹಿತಿಯನ್ನು ನೀಡಲಿದ್ದಾರೆ.ಇದರ ಮೂಲಕ ಭವಿಷ್ಯದಲ್ಲಿ ವಿದ್ಯಾರ್ಥಿಗಳು ಸಂಶೋಧನಾರ್ಥಿಗಳು,ತಜ್ಞರುಗಳು,ಪ್ರಪಂಚದಲ್ಲಿ ಎಐ ಮತ್ತು ಎಂಎಲ್ ಗಳ ಬಗ್ಗೆ ನಡೆಯುತ್ತಿರುವ ವಿದ್ಯಾಮಾನಗಳ ಬಗ್ಗೆ, ತಿಳಿಯಲು ಅತ್ಯಂತ ಸಹಕಾರಿಯಾಗಿದೆ. ಇದು ನಮ್ಮ ಸಮ್ಮೇಳನ ಮುಖ್ಯ ಉದ್ದೇಶವಾಗಿದೆ.ಈ ಸಮ್ಮೇಳನವು ಜ್ಞಾನ ವಿನಿಮಯ, ಶಿಕ್ಷಣ, ಉದ್ಯೋಗ ಕಲಿಕೆ ಬೆಳವಣಿಗೆ, ಇವುಗಳ ನಡುವಿನ ಸೇತುವೆಯಾಗಿ ಈ ವೇದಿಕೆ ಕಾರ್ಯ ನಿರ್ವಹಿಸಲಿದೆ ಎಂದರು.

ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮತ್ತು ಮಿಷನ್ ಲರ್ನಿಂಗ್ ಕ್ಷೇತ್ರಗಳಲ್ಲಿ ಇತ್ತೀಚಿನ ಪ್ರವೃತ್ತಿಗಳು ಮತ್ತು ಬೆಳವಣಿಗೆಯನ್ನು ಕುರಿತು ಪ್ರಮುಖ ಸಂಶೋಧಕರು ಹಾಗೂ ಪ್ರಖ್ಯಾತ ವಾಗ್ಮಿಗಳು ತಮ್ಮ ಒಳನೋಟಗಳನ್ನು ಹಂಚಿಕೊಳ್ಳಲಿದ್ದಾರೆ. ಇಂದು ಎ ಐ ಮತ್ತು ಎಂ.ಎಲ್ ಗಳು ನಮ್ಮ ದಿನನಿತ್ಯದಲ್ಲಿ ಜೀವನದ ನಾನ ಕ್ಷೇತ್ರಗಳಲ್ಲಿ ಯಾವ ರೀತಿಯಾಗಿ ಕಾರ್ಯ ನಿರ್ವಹಿಸುತ್ತೇವೆ ಇಂದಿನ ತಂತ್ರಜ್ಞಾನ ಯುಗದಲ್ಲಿ ಹಲವಾರು ಕ್ಷೇತ್ರಗಳಲ್ಲಿ ಇತ್ತೀಚಿನ ಬೆಳವಣಿಗಳನ್ನು ಕುರಿತು ದೇಶದ ವಿವಿಧ ಭಾಗಗಳಿಂದ ವಿಜ್ಞಾನಿಗಳು, ತಂತ್ರಜ್ಞಾನಿಗಳು, ಸಂಶೋಧಕರು, ವಿದ್ವಾಂಸರು, ಸಂಶೋಧನಾ ಲೇಖನಗಳನ್ನು ಪ್ರಸ್ತುತಪಡಿಸಲಿದ್ದಾರೆ.

ಐದು ಸಮಾನಾಂತರ ವೇದಿಕೆಗಳಲ್ಲಿ ನಿರ್ದಿಷ್ಟ ಕ್ಷೇತ್ರಗಳ ಬಗ್ಗೆ ಲೇಖನಗಳನ್ನು ಮಂಡನೆಯನ್ನು ಆಯೋಜಿಸಲಾಗಿದೆ.ಭಾರತ ದೇಶದ ಮೂಲೆ ಮೂಲೆಗಳಿಂದ ವಿವಿಧ ರಾಜ್ಯಗಳಿಂದ ಸುಮಾರು 150ಕ್ಕೂ ಹೆಚ್ಚು ಲೇಖನಗಳು ಬಂದಿದ್ದು, ಪ್ರತಿಯೊಂದು ಲೇಖನಗಳನ್ನು ವಿಷಯ ತಜ್ಞರ ತಂಡ ಸ್ವತಂತ್ರ ವಿಮರ್ಶೆಗೆ ಒಳಪಡಿಸಿ ಮತ್ತು ಎರಡು ದಿನಗಳ ಸಮ್ಮೇಳನದ ಪ್ರಸ್ತುತಿಗಾಗಿ 93 ಗುಣಮಟ್ಟದ ಲೇಖನಗಳನ್ನು ಆಯ್ಕೆ ಮಾಡಲಾಗಿದೆ.ಹಾಗೂ ISBN ಜರ್ನಲ್‍ನಲ್ಲಿ ಪ್ರಕಟಿಸಲಾಗುವುದು. ಪದವಿ ವಿದ್ಯಾರ್ಥಿಗಳು, ವಿಮರ್ಶಕರು,ಸಂಶೋಧಕರು,ತಾಂತ್ರಿಕ ಕೌಶಲ್ಯಗಳನ್ನು ಪ್ರದರ್ಶಿಸಲು ಈ ಸಮ್ಮೇಳನವನ್ನು ಆಯೋಜಿಸಲಾಗಿದೆ.ಎಮರ್ಜಿಂಗ್ ಟ್ರಂಡ್ ಅಫ್ ಎಐ ಮತ್ತು ಎಂಲ್, ಆರೋಗ್ಯ, ಶಿಕ್ಷಣ, ಕೃಷಿ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಲ್ಲಿ ಎಐ ಬಳಕೆ, ಸೈಬರ್ ಸೆಕ್ಯೂರಿಟಿ ಮತ್ತು ಡಾಟಾ ಖಾಸಗಿತನ, ವ್ಯಾಪಾರ, ವ್ಯವಹಾರ, ಹಣಕಾಸು ಮತ್ತು ಅರ್ಥಿಕ ವಿಚಾರಗಳಲ್ಲಿ ಎಐ ಬಳಕೆ, ಗೇಮಿಂಗ್‍ಗಳಲ್ಲಿ ಎಐ ಬಳಕೆ ಈ ವಿಚಾರಗಳ ಮೇಲೆ ಸಂಶೋಧನಾ ಪ್ರಂಬಂಧಗಳು ಮಂಡನೆಯಾಗಲಿವೆ ಎಂದರು.

ಸೆಪ್ಟಂಬರ್ 26ರ ಬೆಳಗ್ಗೆ 9:30ಕ್ಕೆ ಸಮ್ಮೇಳನದ ದಿವ್ಯ ಸಾನಿಧ್ಯವನ್ನು ಸಿದ್ದಗಂಗಾ ಮಠದ ಅಧ್ಯಕ್ಷರಾಧ ಶ್ರೀಶ್ರೀಸಿದ್ದಲಿಂಗ ಮಹಾಸ್ವಾಮಿಗಳು ವಹಿಸುವರು. ಉದ್ಘಾಟನೆಯನ್ನು ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಐಐಐಟಿ ನಿರ್ದೇಶಕರಾದ ಡಾ.ಎಸ್.ಆರ್ ಮಹದೇವ ಪ್ರಸನ್ನ ಉದ್ಘಾಟಿಸಿ, ಪ್ರಧಾನ ಭಾಷಣ ಮಾಡಲಿದ್ದಾರೆ. ಡಾ. ಮಹೇಶ್ ಬಿ.ಆರ್..ಪಂಡಿತ್, ಡಾ. ಎಂ.ಎ.ರಾಜನ್, ಡಾ.ದಿಲೀಪ್ ಕುಮಾರ್.ಎಸ್.ಎಂ., ಡಾ.ಶ್ರೀಧರ್.ಕೆ.ಎಸ್ ರವರು ದಿಕ್ಕೂಚಿ ಭಾಷಣವನ್ನು ಮಾಡಲಿದ್ದಾರೆ.ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ.ಶಿವಕುಮಾರಯ್ಯ ಉಪಸ್ಥಿತರಿರುತ್ತಾರೆ. ಶ್ರೀಸಿದ್ಧಗಂಗಾ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಯುತ ಟಿ ಕೆ ನಂಜುಂಡಪ್ಪನವರು ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದು ವಿವರ ನೀಡಿದರು.

ಸೆಪ್ಟಂಬರ್ 27ರ ಮಧ್ಯಾಹ್ನ 3.30 ಗಂಟೆಗೆ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಆ ತಾಂತ್ರಿಕ ಶಿಕ್ಷಣಪರಿಷತ್ (AICTE) ನವದೆಹಲಿ ಯ ಸಲಹಗಾರರ ಡಾ.ಎನ್.ಹೆಚ್.ಸಿದ್ದಲಿಂಗಸ್ವಾಮಿರವರು ಸಮಾರೋಪ ಭಾಷಣವನ್ನು ಮಾಡಲಿದ್ದಾರೆ. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಿದ್ದಗಂಗಾ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ.ಶಿವಕುಮಾರಯ್ಯ ವಹಿಸಲಿದ್ದಾರೆ. ರಾಜ್ಯ ಮತ್ತು ರಾಷ್ಟ್ರದ ವಿವಿಧ ಕಾಲೇಜುಗಳಿಂದ – ಸಂಶೋಧನಾರ್ತಿಗಳು, ಅಧ್ಯಾಪಕರು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಟಿ.ಬಿ.ನಿಜಲಿಂಗಪ್ಪ, ಸಮ್ಮೇಳನದ ಸಂಚಾಲಕರಾದ ಡಾ.ಮಮತ, ಸಹ ಸಂಚಾಲಕರಾದ ಪ್ರೊ.ಸರ್ವ ಮಂಗಳ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *