ಮುಂದಿನ ಪೀಳಿಗೆಗೆ ಗಾಳಿ-ನೀರು ಕಲುಷಿತಗೊಳಿಸದೆ ಉಳಿಸಿ

ತುಮಕೂರು : ಮುಂದಿನ ಪೀಳಿಗೆಗೆ ಗಾಳಿ, ನೀರು ಮತ್ತು ಮಣ್ಣನ್ನು ಕಲುಸಿತಗೊಳಿಸದೆ ಉಳಿಸುವುದು ಇಂದಿನ ಪೀಳಿಗೆಯ ಮಕ್ಕಳ ಮೇಲೆ ಹೆಚ್ಚು ಜವಾಬ್ದಾರಿ ಇದೆ ಎಂದು ಮೈತ್ರಿನ್ಯೂಸ್ ಪತ್ರಿಕೆ ಸಂಪಾದಕರು ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾರ ವೆಂಕಟಾಚಲ. ಹೆಚ್.ವಿ.ಹೇಳಿದರು.

ತುಮಕೂರು ನಗರದ ಯಲ್ಲಾಪುರದ ಶ್ರೀ ವನಿತಾ ವಿದ್ಯಾಕೇಂದ್ರದ ಶಾಲಾ ವಾರ್ಷಿಕೋತ್ಸವದಲ್ಲಿ ಉದ್ಘಾಟನಾ ಭಾಷಣ ಮಾಡಿದ ಅವರು, ಗಾಳಿ, ನೀರನ್ನು ಉತ್ಪಾದನೆ ಮಾಡಲು ಸಾಧ್ಯವಿಲ್ಲದ ಕಾರಣ ಈ ಎರಡನ್ನು ಕಲುಷಿತಗೊಳಿಸದೆ ಉಳಿಸುವ ಜವಾಬ್ದಾರಿ ಎಲ್ಲರದಾಗಿದ್ದು, ಪ್ಲಾಸ್ಟಿಕ್ ಮತ್ತು ರಸಾಯನಿಕ ವಸ್ತುಗಳನ್ನು ಬಳಸುವುದನ್ನು ಆದಷ್ಟು ಕಡಿಮೆ ಮಾಡಿ ವಿಷಯುಕ್ತಗೊಳಿಸುವುದನ್ನು ತಡೆಗಟ್ಟಲು ಎಲ್ಲರೂ ಬದ್ಧರಾಗಿರಬೇಕೆಂದರು.

ಮಕ್ಕಳು ತಮ್ಮ ಹುಟ್ಟು ಹಬ್ಬವನ್ನು ಗಿಡ ನೆಡುವ ಮೂಲಕ ಆಚರಸಿಕೊಳ್ಳಿ ಹಾಗೂ ಜೀವನದ ಮೌಲ್ಯ, ಕೌಶಲ್ಯ ಅಳವಡಿಸಿಕೊಂಡಲ್ಲಿ ಯಶಸ್ಸು ತಾನಾಗಿಯೇ ದೊರೆಯುತ್ತದೆ ಎಂದು ಹೇಳಿದರು.

ಸಮಾರಂಭ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಂಶುಪಾಲರಾದ ಎಸ್.ಸಿದ್ದಪ್ಪನವರು ಮಾತನಾಡಿ, ಮಕ್ಕಳಿಗೆ ತಮ್ಮ ಜವಾಬ್ದಾರಿ ನಿಭಾಯಿಸುವ ಶಿಕ್ಷಣ ನೀಡಬೇಕು. ಮನೆಯಲ್ಲಿ ಶಿಕ್ಷಣ ಸಾರ್ಥಕವಾಗಬೇಕಾದರೆ ಆಚಾರ-ವಿಚಾರಗಳು ಬದಲಾಗಬೇಕು, ಆಹಾರ-ವಿಹಾರಗಳು ಬದಲಾಗಬೇಕು, ಅದೇ ರೀತಿ ಮೊಬೈಲ್ ಸಂಸ್ಕøತಿಯನ್ನು ಆದಷ್ಟು ಕಡಿಮೆ ಮಾಡಿಕೊಳ್ಳಬೇಕೆಂದರು.

ಹೊರಗಿನ ಆಹಾರಕ್ಕಿಂತ ಮನೆಯ ಆಹಾರವನ್ನು ಹೆಚ್ಚು ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಮಕ್ಕಳ ಮಾನಸಿಕ ಆರೋಗ್ಯಕ್ಕೂ ಪೋಷಕರು ಒತ್ತು ನೀಡಬೇಕು, ಇಲ್ಲದಿದ್ದರೆ ಪರಿಸರ, ಸಂಸ್ಕøತಿಯನ್ನು ನಾಶ ಮಾಡಿಕೊಳ್ಳುತ್ತೇವೆ, ಈ ಹಿನ್ನಲೆಯಲ್ಲಿ ಪ್ರತಿಯೊಬ್ಬರೂ ಪರಿಸರ ಉಳಿಸಲು ಗಿಡನೆಡಿ ಎಂದು ತಿಳಿಸಿದರು.

ಸಮಾರಂಭದಲ್ಲಿ ನಾಗಭೂಷಣ ಮಾತನಾಡಿದರು. ಸ್ವಾಂದೇನಹಳ್ಳಿ ಗ್ರಾಮಪಂಚಾಯಿತಿ ಸದಸ್ಯರಾದ ರಂಗಧಾಮ ಅವರು ವಿವಿಧ ಆಟೋಟ ಸ್ಪರ್ಧೆಯಲ್ಲಿ ಜಯಗಳಿಸಿದವರಿಗೆ ಬಹುಮಾನ ವಿತರಿಸಿದರು. ಸಮಾರಂಭದಲ್ಲಿ 2024-25ರಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ವಿವಿಧ ನಿವೃತ್ತ ಶಿಕ್ಷಕರುಗಳಿಗೆ ಗುರುವಂದನೆ ಸಲ್ಲಿಸಲಾಯಿತು. ಸಮಾರಂಭದಲ್ಲಿ ಶಾಲೆಯ ಆಡಳಿತಾಧಿಕಾರಿ ರಾಮಕೃಷ್ಣಯ್ಯ, ಕಾರ್ಯದರ್ಶಿ ವೆಂಕಟರಾಮ್ ಭಾರತಿ, ಹಿರಿಯ ಶಿಕ್ಷಕರಾದ ಪಿ.ರಾಮಕೃಷ್ಣಪ್ಪ ಉಪಸ್ಥಿತರಿದ್ದರು. ಮುಖ್ಯಶಿಕ್ಷಕರಾದ ಶ್ರೀಮತಿ ಸುಜಾತ.ಬಿ.ರವರು ಶಾಲಾ ವರದಿಯನ್ನು ಓದಿದರು.
ಸಮಾರಂಭದ ನಂತರ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.

Leave a Reply

Your email address will not be published. Required fields are marked *