ತುಮಕೂರು : ಕರ್ನಾಟಕ ಲೇಖಕಿಯರ ಸಂಘ, ತುಮಕೂರು ಜಿಲ್ಲಾ ಶಾಖೆಯು ಏರ್ಪಡಿಸಿದ್ದ ಕವನ ಮತ್ತು ಕಥೆ ದತ್ತಿ ಪ್ರಶಸ್ತಿ ಸ್ಪರ್ಧೆಯಲ್ಲಿ ಕವನ ವಿಭಾಗದಲ್ಲಿ ಮಲ್ಲಿಕಾರ್ಜುನ ಹೊಸಪಾಳ್ಯ ಮತ್ತು ಕಥೆ ವಿಭಾಗದಲ್ಲಿ ಹೆಚ್.ವಿ.ವೆಂಕಟಾಚಲ ಅವರುಗಳು ಪ್ರಥಮ ಬಹುಮಾನ ಪಡೆದಿದ್ದಾರೆ.

ಶ್ರೀಮತಿ ಲಕ್ಷ್ಮಿದೇವಮ್ಮ ಗೋವಿಂದಯ್ಯ ದತ್ತಿ ಕವನ ಸ್ಪರ್ಧೆಗೆ 46 ಕವಿತೆಗಳ ಬಂದಿದ್ದು.ಅವುಗಳನ್ನು ಕವಿತೆ ತೀರ್ಪುಗಾರರಾದ ಡಾ.ಗೀತಾ ವಸಂತ್ ರವರು ಪರಿಶೀಲಿಸಿ ಮಲ್ಲಿಕಾರ್ಜುನ ಹೊಸಪಾಳ್ಯರವರ ‘ಕುರುಡು ಚಿತ್ತೆಯ ನೆನಕೆ’ ಕವನಕ್ಕೆ ಪ್ರಥಮ ಬಹುಮಾನ ಪಡೆದರೆ, ತಿಲಕ್ ಲಕ್ಷ್ಮೀಪರ ಅವರ ‘ಸೂಜಿ ಮತ್ತು ದಾರ’ ಕವನಕ್ಕೆ ದ್ವಿತೀಯ ಬಹುಮಾನ, ಡಾ.ಗಿರಿಜಮ್ಮ ಅವರ ‘ತರಗೆಲೆಯ ಮಾತು’ ಕವನಕ್ಕೆ ತೃತೀಯ ಬಹುಮಾನ ಮತ್ತು ಮಾರುತಿ ಪ್ರಸಾದ್ ರವರ ‘ಪ್ರೀತಿ’ ಕವನಕ್ಕೆ ಹಾಗೂ ಆಶಾ ಸಚಿನ್ ಅವರ ‘ಐ.ವಿ.ಎಫ್ ಅಮ್ಮ’ ಕವನಕ್ಕೆ ಸಮಾದಾನಕರ ಬಹುಮಾನ ನೀಡಲಾಯಿತು.

ಶ್ರೀಮತಿ ನಾಗರತ್ನ ಅ.ನಾ.ಶೆಟ್ಟಿ ದತ್ತಿ ಕಥಾ ಸ್ಪರ್ಧೆಗೆ 22 ಕಥೆಗಳು ಬಂದಿದ್ದು, ಅವುಗಳನ್ನು ಕಥೆಗಳ ತೀರ್ಪುಗಾರರಾದ ಬಾ.ಹ.ರಮಾ ಕುಮಾರಿರವರು ಪರಿಶೀಲಿಸಿ ಹೆಚ್.ವಿ.ವೆಂಕಟಾಚಲರವರ ‘ಋಣ ತೀರಿತು’ ಕಥೆ ಪ್ರಥಮ ಬಹುಮಾನ ಪಡೆದರೆ, ಶೈಲಜಾ .ಜೆ.ಕೆ. ಅವರ ‘ಅಮ್ಮಂದಿರಿಗೂ ಒಂದು ಡೇ’ ಕಥೆಗೆ ದ್ವಿತೀಯ ಬಹುಮಾನ, ನರಸಿಂಹ ರಾಜು ಸಿರಿವರ ಅವರ ‘ಶಿವಲಿಂಗಮ್ಮನ ಕೋಣಗಳು’ ಕಥೆಗೆ ತೃತೀಯ ಬಹುಮಾನ ಮತ್ತು ಮಂಜುಳಾ.ಎಂ.ಎಸ್.ರವರ ‘(ಸ) ಕಾರಣ’ ಕಥೆಗೆ ಸಮಾದಾನಕರ ಬಹುಮಾನ ನೀಡಲಾಯಿತು.
ಜನವರಿ 25ರಂದು ತುಮಕೂರಿನ ಕನ್ನಡ ಭವನದಲ್ಲಿ ನಡೆದ ದತ್ತಿ ಪ್ರಶಸ್ತಿ ಬಹುಮಾನ ವಿತರಣಾ ಸಮಾರಂಭದಲ್ಲಿ ಕವನ-ಕಥೆ ಬಹುಮಾನಿತರಿಗೆ ನಗದು ಬಹುಮಾನ ಮತ್ತು ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.