ಲೇಖಕಿಯರ ಸಂಘದ ದತ್ತಿ ಬಹುಮಾನಗಳಿಗೆ ಕಥೆ-ಕವನಗಳ ಆಹ್ವಾನ

ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಶಾಖೆ ತುಮಕೂರು, ಶ್ರೀಮತಿ ನಾಗರತ್ನಮ್ಮ ಅ.ನಾ.ಶೆಟ್ಟಿ ದತ್ತಿ ಕಥಾ ಸ್ಪರ್ಧೆ,ಶ್ರೀಮತಿ ಲಕ್ಷ್ಮಿದೇವಮ್ಮ ಗೋವಿಂದಯ್ಯ ದತ್ತಿ ಕವನ ಸ್ಪರ್ಧೆ ಏರ್ಪಡಿಸಿ ದ್ದು , ಕಥೆ ,ಕವನಗಳನ್ನು ಆಹ್ವಾನಿಸಿರುತ್ತದೆ.

ಸ್ಪರ್ಧೆಯಲ್ಲಿ ಆಯ್ಕೆಯಾದ ಕಥೆ ಕವನಗಳಿಗೆಮೊದಲ ಬಹುಮಾನ ರೂ 2000, ಎರಡನೇ ಬಹುಮಾನ ರೂ 1500,ಮೂರನೇ ಬಹುಮಾನ ರೂ 1000 ನಗದು ಬಹುಮಾನ ಇರುತ್ತದೆ .

ಸ್ಪರ್ಧೆಯ ಷರತ್ತುಗಳು :ಕಥೆ ಆರು ಪುಟ ,ಕವನ ಎರಡು ಪುಟ ಮೀರದಂತಿರಲಿ,ಹಾಳೆಯ ಒಂದೇ ಮಗ್ಗುಲಲ್ಲಿ ಬರೆದಿರಬೇಕು -ಟೈಪ್ ಮಾಡಿರಬೇಕು.ಹೆಸರು ,ವಿಳಾಸ ,ಫೋನ್ ನಂಬರ್ ಪ್ರತ್ಯೇಕ ಪುಟದಲ್ಲಿ ಬರೆದು ಲಗತ್ತಿಸಿರಬೇಕು.
ಸ್ಪರ್ಧೆಯು ತುಮಕೂರು ಜಿಲ್ಲೆಗೆ ಮಾತ್ರ ಸೀಮಿತವಾಗಿರುತ್ತದೆ.

ಸ್ಪರ್ಧೆಗೆ ಕಳಿಸುವ ಕಥೆ, ಕವನಗಳು ಈ ಮೊದಲು ,ಸಾಮಾಜಿಕ ಜಾಲತಾಣ ,ಪತ್ರಿಕೆಗಳನ್ನೂ ಸೇರಿದಂತೆ ಎಲ್ಲಿಯೂ ಪ್ರಕಟವಾಗಿರಬಾರದು.ತೀರ್ಫುಗಾರರ ತೀರ್ಫು ಅಂತಿಮ ಬಹುಮಾನಿತ ಕಥೆ ಕವನಗಳನ್ನು, ಯಾವಾಗ ಬೇಕಾದರೂ ,ಯಾವ ಸ್ವರೂಪದಲ್ಲಾದರೂ ಪ್ರಕಟಿಸುವ ಹಕ್ಕು ಲೇಖಕಿಯರ ಸಂಘಕ್ಕೆ ಇರುತ್ತದೆ.ಸ್ಪರ್ಧೆಗೆ ಕಥೆ, ಕವನಗಳ ಕಳಿಸಲು ಕೊನೆಯ ದಿನಾಂಕ 2026ರ ಜನವರಿ 12 ಆಗಿದ್ದು, ಕಥೆ, ಕವನಗಳನ್ನು ಮಲ್ಲಿಕಾ ಬಸವರಾಜು,ಚರಕ ಆಸ್ಪತ್ರೆ.
ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಸರ್ಕಲ್ ಸಮೀಪ, ತುಮಕೂರು -2 ಇಲ್ಲಿಗೆ ಕಳಿತಕ್ಕದ್ದು.

Leave a Reply

Your email address will not be published. Required fields are marked *