ತುಮಕೂರು:ಕರ್ನಾಟಕ ರಾಜ್ಯ ಲಿಂಗಾಯತ ಮಠಾಧೀಶರ ಒಕ್ಕೂಟವು ಬಸವಣ್ಣನವರ ತತ್ವಾದರ್ಶಗಳ ಬಗ್ಗೆ ಜಾಗೃತಿ’ ಮೂಡಿಸುವ ಉದ್ದೇಶದಿಂದ ಇಡೀ ರಾಜ್ಯಾದ್ಯಂತ ಸೆಪ್ಟೆಂಬರ್ 1 ರಿಂದ ಸೆಪ್ಟೆಂಬರ್ 30 ರವರೆಗೆ ಬಸವ ಸಂಸ್ಕೃತಿ ಅಭಿಯಾನವನ್ನು ಸೆಪ್ಟಂಬರ್ 27 ರಂದು ತುಮಕೂರು ಜಿಲ್ಲೆಗೆ ಆಗಮಿಸುತಿದ್ದು,ಅಂದು ಜಿಲ್ಲಾ ಲಿಂಗಾಯಿತ ಮಠಾಧೀಶರ ಒಕ್ಕೂಟದವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಭಿಯಾನ ಸಮಿತಿ ತುಮಕೂರು ಜಿಲ್ಲಾಧ್ಯಕ್ಷರಾದ ಬೆಟ್ಟದಹಳ್ಳಿ ಮಠದ ಶ್ರೀಚಂದ್ರಶೇಖರಸ್ವಾಮೀಜಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ರಾಮನಗರದಿಂದ ಆಗಮಿಸುವ ಅಭಿಯಾನದ ರಥವನ್ನು ತುಮಕೂರಿನ ಮರಳೂರು ಕೆರೆ ಬಳಿಯ ವಾಲ್ಮೀಕಿ ವೃತ್ತದಲ್ಲಿ ಸ್ವಾಗತಿಸಲಾಗುವುದು.ತದ ನಂತರ ಅಭಿಯಾನದ ಮೆರವಣಿಗೆ, ಮಕ್ಕಳಿಗೆ ಬಸವತತ್ವದ ಕುರಿತು ಸಂವಾದ,ಬಹಿರಂಗ ಸಭೆಯನ್ನು ಆಯೋಜಿಸಲಾಗಿದ್ದು,ನಗರದ ಶ್ರೀಸಿದ್ದಿವಿನಾಯಕ ಸಮುದಾಯ ಭವನದಲ್ಲಿ ಬಹಿರಂಗ ಸಭೆ ನಡೆಯಲಿದೆ ಎಂದರು.
ಸಿದ್ಧಿ ವಿನಾಯಕ ಸಮುದಾಯ ಭವನದಲ್ಲಿ ಸೆಪ್ಟೆಂಬರ್ 27ರ ಬೆಳಗ್ಗೆ 9.30 ಕ್ಕೆ ಬೆಟ್ಟಹಳ್ಳಿ ಗವಿಮಠಾಧ್ಯಕ್ಷರಾದ ಶ್ರೀಚಂದ್ರಶೇಖರ ಸ್ವಾಮಿಗಳು ಷಟ್ಸ್ಥಲ ಧ್ವಜಾರೋಹಣ ಮಾಡುವುದರ ಮೂಲಕ ಕಾಠ್ಯಕ್ರಮಕ್ಕೆ ಚಾಲನೆ ನೀಡುವರು. ವಿವಿಧ ಮಠಾಧೀಶರು ಭಾಗವಹಿಸುವರು. ತುಮಕೂರು ಜಿಲ್ಲಾ ಜಾಗತಿಕ ಲಿಂಗಾಯಿತ ಮಹಾಸಭಾದ ಅಧ್ಯಕ್ಷ ಜಿ.ಬಿ. ನಾಗಭೂಷಣ್ ಕಾರ್ಯಕ್ರಮ ನಿರ್ವಹಿಸುವರು.
ಸೆಪ್ಟಂಬರ್ 27ರ ಬೆಳಗೆ 11 ಗಂಟೆಗೆ ವಿದ್ಯಾರ್ಥಿಗಳು ಯುವ ಜನರು ಮತ್ತು ಸಾರ್ವಜನಿಕರೊಂದಿಗೆ ವಚನ ಸಂವಾದ ಕಾಠ್ಯಕ್ರಮವನ್ನು ಏರ್ಪಡಿಸಲಾಗಿದೆ. ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಡಾ.ಬಸವಲಿಂಗ ಪಟ್ಟದೇವರು, ಸಾಣೆಹಳ್ಳಿಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ ಸ್ವಾಮಿಗಳು,ಡಂಬಳ-ಗದಗ್ನ ತೋಂಟದಾರ ಮಹಾಸಂಸ್ಕಾರ ಮಠದ ಡಾ.ತೋಂಟದ ಸಿದ್ದರಾಮ ಸ್ವಾಮಿಗಳು,ಕೂಡಲ ಸಂಗಮದ ಬಸವ ಧರ್ಮ ಪೀಠದ ಡಾ.ಗಂಗಾ ಮಾತಾಜಿ,ಸಿದ್ಧಗಂಗಾ ಮಠದ ಪೂಜ್ಯ ಶಿವಸಿದ್ಧೇಶ್ವರ ಸ್ವಾಮಿಗಳು,ತುಮಕೂರು ಜಿಲ್ಲೆಯ ಮಠಾಧಿಪತಿಗಳಾದ ಅಭಿನವ ಮಲ್ಲಿಕಾರ್ಜುನ ಸ್ವಾಮಿಗಳು,ಕಾರದ ವೀರಬಸವ ಸ್ವಾಮಿಗಳು,ಸಿದ್ಧರಾಮ ದೇಶೀಕೇಂದ್ರ ಸ್ವಾಮಿಗಳು, ರುದ್ರಮುನಿ ಸ್ವಾಮಿಗಳು ಸಂವಾದದಲ್ಲಿ ಪಾಲ್ಗೊಳ್ಳುವರು.ಕಾರ್ಯಕ್ರಮಕ್ಕೆ ವಿಶೇಷ ಅಹ್ವಾನಿತರಾಗಿ ಮಾಜಿ ಮಂತ್ರಿಗಳಾದ ಸೊಗಡು ಶಿವಣ್ಣ,ವಿದ್ಯಾವಾಹಿನಿ ವಿದ್ಯಾಸಂಸ್ಥೆ ಕಾಯದರ್ಶಿ ಎನ್.ಬಿ.ಪ್ರದೀಪಕುಮಾರ್ ಹಾಗು ಡಾ. ಹಾಲನೂರು ಲೇಪಾಕ್ಷ ಅವರುಗಳು ಭಾಗವಹಿಸಲಿದ್ದಾರೆ ಎಂದು ಶ್ರೀಬೆಟ್ಟದಹಳ್ಳಿ ಸ್ವಾಮೀಜಿ ತಿಳಿಸಿದರು.
ಅಭಿಯಾನದ ಮೆರವಣಿಗೆ ಸಮಿತಿ ಅಧ್ಯಕ್ಷ ರಾಯಸಂದ್ರ ರವಿಕುಮಾರ್ ಮಾತನಾಡಿ, ಸೆಪ್ಟಂಬರ್ 27ರ ಮದ್ಯಾಹ್ನ 2-30 ಕ್ಕೆ ಜಯದೇವ ಮುರುಘರಾಜೇಂದ್ರ ಹಾಸ್ಟಲ್ ಆವರಣದಿಂದ ಬಸವ ಸಂಸ್ಕೃತಿ ಅಭಿಯಾನದ ರಥದ ಮೆರವಣಿಗೆಯು ಮಠಾಧೀಶರ ನೇತೃತ್ವದಲ್ಲಿ ಆರಂಭವಾಗುವುದು.ಇದಕ್ಕೆ ನಗರದ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ಚಾಲನೆ ನೀಡುವರು ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗಸ್ವಾಮಿಗಳು,ಚಂದ್ರೇಖರಸ್ವಾಮಿಗಳು, ಭಾಲ್ಕಿ, ಗದಗ-ಡಂಬಳ, ಸಾನಹಳ್ಳಿ ಬಸವ ಧರ್ಮಪೀಠದ ಶ್ರೀಗಳು ವಿದ್ಯಾಶಂಕರ ದೇಶೀಕೇಂದ್ರ ಸ್ವಾಮಿಗಳು, ಕಲ್ಕೆರೆ ಮಠದ ತಿಪ್ಪೇರುದ್ರ ಸ್ವಾಮಿಗಳು ಪಾಲ್ಗೊಳ್ಳುವರು. ಡಾ.ಪರಮೇಶ್, ಕೆ.ಎಸ್.ಸಿದ್ದಲಿಂಗಪ್ಪ ಎಂ.ಜಿ.ಸಿದ್ದರಾಮಯ್ಯ ಉಪಸ್ಥಿತರಿರುವರು.ಈ ಮೆರವಣಿಗೆಯು ಜಾನಪದ ಕಲಾ ತಂಡಗಳೊಂದಿಗೆ ಎಂ.ಜಿ. ರಸ್ತೆ, ಗುಂಚಿ ವೃತ್ತ, ಸ್ವಾತಂತ್ರ್ಯ ಚೌಕ, ಅಶೋಕ ರಸ್ತೆ, ಬಾಲಗಂಗಾಧರನಾಥ ಸ್ವಾಮಿ ವೃತ್ತ, ಕೆ. ಲಕ್ಕಪ್ಪ ವೃತ್ತದಲ್ಲಿ ಹಾದು ಬಿ.ಹೆಚ್. ರಸ್ತೆಯಿಂದ ಸಿದ್ದಿವಿನಾಯಕ ಸಮುದಾಯ ಭವನ ತಲುಪುವುದು.ಮೆರವಣಿಗೆಯಲ್ಲಿ ಬಸವತತ್ವ ಪ್ರಚುರ ಪಡಿಸುವ ವಿವಿಧ ಕಲಾಕೃತಿಗಳು, ವಿವಿಧ ವೇಷ ಭೂಷಣಗಳನ್ನು ತೊಟ್ಟ ಯುವಜನರು ಪಾಲ್ಗೊಳ್ಳಲಿದ್ದಾರೆ ಎಂದರು.
ಸಂಜೆ 5-30ಕ್ಕೆ ಸಿದ್ದಗಂಗಾ ಮಠದ ಶ್ರೀಸಿದ್ದಲಿಂಗ ಸ್ವಾಮಿಗಳ ದಿವ್ಯಸಾನ್ನಿಧ್ಯದಲ್ಲಿ ಸಾರ್ವಜನಿಕ ಸಮಾವೇಶ ಏರ್ಪಾಟಾಗಿದೆ. ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ.ಸೋಮಣ್ಣ ಉದ್ಘಾಟಿಸುವರು.ಕೆರೆಗೋಡಿ ರಂಗಾಪುರದ ಗುರುಪರದೇಶೀಕೇಂದ್ರ ಸ್ವಾಮಿಗಳು, ತಿಪಟೂರಿನ ಗುರುಕುಲಾನಂದಾಶ್ರಮದ ಇಮ್ಮಡಿ ಕರಿಬಸವ ದೇಶೀಕೇಂದ್ರ ಸ್ವಾಮಿಗಳು, ತುಮಕೂರು ಹಿರೇಮಠದ ಡಾ.ಶಿವಾನಂದ ಶಿವಾಚಾರ ಸ್ವಾಮಿಗಳು ಅಂಕನಹಳ್ಳಿಮಠದ ಶಿವರುದ್ರಶಿವಾಚಾರ ಸ್ವಾಮಿಗಳು ಬೆಟ್ಟಹಳ್ಳಿಮಠದ ಚಂದ್ರಶೇಖರ ಶಿವಾಚಾರ ಸ್ವಾಮಿಗಳು ಭಾಗವಹಿಸುವರು ಗವಿಮಠಾಧ್ಯಕ್ಷರಾದ ಚಂದ್ರಶೇಖರ ಸ್ವಾಮಿಗಳು ಆಶಯ ನುಡಿಗಳನ್ನಾಡುವರು.ತಿಪಟೂರು ಕ್ಷೇತ್ರದ ಶಾಸಕರಾದ ಕೆ. ಷಡಕ್ಷರಿಯವರು ಡಾ. ಬಿ.ಸಿ. ಶೈಲಾನಾಗರಾಜ್ರವರ ಬಸವ ಸಂಸ್ಕೃತಿ ಕೃತಿ ಬಿಡುಗಡೆ ಮಾಡುವರು.ಬೈಲೂರಿನ ನಿಷ್ಕಲ ಮಂಟಪದ ಶ್ರೀನಿಜಗುಣಪ್ರಭು ತೋಂಟದಾರ ಸ್ವಾಮಿಗಳು ಏಕದೇವತಾನಿμÉ್ಠ ಕುರಿತು ಉಪನ್ಯಾಸ ನೀಡುವರು.ಚನ್ನೈನ ಪ್ರಾಧ್ಯಾಪಕಿ ತಮಿಳ್ಸೆಲ್ವಿ ವಚನ ಮಾಂಗಲ್ಯ ಕುರಿತು ವಿಶೇಷ ಉಪನ್ಯಾಸ ನೀಡುವರು.
ಮಾಜಿ ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು,ಸಿದ್ದಗಂಗಾ ವಿದ್ಯಾಸಂಸ್ಥೆ ಕಾಯದರ್ಶಿ ಟಿ.ಕೆ. ನಂಜುಂಡಪ್ಪ, ನ್ಯಾಯಮೂರ್ತಿ ಎಸ್.ಎನ್ ಕೆಂಪಗೌಡರ್ ಉಪಸ್ಥಿರಿರುವರು. ರಾತ್ರಿ 8 ಗಂಟೆಗೆ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ರಚಿಸಿರುವ ಜಂಗಮದೆಡೆಗೆ ನಾಟಕ ಪ್ರದರ್ಶಿಸಲಾಗುವುದು.ಸಾಣೆಹಳ್ಳಿಯ ಶಿವಸಂಚಾರ ಕಲಾತಂಡದವರ ಅಭಿನಯ ಆರ್. ಜಗದೀಶ್ರವರ ನಿರ್ದೇಶನವಿರುತ್ತದೆ.ಈ ಎಲ್ಲಾ ಕಾರ್ಯಕ್ರಮಗಳಿಗೆ ಬಸವಾನುಯಾಯಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀಷಡಕ್ಷರ ಸ್ವಾಮೀಜಿ, ಡಾ.ಯೋಗೀಶ್ವರಪ್ಪ, ಹಾಲೆನೂರು ಲೇಪಾಕ್ಷ, ಡಾ.ಶೈಲಾ ನಾಗರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.