ತುಮಕೂರು ತಿಗಳರ ಅಗ್ನಿವಂಶ ಕ್ಷತ್ರಿಯರ ಪತ್ತಿನ ಸಹಕಾರ ಸಂಘ ನಿ. ತುಮಕೂರು, ಸಂಘದಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ವಕೀಲರಾದ ಕೆಂಪರಾಜುರವರನ್ನು ಅವಿರೊಧವಾಗಿ ಆಯ್ಕೆ ಮಾಡಲಾಯಿತು.
ಡಿಸೆಂಬರ್ 29 ರಂದು ನಡೆದ ನಿರ್ದೇಶಕ ಮಂಡಳಿಯ ಸಭೆಯಲ್ಲಿ ಕೆಂಪರಾಜು ಸಿ ರವರನ್ನು ಅಧ್ಯಕ್ಷರನ್ನಾಗಿ ಅವಿರೊಧವಾಗಿ ಆಯ್ಕೆ ಮಾಡಿ ಅಭಿನಂದಿಸಲಾಯಿತು, ಈ ಸಂಧರ್ಭದಲ್ಲಿ ಮಾತನಾಡಿದ ಕೆಂಪರಾಜು ರವರು ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಸಮುದಾಯದ ಜನರು ಕೈ ಸಾಲಗಳನ್ನು ಮಾಡಿ ವಿಪರೀತ ಬಡ್ಡಿ ಹಣ ತೆಗೆದುಕೊಂಡು ಸಾಲ ತಿರಿಸಲಾಗದೆ ಸಂಕಷ್ಟ ಎದುರಿಸುತ್ತಿರುವ ಸಮುದಾಯದ ಜನರ ಅಭಿವೃದ್ಧಿಗಾಗಿ ಪತ್ತಿನ ಸಹಕಾರಿ ಸಂಘವನ್ನು ಆರಂಭಿಸಲಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸಮುದಾಯದ ಜನರ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಉಪಾಧ್ಯಕ್ಷರಾದ ಟಿ.ಸಿ.ಶಿವಕುಮಾರ್, ನಿರ್ದೇಶಕರುಗಳಾದ ಟಿ.ಎಲ್ ಶಿವಕುಮಾರ್, ರಘುರಾಮ್, ಟಿ.ಕೆ. ಮಂಜುನಾಥ್, ಪಿ ಲಕ್ಷ್ಮೀನಾರಾಯಣ, ಕೆಂನಂಜಪ್ಪ, ಲೋಕೇಶ್ ಪಿ.ಹೆಚ್, ಚಂದ್ರಬಾಭು, ಟಿ.ಹೆಚ್. ರಾಮು ಸಹಕಾರಿ ಸಂಘದ ವ್ಯವಸ್ಥಾಪಕರಾದ ಕಾವ್ಯ ಬಿ.ಎಸ್ ಉಪಸ್ಥಿತರಿದ್ದರು.