ತುಮಕೂರು : ಕರ್ನಾಟಕ ದಲಿತ ಸಂಘರ್ಷ ಸಮಿತಿ ತುಮಕೂರು ಮತ್ತು ಜನಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಇತ್ತೀಚೆಗೆ ನಿಧನರಾದ ಹೋರಾಟದ ಒಡನಾಡಿ, ದಲಿತ ಮುಖಂಡ ಬಂದಕುಂಟೆ ನಾಗರಾಜಯ್ಯ ಅವರಿಗೆ ನುಡಿನಮನ ಕಾರ್ಯಕ್ರಮವನ್ನು ಜ.18ರಂದು ಬೆಳಗ್ಗೆ 10.30ಗಂಟೆಗೆ ತುಮಕೂರಿನ ಟೌನ್ ಹಾಲ್ ಸರ್ಕಲ್ ನಲ್ಲಿರುವ ಐಎಂಎ ಹಾಲ್ ನಲ್ಲಿ ಏರ್ಪಡಿಸಲಾಗಿದೆ.
ನುಡಿನಮನ ಕಾರ್ಯಕ್ರಮದಲ್ಲಿ ಚರಕ ಆಸ್ಪತ್ರೆಯ ಡಾ.ಬಸವರಾಜು ಪ್ರಾಸ್ತಾವಿಕ ಮಾತನಾಡುವರು. ಜನಪರ ಚಿಂತಕ ಕೆ.ದೊರೈರಾಜ್, ಲೇಖಕಿ ಬಾ.ಹ.ರಮಾಕುಮಾರಿ, ಕೆಂಚಮಾರಯ್ಯ, ಎನ್.ಜಿ.ರಾಮಚಂದ್ರ, ಕುಂದೂರು ತಿಮ್ಮಯ್ಯ,ತುಂಬಾಡಿ ರಾಮಯ್ಯ ಹೋರಾಟಗಾರರಾದ ನೀರಕಲ್ಲು ರಾಮಕೃಷ್ಣ, ನರಸಿಂಹಯ್ಯ, ಬೆಲ್ಲದಮಡು ಕೃಷ್ಣಪ್ಪ ನುಡಿನಮನ ಸಲ್ಲಿಸುವರು.
ಕಾರ್ಯಕ್ರಮದಲ್ಲಿ ಮಲ್ಲಿಕಾ ಬಸವರಾಜು, ಕೆ.ಗಂಗಮ್ಮ, ಡಾ.ವೈ.ಕೆ.ಬಾಲಕೃಷ್ಣಪ್ಪ, ವಿರೂಪಾಕ್ಷ ಡ್ಯಾಗೇರಹಳ್ಳಿ, ತಿಮ್ಮನಹಳ್ಳಿ ವೇಣುಗೋಪಾಲ್, ನರಸೀಯಪ್ಪ, ಜಿ.ಎನ್.ರಾಜಸಿಂಹ, ಡಾ.ವಡ್ಡಗೆರೆ ನಾಗರಾಜಯ್ಯ, ಗಂಗರಾಜಮ್ಮ, ಹುಚ್ಚ ಹನುಮಕ್ಕ, ಅನುರಾದ ದೊರೈರಾಜು, ಡಾ.ಅರುಂಧತಿ, ಡಾ.ಮುರುಳೀಧರ್, ನಟರಾಜ್ ಹೊನ್ನವಳ್ಳಿ, ಎ.ನರಸಿಂಹಮೂರ್ತಿ, ಗುರುಪ್ರಸಾದ್ ಕಂಟಲಗೆರೆ, ಕುಂದೂರು ಮುರಳಿ, ಪಿ.ಎನ್.ರಾಮಯ್ಯ, ಕಂಟಲಗೆರೆ ಸಣ್ಣಹೊನ್ನಯ್ಯ, ಡಾ.ಶಿವಣ್ಣ ತಿಮ್ಲಾಪುರ, ನವೀದ್ ಅಹಮದ್ ಖಾನ್ ಇತರರು ಭಾಗವಹಿಸುವರು.