ತುಮಕೂರು: ತುಮಕೂರು ಛಲವಾದಿ ಪತ್ತಿನ ಸೌಹಾರ್ಧ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿ ನೂತನ ಅಧ್ಯಕ್ಷರಾಗಿ ಸಿ.ಭಾನುಪ್ರಕಾಶ್ ಉಪಾಧ್ಯಕ್ಷರಾಗಿ ಚೆಲುವರಾಜು.ಜಿ.ಎನ್ ಹಾಗೂ ಎಲ್ಲಾ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರದ ಬನಶಂಕರಿ ಅರಣ್ಯ ಇಲಾಖೆ ಮುಂಭಾಗ ಇರುವ ತುಮಕೂರು ಛಲವಾದಿ ಪತ್ತಿನ ಸೌಹಾರ್ದ ಸಹಕಾರಿ ಸಂಘಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಒಟ್ಟು 13 ಸ್ಥಾನ ಹೊಂದಿರುವ ಸಹಕಾರಿ ಸಂಘಕ್ಕೆ ಎಲ್ಲಾ ಸ್ಥಾನಗಳಿಗೂ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದು, ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪ್ರತಿ ಸ್ಥಾನಕ್ಕೆ ಒಂದೊಂದು ನಾಮಪತ್ರ ಮಾತ್ರ ಸಲ್ಲಿಕೆಯಾದ ಕಾರಣ ಅಧ್ಯಕ್ಷರಾಗಿ ಸಿ.ಭಾನುಪ್ರಕಾಶ್ ಉಪಾಧ್ಯಕ್ಷರಾಗಿ ಚೆಲುವರಾಜು.ಜಿ.ಎನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಯಾದ ಸಹಕಾರ ಇಲಾಖೆಯ ಸಹಾಯಕ ಲೆಕ್ಕ ಪರಿಶೋಧನಾ ಅಧಿಕಾರಿ ಬಸವರಾಜು ತಿಳಿಸಿದ್ದಾರೆ.
ಇನ್ನು ಹಾಲಿ ನಿರ್ದೇಶಕರಾದ ಹೆಚ್.ಎಸ್.ಪರಮೇಶ್, ಗಿರಿಜೇಶ್.ಜಿ.ಆರ್, ಹೆಚ್.ಎಸ್.ಸಂಪತ್ ಕುಮಾರ್, ಸುರೇಶ್.ಜಿ.ಆರ್, ಬೈರೇಶ್.ಡಿ.ಎನ್, ಪುನಾರಾಯ್ಕೆಯಾಗಿದ್ದು, ನೂತನವಾಗಿ ಗಂಗಾಂಜನಯ್ಯ ಜಿ.ಪುಟ್ಟಯ್ಯ, ಚಂದ್ರಶೇಖರ್.ಎನ್, ರಾಜಣ್ಣ.ಕೆ, ರತ್ನಮ್ಮ.ಹೆಚ್.ಟಿ, ಶೈಲಜ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಈ ವೇಳೆ ಸಂಘದ ಮುಖ್ಯಕಾರ್ಯನಿರ್ವಣಾಧಿಕಾರಿ ಜಯಂತಿ, ಚೇತನ್.ಬಿ.ಸಿ. ಇತರರು ಇದ್ದರು.