ಸವಿತಾ ಸಮಾಜದಿಂದ ವಧು-ವರರ ಅನ್ವೇಷಣಾ ಕೇಂದ್ರ ಉದ್ಘಾಟನೆ

ತುಮಕೂರು : ತುಮಕೂರು ನಗರದ ಗಾರ್ಡನ್ ರಸ್ತೆಯಲ್ಲಿರುವ ಸವಿತಾ ಸಮಾಜ ಜಿಲ್ಲಾ ಸಂಪರ್ಕ ಕೇಂದ್ರದ ವತಿಯಿಂದ ಇಂದು ಸವಿತಾ ಸಮಾಜದ ಅವಿವಾಹಿತರ ಅನುಕೂಲಕಕ್ಕಾಗಿ ವಧು-ವರರ ಅನ್ವೇಷಣಾ ಕೇಂದ್ರವನ್ನು ಇಂದು ಸವಿತಾ ಸಮಾಜ ಯುವಪಡೆಯ ಜಿಲ್ಲಾಧ್ಯಕ್ಷರಾದ ಕಟ್‍ವೆಲ್ ರಂಗನಾಥ್ ಅವರ ನೇತೃತ್ವದಲ್ಲಿ ಉದ್ಘಾಟನೆಯನ್ನು ಮಾಡಲಾಯಿತು.

ಕಟ್‍ವೆಲ್ ರಂಗನಾಥ್‍ರವರು ಮಾತನಾಡುತ್ತಾ ಪ್ರಸ್ತುತದ ದಿನಗಳಲ್ಲಿ ನಮ್ಮ ಸಮಾಜದಲ್ಲಿ ವಿವಾಹದ ವಯಸ್ಸಿಗೆ ಬಂದಿರುವ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಜಾತಕ ಹೊಂದಾಣಿಕೆ, ಪರಸ್ಪರ ಅನ್ವೇಷಣೆ ಮಾಡುವುದು ತುಂಬಾ ಕಷ್ಟಕರವಾಗುತ್ತಿದೆ, ಸರಿಯಾದ ಜೋಡಿ ಸಿಗುವಲ್ಲಿ ಬಹಳ ಕಷ್ಟವನ್ನು ಅನುಭವಿಸುತ್ತಿರುವುದನ್ನು ಮನಗಂಡು ನಮ್ಮ ಸಮಾಜದ ಜಿಲ್ಲೆಯಲ್ಲಿನ ಹಲವಾರು ಹಿರಿಯರ ಮಾರ್ಗದರ್ಶನ ಮತ್ತು ಸಹಕಾರದೊಂದಿಗೆ ಇಂದು ವಧು-ವರರ ಅನ್ವೇಷಣಾ ಕೇಂದ್ರವನ್ನು ತೆರೆಯಲಾಗಿದ್ದು, ಮದುವೆ ಅನ್ವೇಷಣೆ ಮಾಡುತ್ತಿರುವ ಸವಿತಾ ಸಮಾಜದ ಬಂಧುಗಳು ನಮ್ಮ ಕಛೇರಿಗೆ ಖುದ್ದು ಭೇಟಿ ನೀಡಿ ತಮ್ಮ ವಿವರಗಳನ್ನು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು. ನಮ್ಮ ಸಂಪರ್ಕ ಕೇಂದ್ರದ ವತಿಯಿಂದ ಎರಡೂ ಕಡೆಯವರೊಟ್ಟಿಗೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುವಂತಹ ಕಾರ್ಯಗಳನ್ನು ಮಾಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆಗಮಿಸಿದ್ದ ಸವಿತಾ ಸಮಾಜದ ಹಿರಿಯರಾದ ಸ್ವದೇಶಿ ವಿಶ್ವಣ್ಣರವರು ಮಾತನಾಡುತ್ತಾ ನಮ್ಮ ಜಿಲ್ಲೆಯಲ್ಲಿ ಈ ರೀತಿಯಾದ ವಿಶಿಷ್ಟ ಕಾರ್ಯವನ್ನು ಕಟ್‍ವೆಲ್ ರಂಗನಾಥ್ ಮಾಡಿರುವುದು ನಿಜಕ್ಕೂ ಅಭಿನಂದನೀಯ ಈ ರೀತಿಯಾದ ಸೇವೆ ಅವಶ್ಯಕವಾಗಿತ್ತು, ಆದರೆ ಅದನ್ನು ಮಾಡಲು ಯಾರೂ ಸಹ ಮುಂದೆ ಬರಲಿಲ್ಲ, ಆದರೆ ಈ ವ್ಯಕ್ತಿ ಹಿರಿಯರ ಮಾರ್ಗದರ್ಶನ, ಯುವಕರ ಬೆಂಬಲದೊಂದಿಗೆ ಈ ಕಾರ್ಯಕ್ಕೆ ಮುಂದಾಗಿದ್ದಾರೆ, ಒಂದು ಜೋಡಿಯನ್ನು ಒಂದು ಮಾಡುವುದು ಎಂದರೆ ತುಂಬಾ ಕಷ್ಟಕರವಾದ ವಿಚಾರ ಆದರೆ ಅವರಿಗೆ ಮುಂದಿನ ದಿನಗಳಲ್ಲಿ ಕಷ್ಟಗಳು ಬಾರದಂತೆ ಎಲ್ಲವೂ ಸರಾಗವಾಗಿ ನಡೆಯಲಿ ಅದಕ್ಕೆ ನಮ್ಮ ಸಹಕಾರ ಸದಾ ಇರುತ್ತದೆಂದು ಶುಭ ಹಾರೈಸಿದರು.

ಗುಬ್ಬಿ ತಾಲ್ಲೂಕು ಸವಿತಾ ಸಮಾಜದ ಮುಖಂಡರಾದ ಲಕ್ಷ್ಮೀನಾರಾಯಣ್‍ರವರು ಮಾತನಾಡಿ ಜಿಲ್ಲೆಯಲ್ಲಿ ಸವಿತಾ ಸಮಾಜದ ಮದುವೆಗಳು ಮಾಡಬೇಕು ಎಂದರೆ ಕಷ್ಟ ಸಾಧ್ಯವಾಗುತ್ತದೆ, ಏಕೆಂದರೆ ಮದುವೆಗೆ ಹುಡುಗ ಮತ್ತು ಹುಡುಗಿಯನ್ನು ಹುಡುಕಾಡುವುದು ಬಹಳ ಕಷ್ಟಕರವಾಗುತ್ತಿತ್ತು ಜೊತೆಗೆ ನಮ್ಮ ಜಿಲ್ಲೆಗ ಅತ್ಯಂತ ಅವಶ್ಯಕವೂ ಆಗಿತ್ತು, ಆದರೆ ಆ ಒಂದು ಕಾರ್ಯವು ಕಟ್‍ವೆಲ್ ರಂಗನಾಥ್ ಮತ್ತು ಅವರ ತಂಡದಿಂದ ಇಂದು ನೆರವೇರಿದೆ, ನಮ್ಮ ಸಮಾಜದ ಬಂಧುಗಳು ಗಾರ್ಡನ್ ರಸ್ತೆಯ, ಅಯ್ಯಪ್ಪಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿರುವ ಸವಿತಾ ಸಮಾಜ ಜಿಲ್ಲಾ ಸಂಪರ್ಕ ಕೇಂದ್ರಕ್ಕೆ ಖುದ್ದು ಭೇಟಿ ನೀಡಿ ತಮ್ಮ ಮಕ್ಕಳ ವಿವಾಹಕ್ಕೆ ನೋಂದಣಿಯನ್ನು ಮಾಡಿಸಿಕೊಂಡು ಇದರ ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸವಿತಾ ಸಮಾಜ ಹಾಗೂ ತುಮಕೂರು ಜಿಲ್ಲಾ ಸವಿತಾ ಸಮಾಜ ಯುವಪಡೆಯ ಮುಖಂಡರುಗಳಾದ ಪ್ರವೀಣ್ ಪಿ, ಪುನೀತ್ ಟಿ.ಡಿ, ಉಮೇಶ್ ಕೆ, ಒ.ಕೆ.ರಾಜು, ಮುಕುಂದರಾಜ್, ರಮೇಶ್ ಎನ್, ಶ್ರೀಧರ್, ಗೋಪಾಲ್ ಹೆಚ್.ಜಿ, ರಘು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *