ದೇಶದ ಭದ್ರತೆ -ಭವಿಷ್ಯಕ್ಕಾಗಿ ವಿದ್ಯಾರ್ಥಿಗಳು ಸಂಶೋಧನೆಗಳನ್ನು ನಡೆಸಬೇಕಿದೆ

ತುಮಕೂರು: ತಾಂತ್ರಿಕವಾಗಿ ದೇಶ ಬೆಳೆಯುತ್ತಿದ್ದು “ಕೃತಕ ಬುದ್ಧಿಮತ್ತೆ’ (AI) ತಂತ್ರಜ್ಞಾನದಿಂದಾಗಿ ಇನ್ಮಿಲ್ಲದ ಸಂಶೋಧನೆಗಳನ್ನು ನಡೆಯುತ್ತಿವೆ. ಬಾಹ್ಯಕಾಶ, ಆರೋಗ್ಯ, ತಂತ್ರಜ್ಞಾನ ಸೇರಿದಂತೆ ದೇಶದ ಭದ್ರತೆ ಮತ್ತು ಭವಿಷ್ಯಕ್ಕಾಗಿ ಇಂದಿನ ವಿದ್ಯಾರ್ಥಿಗಳು ಸಂಶೋಧನಾತ್ಮಕ ಅಧ್ಯಯನಗಳನ್ನು ನಡೆಸಬೇಕಾಗಿದೆ ಎಂದು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಶೋಧನಾ ಸಂಸ್ಥೆಯ ಪ್ರಾಧ್ಯಾಪಕರಾದ ಡಾ. ಶ್ರೀನಿವಾಸ ಅವರು ಅಭಿಪ್ರಾಯಪಟ್ಟರು.

ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ ಅಂಡ್ ಟೆಲಿಕಮ್ಯುನಿಕೇಶನ್ ವಿಭಾಗ ಮತ್ತು ಬೆಂಗಳೂರಿನ ಐಇಇಇ ಸಹಾಯೋಗದೊಂದಿಗೆ ಬುಧುವಾರದಂದು ಹಮ್ಮಿಕೊಳ್ಳಲಾಗಿದ್ದ ‘ 5ನೇ ಐಇಇಇ (IEEE) ಅಂತರಾಷ್ಟ್ರೀಯ ಮೊಬೈಲ್ ನೆಟ್ವರ್ಕ್ ಅಂಡ್ ಟೆಲಿ ಕಮ್ಯುನಿಕೇಷನ್ಸ್-2025 ಸಮ್ಮೇಳನದಲ್ಲಿ ಮುಖ್ಯ ಅಥಿತಿಗಳಾಗಿ ಮಾತನಾಡಿದ ಅವರು, ದೇಶದಲ್ಲಿ ತಂತ್ರಜ್ಞಾನ ಬೆಳೆಯುತ್ತಿದ್ದರೂ ಅದರಲ್ಲಿನ ಲೋಪ ದೋಷಗಳು ಮತ್ತು ಸಮಸ್ಯೆ ಸವಾಲುಗಳು ಎದುರಾಗುತ್ತಿವೆ. ಸೈಬೈರ್ ಕ್ರೈಂ ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ಸುರಕ್ಷತಾ ಹಾದಿಯನ್ನು ಕಂಡುಕೊಳ್ಳುವ ಸಲುವಾಗಿ ವಿದ್ಯಾರ್ಥಿಗಳು ಕಲಿಯುವ ಹಂತದಲ್ಲಿಯೇ ಸಂಶೋಧನಾತ್ಮಕವಾಗಿ ಅಧ್ಯಯನಶೀಲರಾದರೆ ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶೀ ತಂತ್ರಜ್ಞಾನವನ್ನು ಮುಂಚೂಣಿಗೆ ತರಬಹುದು ಎಂದರು.

ಐಇಇಇ (IEEE) ಸಂಸ್ಥೆಯ ಉಪಾಧ್ಯಕ್ಷರಾದ ಡಾ.ಚಂಗಪ್ಪ ಎಂ.ಆರ್ ಅವರು ಮಾತನಾಡಿ, ತಂತ್ರಜ್ಞಾನ ಹಲವು ಮಜಲುಗಳಲ್ಲಿ ಬೆಳೆಯುತ್ತಿದೆ. ವೈಯಕ್ತಿಕ ಮತ್ತು ಭದ್ರತಾ ಗೌಪ್ಯತೆಗಳನ್ನು ಕಾಪಾಡಲು ಮೊಬೈಲ್ ನೆಟ್ವರ್ಕ್ ಹಾಗೂ ರಿಸರ್ಚ್ ಟೆಲಿ ಕಮ್ಯುನಿಕೇಷನ್ ಅಗತ್ಯವಿದೆ. ಇನ್ನಷ್ಟು ಬೆಳವಣಿಗೆ ಹೊಂದಲು ಇಂದಿನ ಡಿಜಿಟಲ್ ಮಾರ್ಗ ಉಪಯುಕ್ತವಾಗಿದ್ದು, ಇದರಲ್ಲಿ ಹೊಸ ಹೊಸ ಸವಾಲುಗಳನ್ನ ನಾವು ಎದುರಿಸಬೇಕಿದೆ ಎಂದರು.
ಜಗತ್ತು ಪ್ರತಿಕ್ಷಣಕ್ಕೂ ಒಂದೊಂದು ಆವಿಷ್ಕಾರವನ್ನು ಹೊರಹಾಕುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ನಿರಂತರ ಸಂಶೋಧನೆ ನಡೆಸಿದಾಗ ನವ ಉದ್ಯಮವನ್ನು ಚಿಂತನೆಗಳು ದೊರಕುತ್ತವೆ. ಆಗ ಗ್ರಾಮೀಣ-ನಗರ ಪ್ರದೇಶಗಳಲ್ಲಿ ಉದ್ಯೋಗವಕಾಶಗಳನ್ನು ಸೃಷ್ಟಿಸಿ ದೇಶದ ಬೆಳವಣಿಗೆಗೆ ಪೂರಕವಾಗಿ ನಮ್ಮ ತಂತ್ರಜ್ಞಾನವನ್ನು ಧಾರೆ ಎರೆಯಬಹುದು ಎಂದು ಡಾ.ಚಂಗಪ್ಪ ತಿಳಿಸಿದರು.

ಅಬುದಾಬಿಯ ಮೊಹಮ್ಮದ್ ಬಿನ್ ಜೆಯೆಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ನವೀನ್ ಕುಮಾರ್ ಮಾತನಾಡಿ ತಾಂತ್ರಿಕವಾಗಿ ಹೊರಹೊಮ್ಮುವ ವಿದ್ಯಾರ್ಥಿಗಳಿಗೆ ಇಂದು ಸಾಧಿಸಬೇಕಾದಷ್ಟು ಅವಕಾಶಗಳನ್ನು ತಂತ್ರಜ್ಞಾನ ಒದಗಿಸುತ್ತಿದೆ. ದೇಶ-ವಿದೇಶ ತಿರುಗಿ ನೋಡುವಂತಹ ಸಾಧನೆಯನ್ನು ನಾವು ಮಾಡಬೇಕಾಗಿದೆ. ತಾಂತ್ರಿಕವಾಗಿ ಉಪಯೋಗವಾಗುವ ಕಾರ್ಯಗಾರಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ಅವರ ಬೌದ್ಧಿಕ ಬುದ್ಧಿ ಮಟ್ಟ ಹೆಚ್ಚಾಗಿ, ಹೊಸ ಹೊಸ ಆವಿಷ್ಕಾರದ ಗುಂಗು ತಲೆಯಲ್ಲಿ ಹೊಳೆಯುತ್ತದೆ ಎಂದರು.
ಸಾಹೇ ವಿವಿಯ ಡಾ.ಕೆ.ಬಿ.ಲಿಂಗೇಗೌಡ,ಸಾಹೇ ರಿಜಿಸ್ಟರ್ ಡಾ. ಅಶೋಕ್ ಮೆಹ್ತಾ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಇಟಲಿಯ ವಿವಿ ವಿದ್ಯುತ್ ಮತ್ತು ಮಾಹಿತಿ ಎಂಜಿನಿಯರಿಂಗ್‍ನ ಪ್ರಾಧ್ಯಾಪಕರಾದ ಪ್ರೊ. ಲೂಸಿಯಾನೊ ಮೆಸ್ಸಿಯಾ, ಪೋರ್ಚುಗಲ್‍ನ ಪೋರ್ಚುಕಲೆನ್ಸ್ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ. ಫನಾರ್ಂಡೊ ಮೊರೈರಾ, ಇಟಲಿ ರೋಮ್ ವಿಶ್ವವಿದ್ಯಾಲಯದ ಡಾ. ಅಲೆಸ್ಸಾಂಡ್ರೊ ವಿಝಾರಿ ಅವರುಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು.

ಕಾರ್ಯಗಾರದಲ್ಲಿ ಸೀನಿಯರ್ ಇಂಜಿನಿಯರ್ ಮ್ಯಾನೇಜರ್ ಚಂದ್ರಶೇಖರ್ ಬಿ.ಎಸ್, ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ.ಎಸ್.ರವಿಪ್ರಕಾಶ್, ಅಂತಾರಾಷ್ಟ್ರೀ ಮಟ್ಟದ ಸಮ್ಮೇಳನದ ಸಂಘಟನಾ ಅಧ್ಯಕ್ಷರು ಹಾಗೂ ಎಲೆಕ್ಟ್ರಾನಿಕ್ ಅಂಡ್ ಟೆಲಿ ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥರು ಆದ ಡಾ.ಸವಿತಾ ಡಿ ತೋರವಿ ಸೇರಿದಂತೆ ಇಂಜಿನಿಯರಿಂಗ್ ವಿಭಾಗದ ವಿವಿಧ ಮುಖ್ಯಸ್ಥರುಗಳು, ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಈ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಇಟಲಿ, ಜರ್ಮನಿ, ಅಮೇರಿಕಾ, ಲಂಡನ್, ಜಪಾನ್, ಚೀನಾ ಸೇರಿದಂತೆ ದೇಶ-ವಿದೇಶದಿಂದ 2000 ಕ್ಕೂ ಹೆಚ್ಚು ಪ್ರಬಂದಗಳು ಸಲ್ಲಿಕೆಯಾಗಿದ್ದವು. ಅವುಗಳಲ್ಲಿ 256 ಪ್ರಬಂಧಗಳನ್ನು ಪ್ರಕಟಣೆಗೆ ಆಯ್ಕೆ ಮಾಡಲಾಗಯಿತು. ಇವುಗಳಲ್ಲಿ 112 ಅಂತಾರಾಷ್ಟ್ರೀಯ ಮಟ್ಟದಲ್ಲಿನ ಸಂಪನ್ಮೂಲ ವ್ಯಕಿಗಳು ಮಂಡಿಸಿದ ಪ್ರಬಂಧಗಳಾಗಿದ್ದವು.

Leave a Reply

Your email address will not be published. Required fields are marked *