ತುಮಕೂರು: ಡಿಸೆಂಬರ್ 25 ರಿಂದ 31ರವರೆಗೆ ಕತಾರ್‍ನ ದೋಹದಲ್ಲಿ ಆಯೋಜಿಸಿರುವ ‘ಫಿಡೇ ವಲ್ರ್ಡ್ ರ್ಯಾಪಿಡ್ ಅಂಡ್ ಬ್ಲಿಡ್ಜ್ ಚೆಸ್ ಚಾಂಪಿಯನ್‍ಶಿಫ್- ಕತಾರ್ 2025’ ನಲ್ಲಿ ಪಾಲ್ಗೊಳ್ಳುವ ಭಾರತ ತಂಡದ ನಿಯೋಗದ ಮುಖ್ಯಸ್ಥರಾಗಿ ತುಮಕೂರಿನ ಪ್ರಜಾಪ್ರಗತಿ ಸಹ ಸಂಪಾದಕರು ಹಾಗೂ ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಅಧ್ಯಕ್ಷರಾದ ಟಿ.ಎನ್.ಮಧುಕರ್ ಅವರನ್ನು ಆಲ್ ಇಂಡಿಯಾ ಚೆಸ್ ಫೆಡರೇಷನ್ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರ ನಿಯೋಜಿಸಿದೆ.
ಅಂತಾರಾಷ್ಟ್ರೀಯ ಚೆಸ್ ಕ್ರೀಡಾಪಟುಗಳು ಹಾಗೂ ಪುರುಷ-ಮಹಿಳಾ ಗ್ರಾಂಡ್ ಮಾಸ್ಟರ್‍ಗಳನ್ನೊಳಗೊಂಡ ತಂಡದ ಉಸ್ತುವಾರಿಯನ್ನು ಮಧುಕರ್ ಅವರು ವಹಿಸುತ್ತಿದ್ದು, ಭಾರತೀಯ ತಂಡ ಫಿಡೇ ವಲ್ರ್ಡ್ ಚಾಂಪಿಯನ್‍ಶಿಫ್‍ನಲ್ಲಿ ಜಯಬೇರಿ ಭಾರಿಸಿ ಯಶಸ್ಸುಗಳಿಸಲಿ ಎಂದು ರಾಜ್ಯ ಚೆಸ್ ಅಸೋಸಿಯೇಷನ್ ಹಾಗೂ ನ್ಯೂ ತುಮಕೂರು ಜಿಲ್ಲಾ ಚೆಸ್ ಅಸೋಸಿಯೇಷನ್‍ನ ಪದಾಧಿಕಾರಿಗಳು ಆಶಿಸಿದ್ದಾರೆ.