ತುಮಕೂರು : ಮಾಹಾರಾಷ್ಟ್ರದ ಉಪಮುಖ್ಯ ಮಂತ್ರಿ ಅಜಿತ್ ಪವಾರ್ ಅವರು ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರದ ಉಪಮುಖ್ಯ ಮಂತ್ರಿ ಅವರು ಜಿಲ್ಲಾ ಪಂಚಾಯಿತಿ ಚುನಾವಣಾ ತೆರಳಿದಾಗ ಬಾರಾಮತಿ ಬಳಿ ರನ್ವೇನಲ್ಲಿ ಇಳಿಯಲು ಪ್ರಯತ್ನಿಸುವ ಸಂದರ್ಭದಲ್ಲಿ ಹೆಲಿಕಾಪ್ಟರ್ ರನ್ ವೇಯಿಂದ ಹೊರ ಹೋಗಿ ಬೆಂಕಿಗೆ ಆವುತಿಯಾಯಿತು ಎನ್ನಲಾಗಿದೆ. ಹೆಲಿಕಾಪ್ಟರ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಇದರಲ್ಲಿ ಎಷ್ಟು ಜನ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಬೇಕಿದೆ.
ಹೆಲಿಕಾಪ್ಟರ್ ಸ್ಥಳಕ್ಕೆ ಸ್ಥಳೀಯ ಪೊಲೀಸರು, ಅಂಬ್ಯುಲೆನ್ಸ್ ಆಗಮಿಸಿವೆ. ಅಪಘಾತಕ್ಕೆ ಕಾರಣವೇನು ಎಂಬುದು ತಿಳಿಯಬೇಕಿದೆ. ದೆಹಲಿಯಿಂದ ಅಜಿತ್ ಪವಾರ್ ಕುಟುಂಬ ವರ್ಗ ಮಹಾರಾಷ್ಟ್ರಕ್ಕೆ ಹೊರಟಿದ್ದಾರೆಂದು ತಿಳಿದು ಬಂದಿದೆ.
ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ರಾಜಶೇಖರರೆಡ್ಡಿ ಸಹ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದರು.