ತುಮಕೂರು : ಸಾಹಿತ್ಯಾಭಿರುಚಿ ಬೆಳೆಸಿಕೊಳ್ಳಲು ಯುವ ಪೀಳಿಗೆಗೆ ಹೆಚ್ಚಿನ ಉತ್ತೇಜನ ನೀಡುವುದರಿಂದ ಸಾಹಿತ್ಯ ಕ್ಷೇತ್ರ ಚೇತರಿಸಿಕೊಳ್ಳುತ್ತದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಹೇಳಿದರು.
ಗುಬ್ಬಿ ಪಟ್ಟಣದ ಡಾ: ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಶುಕ್ರವಾರ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನಮ್ಮಲ್ಲೇ ಪ್ರಶಸ್ತಿ ಸಮಾರಂಭ ಆಯೋಜಿಸಲು ಅವಕಾಶ ಸಿಕ್ಕಿರುವುದು ಅತ್ಯಂತ ಸಂತೋಷಕರ ಘಟನೆ ಎಂದು ಅವರು ಹೇಳಿದರು. ಚಿಕ್ಕ ವಯಸ್ಸಿನಿಂದಲೇ ಮಕ್ಕಳು ಬರವಣಿಗೆ ಅಭ್ಯಾಸ ರೂಢಿಸಿಕೊಂಡರೆ ಸಂವೇದನಾಶೀಲ ಸಮಾಜವನ್ನು ನಿರ್ಮಾಣ ಮಾಡಬಹುದು ಎಂದು ಅಭಿಪ್ರಾಯಪಟ್ಟರು.
ಸಾಹಿತಿಗಳು ಪುಸ್ತಕಗಳನ್ನು ಓದುತ್ತಾ, ಬರಹಗಳನ್ನು ಬರೆಯುತ್ತಾ ತಮ್ಮದೇ ಆದ ಪ್ರಪಂಚವನ್ನು ನಿರ್ಮಿಸಿಕೊಂಡು ಅದರಲ್ಲಿ ತಲ್ಲೀನರಾಗಿರುತ್ತಾರೆ. ಯಾವುದೇ ಕ್ಷೇತ್ರದಲ್ಲಾದರೂ ತಮ್ಮ ಅಭಿರುಚಿಯನ್ನು ಗುರುತಿಸಿ, ಅದರಲ್ಲಿ ನಿಷ್ಠೆಯಿಂದ ತೊಡಗಿಸಿಕೊಂಡಾಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಾಹಿತ್ಯಕ್ಕೆ ಹೆಚ್ಚಿನ ಅನುದಾನ ಮತ್ತು ಪ್ರೋತ್ಸಾಹ ದೊರಕಿದರೆ ಸಾಹಿತ್ಯ ಲೋಕ ಇನ್ನಷ್ಟು ಅಭಿವೃದ್ಧಿ ಹೊಂದಿ ಹೊಸ ಪ್ರತಿಭೆಗಳು ಹೊರಹೊಮ್ಮಲು ಅವಕಾಶವಾಗುತ್ತದೆ ಎಂದು ಹೇಳಿದರು.
ಮಾಜಿ ಸಂಸದರು ಹಾಗೂ ಗುಬ್ಬಿ ವೀರಣ್ಣ ಟ್ರಸ್ಟ್ನ ಅಧ್ಯಕ್ಷರಾದ ಡಾ: ಬಿ. ಜಯಶ್ರೀ ಅವರು ಮಾತನಾಡಿ, ಗುಬ್ಬಿಯಲ್ಲಿ ನಿರ್ಮಿಸಲಾದ ರಂಗಮಂದಿರವು ನಾಟಕಗಳಿಗಾಗಿ ಸಮರ್ಪಕವಾಗಿ ಬಳಸಲಾಗುತ್ತಿರಲಿಲ್ಲವೆಂಬ ವಿಷಾದ ನನಗಿತ್ತು. ಆದರೆ ಇಂದಿನ ಈ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮದ ಮೂಲಕ ಆ ರಂಗಮಂದಿರವು ನಿಜವಾದ ಅರ್ಥದಲ್ಲಿ ಪಾವನವಾಯಿತು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜ್ಞಾನ ಪೀಠ ಪುರಸ್ಕøತ, ಡಾ: ಚಂದ್ರ ಶೇಖರ್ ಕಂಬಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ ಗಾಯತ್ರಿ, ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಕರಿಯಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು. ಮಿರ್ಜಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ ಉಪಸ್ಥಿತರಿದ್ದರು.
ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕøತರು :
2024ನೇ ವರ್ಷದ ಗೌರವ ಪ್ರಶಸ್ತಿ : ಡಾ: ಎಂ.ಬಸವಣ್ಣ, ಶೂದ್ರ ಶ್ರೀನಿವಾಸ್, ಪ್ರತಿಭಾ ನಂದಕುಮಾರ್, ಡಾ: ಡಿ.ಬಿ.ನಾಯಕ, ಡಾ.ವಿಶ್ವನಾಥ್ ಕಾರ್ನಾಡ್; ಸಾಹಿತ್ಯಶ್ರೀ ಪುರಸ್ಕಾರ : ಡಾ: ಬಿ.ಎಂ.ಪುಟ್ಟಯ್ಯ, ಪದ್ಮಾಲಯ ನಾಗರಾಜ್, ಡಾ: ಕೆ.ವೈ. ನಾರಾಯಣಸ್ವಾಮಿ, ಡಾ: ಸಬಿತಾ ಬನ್ನಾಡಿ, ಡಾ: ಮಮತಾ ಜಿ.ಸಾಗರ, ಡಾ: ಗುರುಲಿಂಗಪ್ಪ ಧಬಾಲೆ, ಅಬ್ದುಲ್ ಹೈ ತೋರಣಗಲ್ಲು, ಡಾ: ಬಿ.ಯು. ಸುಮಾ, ಡಾ: ಎಚ್.ಎಸ್. ಅನುಪಮಾ, ಡಾ: ಅಮರೇಶ್ ಯತಗಲ್; 2023ರ ಪುಸ್ತಕ ಬಹುಮಾನ : ಡಾ: ಲಕ್ಷ್ಮಣ ವಿ.ಎ., ಡಾ: ಬಿ.ಎಂ.ಗುರುನಾಥ, ಗಂಗಪ್ಪ ತಳವಾರ್, ಮಾಧವಿ ಭಂಡಾರಿ ಕೆರೆಕೋಣ, ಡಾ: ಸಾಸ್ವೇಹಳ್ಳಿ ಸತೀಶ್, ಸರಸ್ವತಿ ಭೋಸಲೆ, ಡಾ: ಡಿ.ವಿ.ಗುರುಪ್ರಸಾದ್, ಡಾ: ಸಿ.ಚಂದ್ರಪ್ಪ, ರಂಗನಾಥ್ ಕಂಟನಕುಂಟೆ, ಮತ್ತೂರು ಸುಬ್ಬಣ್ಣ, ಡಾ: ಎಚ್.ಎಸ್.ಮೋಹನ್, ಡಾ: ಪ್ರಕಾಶ್ ಭಟ್, ಡಾ: ಮಲ್ಲಿಕಾರ್ಜುನ ಕಲಮರಹಳ್ಳಿ, ಡಾ: ಜೆ.ಪಿ.ದೊಡಮನಿ, ದೇವು ಪತ್ತಾರ್, ಸತೀಶ್ ತಿಪಟೂರು, ಗೋವಿಂದರಾಜು ಎಂ.ಕಲ್ಲೂರು; 2023ನೇ ಸಾಲಿನ ದತ್ತಿ ಬಹುಮಾನ : ಡಾ: ಲತಾ ಗುತ್ತಿ (ಕೃತಿ : ಚದುರಂಗ), ಸುಮಾ ರಮೇಶ್ (ಕೃತಿ : ಹಚ್ಚೇ ದಿನ್), ರೂಪ ಹಾಸನ (ಕೃತಿ : ಮಹಾಸಂಗ್ರಾಮಿ ಎಸ್.ಆರ್.ಹಿರೇಮಠ), ಡಾ: ಕಾತ್ಯಾಯಿನಿ ಕುಂಜಿಬೆಟ್ಟು (ಕೃತಿ : ಇರವಿನ ಅರಿವು), ಟಿ.ಜಿ. ಪುಷ್ಪಾಲತಾ(ಕೃತಿ : ಕೇದಿಗೆ), ರೋ.ಡಿ.ಸೋಜಾ (ಕೃತಿ : ಎಚ್.ಡಿ.ದೇವೇಗೌಡರ ಬದುಕು ಮತ್ತು ದುಡಿಮೆ ನೇಗಿಲ ಗೆರೆಗಳು), ಅಬ್ಬೂರು ಪ್ರಕಾಶ್(ಕೃತಿ : ಕಣ್ಣ ಕನ್ನಡಿಯಲ್ಲಿ), ಸುದೇಶ ದೊಡ್ಡಪಾಳ್ಯ (ಕೃತಿ : ಈಶಾನ್ಯ ದಿಕ್ಕಿನಿಂದ), ಸುಕಾನ್ಯ ಕನಾರಳ್ಳಿ (ಕೃತಿ : ಲವ್ ಆ್ಯಂಡ್ ವಾಟರ್ ಪ್ಲೋ ಟುಗೆದರ್).