ಗಾಂಧಿಯ ಹೆಸರನ್ನು ಅಳಿಸಿ ಹಾಕುವ ನಿರಂತರ ಪ್ರಯತ್ನದಲ್ಲಿ ಬಿಜೆಪಿ-ಹೆಚ್.ಕೆಂಚಮಾರಯ್ಯ

ತುಮಕೂರು: ಗಾಂಧಿಯ ಹೆಸರನ್ನು ಅಳಿಸಿ ಹಾಕುವ ನಿರಂತರ ಪ್ರಯತ್ನದಲ್ಲಿ ಬಿಜೆಪಿ ತೊಡಗಿದೆ.ಆದರೆ ಕಾಂಗ್ರೆಸ್ ಪಕ್ಷ ಕರ್ನಾಟಕದ ಪ್ರತಿ ಗ್ರಾ.ಪಂ.ಗೂ ಗ್ರಾಮ ಸ್ವರಾಜ್ ಪರಿಕಲ್ಪನೆ ನೀಡಿದ ಮಹಾತ್ಮಗಾಂಧಿ ಹೆಸರನ್ನು ಇಡಲು ಮುಂದಾಗಿದೆ. ಗಾಂಧಿ ಹೆಸರು ಹೇಳುವ ನೈತಿಕತೆಯೂ ಬಿಜೆಪಿಗರಿಗೆ ಇಲ್ಲ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರು ಹಾಗೂ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಹೆಚ್.ಕೆಂಚಮಾರಯ್ಯ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಾಡಿಗಾಗಿ ತಮ್ಮ ತನು, ಮನ, ಧನ ಹಾಗೂ ಪ್ರಾಣ ತ್ಯಾಗ ಮಾಡಿದ ಮಹನೀಯರನ್ನು ಸ್ಮರಿಸುವ ಸರ್ವೋದಯ ದಿನವನ್ನು ಹುತಾತ್ಮರ ದಿನ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಾತ್ಮಗಾಂಧಿ ಅವರು ಸಾವನ್ನಪ್ಪಿದ ದಿನವನ್ನು ಸರ್ವೋದಯ ದಿನವನ್ನಾಗಿ ಆಚರಿಸಲಾಗುತ್ತಿದೆ.ಆದರೆ ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಗಳಿಗೆ ಗಾಂಧಿಜಿಯ ಬಗ್ಗೆ ಮೊದಲಿನಿಂದಲೂ ದ್ವೇಷವಿದೆ.ಗಾಂಧಿ ಕೊಂದ ಗೂಡ್ಸೆ ನೀಡಿದ ಕಾರಣ, ದೇಶವಿಭಜನೆಗೆ ಸಹಕಾರ, ಅಸ್ಪøಷ್ಯತೆ ನಿವಾರಣೆಗೆ ಪ್ರಯತ್ನ. ಗಾಂಧೀಜಿ ಅವರಿಗೆ ಕವಿ ರವೀಂದ್ರನಾಥ ಟ್ಯಾಗೋರ್ ನೀಡಿದ ಬಿರುದು ಮಹಾತ್ಮ, ಹಾಗೆಯೇ ಸುಭಾಷ್ ಚಂದ್ರ ಬೋಸ್ ನೀಡಿದ ಬಿರುದು ರಾಷ್ಟ್ರಪಿತ ಎಂದು ಹೇಳಿದರು.

ಈ ವೇಳೆ ಮಾತನಾಡಿದ ಮುಖಂಡರಾದ ಮುರುಳೀಧರ ಹಾಲಪ್ಪ,ಸರ್ವೋದಯ ದಿನದ ಹೆಸರಿನಲ್ಲಿ ಭಾರತೀಯರ ಹಕ್ಕು ಮತ್ತು ಸ್ವಾತಂತ್ರಕ್ಕಾಗಿ ಹೋರಾಟ ನಡೆಸಿದ ಮಹನೀಯರನ್ನು ಸ್ಮರಿಸುವ ಕೆಲಸವನ್ನು ಇಡೀ ದೇಶದಾದ್ಯಂತ ಆಚರಿಸ ಲಾಗುತ್ತಿದೆ.ಕಾಂಗ್ರೆಸ್ ಪಕ್ಷ ಸಹ ದೇಶಕ್ಕಾಗಿ ಮಡಿದ ನಮ್ಮ ನಾಯಕರುಗಳನ್ನು ಸ್ಮರಿಸಲು ಹುತಾತ್ಮರ ದಿನವನ್ನು ಆಚರಿಸುತ್ತಿದೆ. ಮುಂಬರುವ ಮೇ. ಅಥವಾ ಜೂನ್ ತಿಂಗಳಲ್ಲಿ ಗ್ರೇಟರ್ ಬೆಂಗಳೂರಿನ ಐದು ಪಾಲಿಕೆಗಳಿಗೆ ಚುನಾವಣೆ ನಡೆಯಲಿದೆ. ತದ ನಂತರದಲ್ಲಿ ರಾಜ್ಯದ ಎಲ್ಲಾ ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ.ಹಾಗಾಗಿ ಪಕ್ಷದ ಕಾರ್ಯಕರ್ತರು ಎಚ್ಚೆತ್ತುಕೊಂಡು, ಚುನಾವಣಾ ತಯಾರಿಯಲ್ಲಿ ಭಾಗಿಯಾಗುವಂತೆ ಕೋರಿದರು.

ಮುಖಂಡರಾದ ಇಕ್ಬಾಲ್ ಅಹಮದ್ ಮಾತನಾಡಿ,ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡು, ಬ್ರಿಟಿಷರ ಕಪಿಮುಷ್ಠಿಯಿಂದ ಭಾರತೀಯರನ್ನು ಬಿಡಿಸಲು ಹೋರಾಡಿ, ತಮ್ಮ ಪ್ರಾಣಾರ್ಪಣೆ ಮಾಡಿದ ಮಹನೀಯರನ್ನು ಸ್ಮರಿಸುವುದು ಸರ್ವೋದಯ ದಿನದ ಉದ್ದೇಶ.ಕಾಂಗ್ರೆಸ್ ಪಕ್ಷಕ್ಕೆ ಸರ್ವೋದಯ ದಿನ ಆಚರಿಸಲು ಹೆಚ್ಚಿನ ಅರ್ಹತೆ ಇದೆ.ಕಾಂಗ್ರೆಸ್ ಪಕ್ಷದ ಸಾವಿರಾರು ಕಾರ್ಯಕರ್ತರು, ಮುಖಂಡರು ಸ್ವಾತಂತ್ರಕ್ಕಾಗಿ ತಮ್ಮ ಪ್ರಾಣವನ್ನು ತ್ಯೇಜಿಸಿದ್ದಾರೆ.ತಮ್ಮ ಪ್ರಾಣಕ್ಕಿಂತ ದೇಶದ ರಕ್ಷಣೆ ಮುಖ್ಯ ಎಂಬುದನ್ನು ಇಂದಿರಾಗಾಂಧಿ ಅಪರೇಷನ್ ಬ್ಲೂü ಸ್ಟಾರ್ ಮೂಲಕ,ಶ್ರೀಲಂಕಕ್ಕೆ ಭಾರತೀಯ ಶಾಂತಿ ಪಾಲನಾ ಪಡೆಯನ್ನು ಕಳುಹಿಸುವ ಮೂಲಕ ರಾಜೀವಗಾಂಧಿ ಅವರುಗಳು ತೊರಿಸಿಕೊಟ್ಟಿದ್ದಾರೆ.ಇವರ ಆದರ್ಶಗಳು ಕಾಂಗ್ರೆಸ್ ಕಾರ್ಯಕರ್ತರಿಗೆ ಮಾದರಿಯಾಗಬೇಕು.ನಾವುಗಳು ಮೇಲ್ನೋಟಕ್ಕೆ ಕಾಂಗ್ರೆಸ್ ಕಾರ್ಯಕರ್ತರಾಗದೆ, ಮನಸ್ಸಿನಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಬೇಕೆಂದರು.

ಅಧ್ಯಕ್ಷೀಯ ನುಡಿಗಳನ್ನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ,ಸ್ವಾತಂತ್ರಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ಮಹಾತ್ಮಗಾಂಧಿ,ಅರವಿಂದ ಘೋಷ್,ಭಗತ್‍ಸಿಂಗ್ ಸೇರಿದಂತೆ ಹಲವರನ್ನು ಸ್ಮರಿಸುವ ದಿನವಾಗಿ ಸರ್ವೋದಯ ದಿನವನ್ನು ಆಚರಿಸುತ್ತಿದ್ದೇವೆ.ಹಂತಕರ ಗುಂಡಿಗೆ ಬಲಿಯಾದ ಎಲ್ಲರ ಆತ್ಮಕ್ಕೂ ಶಾಂತಿ ಸಿಗಲಿ ಎಂಬುದು ನಮ್ಮ ಹಾರೈಕೆಯಾಗಿದೆ.ಕಾಂಗ್ರೆಸ್ ಗಾಂಧಿ ಹೆಸರನ್ನು ಶಾಶ್ವತವಾಗಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ರಾಷ್ಟ್ರಪಿತ ಮಹಾತ್ಮಗಾಂಧಿ, ಮಾಜಿ ಪ್ರಧಾನಿಗಳಾದ ಇಂದಿರಾಗಾಂಧಿ, ರಾಜೀವ್‍ಗಾಂಧಿ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ, ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಹಿರಿಯರಾದ ಮಾಜಿ ಶಾಸಕ ಗಂಗಹನುಮಯ್ಯ,ನರಸೀಯಪ್ಪ,ಗ್ರಾಮಾಂತರದ ಪಂಚಾಕ್ಷರಯ್ಯ,ಪಿ.ಶಿವಾಜಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್.ರಾಮಕೃಷ್ಣ, ರೇವಣ್ಣಸಿದ್ದಯ್ಯ, ಷಣ್ಮುಖಪ್ಪ ಸೇರಿದಂತೆ ಹಲವರು ಸರ್ವೋದಯ ದಿನ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಫಯಾಜ್,ಕೆಂಪಣ್ಣ,ಸಂಜೀವ್‍ಕುಮಾರ್,ಪ್ರಧಾನ ಕಾರ್ಯದರ್ಶಿ ಸುಜಾತ, ಮಹಿಳಾ ಘಟಕದ ನಾಗಮಣಿ, ಪಾಲಿಕೆ ಮಾಜಿ ಸದಸ್ಯ ನಯಾಜ್,ವಾಲೆಚಂದ್ರಯ್ಯ,ಭಾಗ್ಯಮ್ಮ,ಕೈದಾಳ ರಮೇಶ್, ನಟರಾಜ್, ಆದಿಲ್, ಎಸ್ಟಿ ಘಟಕದ ಕುಮಾರಸ್ವಾಮಿ, ಶಾಹಾಬುದ್ದೀನ್, ಭಾಗ್ಯ, ಪುನಿತ್, ಸೇವಾದಳದ ಶಿವಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *