ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಸಂಸ್ಥಾಪಕರ ಪುಣ್ಯಾನುಮೋದನಾ ಆಚರಣೆ

ತುಮಕೂರು: ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಶಿಕ್ಷಣ ಭೀಷ್ಮ ಡಾ. ಹೆಚ್. ಎಂ. ಗಂಗಾಧರಯ್ಯನವರ 30ನೇ ಹಾಗೂ ಧರ್ಮಪತ್ನಿ ಗಂಗಮಾಳಮ್ಮನವರ 22ನೇ ಮತ್ತು ನಿಕಟಪೂರ್ವ ಕಾರ್ಯದರ್ಶಿಗಳಾದ ಡಾ. ಜಿ. ಶಿವಪ್ರಸಾದ್‍ರವರ 8ನೇ ಪುಣ್ಯಸ್ಮರಣೆಯು ಸ್ವಗ್ರಾಮ ಗೊಲ್ಲಹಳ್ಳಿಯಲ್ಲಿ ಕುಟುಂಬ ಹಾಗೂ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಿಂದ ನೆರವೇರಿಸಲಾಯಿತು.

ಬಿಜಾಪುರದಿಂದ ಬಂದಂತಹ ಬೌದ್ಧ ಬಿಕ್ಕುಗಳು ಬೌದ್ಧ ಭಿಕ್ಕು ಬಂತೇಜಿ ಮಹಾಸಂಘದ ಸಮ್ಮುಖದಲ್ಲಿ ಶಿಕ್ಷಣ ಭೀಷ್ಮ ಡಾ. ಹೆಚ್.ಎಂ. ಗಂಗಾಗಧರಯ್ಯ ಹಾಗೂ ಧರ್ಮಪತ್ನಿ ಗಂಗಮಾಳಮ್ಮ ಹಾಗೂ ಡಾ. ಶಿವಪ್ರಸಾದ್ ರವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥನೆ ಸಲ್ಲಿಸಿದರು. ಬೌದ್ಧ ಬಿಕ್ಕುಗಳಿಂದ ಪುಣ್ಯಾನುಮೋದನಾ ಸ್ಮರಣೆ ಮತ್ತು ನುಡಿ ನಮನವನ್ನು ಸಲ್ಲಿಸಲಾಯಿತು. ಸ್ಥಳದಲ್ಲಿ ನೆರೆದಿದ್ದವರು ಗೌರವ ಪೂರ್ವಕವಾಗಿ ಒಂದು ನಿಮಿಷಗಳ ಕಾಲ ಮೌನ ಆಚರಿಸಿದರು.

ಸಮಾಧಿಗೆ ಪೂಜೆ ಸಲ್ಲಿಸಿ ಪುಷ್ಪಮಾಲೆ ಸಲ್ಲಿಸುವ ಮೂಲಕ ಧಾರ್ಮಿಕ ಕೈಂಕರ್ಯಗಳನ್ನು ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಹಾಗೂ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ಹಾಗೂ ಶ್ರೀಮತಿ ಕನ್ನಿಕಾಪರಮೇಶ್ವರಿ ಹಾಗೂ ಕುಟುಂಬ ಸದಸ್ಯರು ಬೌದ್ಧ ಸಂಪ್ರಾದಾಯದ ವಿಧಿ ವಿಧಾನಗಳ ಪೂರೈಸಿದರು. ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಎಚ್.ಕೆ.ಕುಮಾರಸ್ವಾಮಿ, ಆಡಳಿತಾಧಿಕಾರಿ ನಂಜುಂಡಪ್ಪ ಹಾಗೂ ಎಲ್ಲಾ ಸದಸ್ಯರುಗಳು ಹಾಜರಿದ್ದರು. ತುಮಕೂರಿನ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಅಶೋಕ್, ಸೇರಿದಂತೆ ಪ್ರಮುಖರು ಪಾಲ್ಗೊಂಡರು.

ಈ ಸಂದರ್ಭದಲ್ಲಿ ಸಾಹೇ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಕೆ. ಬಿ. ಲಿಂಗೇಗೌಡ, ಶ್ರೀಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ಪ್ರಭಾಕರ್, ಪರೀಕ್ಷಾಂಗ ನಿಯಂತ್ರಕರಾದ ಡಾ. ಗುರುಶಂಕರ್ ಹಾಗೂ ಶ್ರೀ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ. ಎಸ್ ರವಿಪ್ರಕಾಶ್ ಹಾಗೂ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಬೋಧಕ-ಬೋಧಕೇತರ ವರ್ಗ ಸೇರಿದಂತೆ ಅಂಗ ಸಂಸ್ಥೆಗಳ ಮುಖ್ಯಸ್ಥರುಗಳು, ಅಧ್ಯಾಪಕರು, ಪ್ರಾಥಮಿಕ ಮತ್ತು ಫ್ರೌಢಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಅನ್ನಸಂತರ್ಪಣೆ :

ಶಿಕ್ಷಣ ಭೀಷ್ಮ ಡಾ.ಹೆಚ್.ಎಂ.ಗಂಗಾಧರಯ್ಯ ಅವರ 30ನೇ, ಶ್ರೀ ಮತಿ ಗಂಗಮಾಳಮ್ಮ ಗಂಗಾಧರಯ್ಯ ಅವರು 22ನೇ ಹಾಗು ಡಾ.ಜಿ.ಶಿವಪ್ರಸಾದ್ ಅವರ 08 ನೇ ಪುಣ್ಯ ಸ್ಮರಣೆ ಅಂಗವಾಗಿ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಹಳೆಯ ವಿದ್ಯಾರ್ಥಿ ಮಿನರ್ವ ಮಂಜುನಾಥ್ ( ಕಟ್ಟೆ ಮಂಜು) ಅವರು ನಗರದ ಶ್ರೀಬಾಲಗಂಗಾಧರನಾಥ ಸ್ವಾಮೀಜಿಗಳ ವೃತ್ತದಲ್ಲಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಆಯೋಜಿಸಿದ್ದರು.

ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಡಾ.ಸಂಜೀವಕುಮಾರ್, ಸಿದ್ದಾರ್ಥ ಅಕಾಡೆಮಿ ಅಫ್ ಹೈಯರ್ ಎಜುಕೇಷನ್ ಇದರ ಉಪ ಕುಲಪತಿಗಳಾದ ಡಾ.ಲಿಂಗೇಗೌಡ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ, ಪಾಲಿಕೆ ಮಾಜಿ ವಿರೋಧಪಕ್ಷದ ನಾಯಕ ಕೆ.ಕುಮಾರ್, ಹರ್ತಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಬಿ.ಎಸ್.ದಿನೇಶ್, ಗ್ರಾಮಾಂತರ ಕಾಂಗ್ರೆಸ್ ಮುಖಂಡರಾದ ಕೆಂಪಣ್ಣ, ನ್ಯಾತೇಗೌಡ, ಪೈಲ್ವಾನ್ ಮಹೇಶ್, ಕಾರ್ಯಕ್ರಮ ಆಯೋಜಕರಾದ ಮಿನರ್ವ ಮಂಜು ಸಾರ್ವಜನಿಕರಿಗೆ ಊಟ ಬಡಿಸುವ ಮೂಲಕ ಅನ್ನ ಸಂತರ್ಪಣೆ ಕಾರ್ಯಕ್ಕೆ ಚಾಲನೆ ನೀಡಿದರು.

Leave a Reply

Your email address will not be published. Required fields are marked *