ತುಮಕೂರು : ತುಮಕೂರು ಯಲ್ಲಾಪುರದ ಶ್ರೀ ವನಿತಾ ವಿದ್ಯಾಕೇಂದ್ರದ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಡಿಸೆಂಬರ್ 17ರ ಬುಧವಾರ ಮಧ್ಯಾಹ್ನ 2.30ಕ್ಕೆ ನಗರದ ಗುಬ್ಬಿವೀರಣ್ಣ ಕಲಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಮಾರಂಭವನ್ನು ಡಿಡಿಪಿಐ ಕೆ.ಸಿ.ರಘುಚಂದ್ರ ಮಾಡಲಿದ್ದು, ನಿವೃತ್ತ ಉಪನ್ಯಾಸಕರಾದ ಎಸ್.ಸಿದ್ದಪ್ಪನವರು ಅಧ್ಯಕ್ಷತೆ ವಹಿಸಲಿದ್ದು, ಬಹುಮಾನ ವಿತರಣೆಯನ್ನು ಸ್ವಾಂದೇನಹಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಲೋಕೇಶ್ ಅವರು ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೆ.ಆರ್. ರಾಮಸುನಾಚಾರ್ರವರು ನಿ.ಪ್ರ.ಮು.ಶಿ.ತಿ,ಶ್ರೀ ಶ್ರೀನಿವಾಸನ್ ರವರು ನಿ.ಸ.ತಿ. ಸಿದ್ದಗಂಗಾ ಸಂಸ್ಥೆ, ಹನುಮಣ್ಣ ನವರು, ನಿ.ಮು.ತಿ. ಸಿದ್ದಗಂಗಾ ಸಂಸ್ಥೆ,ಎಸ್. ಆರ್. ರಾಮಚಂದ್ರ ರವರು ನಿ.ಹಿಂದಿ ಶಿಕ್ಷಕರು,ಶಂಕರಾನಂದಮುರಳಿ ರವರು, ಆಡಳಿತ ಮಂಡಳಿ ಸದಸ್ಯರು, ಎಸ್.ವಿ.ಕೆ ಸಂಸ್ಥೆ, ವೆಂಕಟಾಚಲ ರವರು ಮೈತ್ರಿ ನ್ಯೂಸ್ ಪತ್ರಿಕಾ ಸಂಪಾದಕರು, ಶಿವಶಂಕರಯ್ಯರವರು ನಿ.ಗಣಿತ ಸಹಶಿಕ್ಷಕರು,ಶ್ರೀಮತಿ ಲಕ್ಷ್ಮಮ್ಮ ತಿಮ್ಮರಾಯಪ್ಪ ರವರು ನಿ.ಮು.ಶಿಕ್ಷಕರು(ಕನ್ನಡ),ಶ್ರೀಮತಿ ರಮಾದೇವಿ ಸುಬ್ಬರಾಯಪ್ಪ ರವರು,ನಿ. ಮು.ಶಿಕ್ಷರು, ಶ್ರೀ ಸಿದ್ದಂಗಂಗಾ ಸಂಸ್ಥೆ,ಲಲಿತಮ್ಮ ಚಿಕ್ಕಹನುಮಂತಯ್ಯ ರವರು,ನಿ.ಕನ್ನಡ ಶಿಕ್ಷಕರು, ಶ್ರೀ ಸಿದ್ದಂಗಂಗಾ ಸಂಸ್ಥೆ,ಮತಿ ಸುಶೀಲಾ ಹೊಸಳ್ಳಯ್ಯ ರವರು,ನಿ. ದೈ.ಶಿ. ಶ್ರೀ ಸಿದ್ದಂಗಂಗಾ ವಿದ್ಯಾಸಂಸ್ಥೆ.ಸಂಸ್ಥೆ ಮುಂತಾದವರು ಭಾಗವಹಿಸಲಿದ್ದಾರೆ.