ಗದ್ದಲ-ಗಲಾಟೆಯಲ್ಲಿ ಮುಳುಗಿ ಹೋದ ವಿಶೇಷ ಗ್ರಾಮ ಸಭೆ

ತುಮಕೂರು: ಸರ್ಕಾರ ಕಾಲ ಕಾಲಕ್ಕೆ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ನಿರ್ಗತಿಕರು ನಿರಾಶ್ರಿತರಿಗೆ ವಿವಿಧ ಯೋಜನೆಗಳ ಅಡಿ ನಿವೇಶನ ಹಂಚಿಕೆ ಮಾಡುತ್ತಿದ್ದು ಈ ಹಿನ್ನೆಲೆಯಲ್ಲಿ ತುಮಕೂರ್ ತಾಲೂಕು ಕೋರ ಹೋಬಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ನಿವೇಶನ ರಹಿತರಿಗೆ ಮುಖ್ಯಮಂತ್ರಿಗಳ ಗ್ರಾಮೀಣ ಆಶ್ರಯ ನಿವೇಶನ ಯೋಜನೆ ಅಡಿ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲು ಹೊರ ಗ್ರಾಮ ಪಂಚಾಯಿತಿ ಕಚೇರಿ ಬಳಿ ಕರೆಯಲಾಗಿದ್ದ ವಿಶೇಷ ಗ್ರಾಮ ಸಭೆಯು ಗದ್ದಲ ಗಲಾಟೆ ಕೋಲಾಹಲಕ್ಕೆ ಕಾರಣವಾಗಿ ನೋಡಲ್ ಅಧಿಕಾರಿಗಳಿಂದ ಮುಂದೂಡಲ್ಪಟ್ಟ ಘಟನೆ ನಡೆಯಿತು.

ಕೊರಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮುದ್ದೇನಹಳ್ಳಿ ಗ್ರಾಮದ ಸರ್ವೆ ನಂಬರ್ ನಾಲ್ಕು ಎಕರೆ ನಿವೇಶನ ಹಂಚಿಕೆಗಾಗಿ ಮೀಸಲಿಟ್ಟಿದ್ದು ಈ ಸಂಬಂಧ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಗ್ರಾ.ಪಂ.ಅಧ್ಯಕ್ಷರು, ಮಾರ್ಗದರ್ಶಿ ಅಧಿಕಾರಿ ಮತ್ತು ಎಸ್.ಕೃಷ್ಣಪ್ಪ ಜಂಟಿ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಇವರ ಮಾರ್ಗದರ್ಶನದಲ್ಲಿ ಕರೆಯಲಾಗಿದ್ದ ವಿಶೇಷ ಗ್ರಾಮ ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಈ ಹಿಂದೆ ಕೈಗೊಳ್ಳಲಾಗಿದ್ದ ನಡಾವಳಿ ನಿಯಮಗಳ ಪ್ರಕಾರ ನಿವೇಶನ ಹಂಚಿಕೆ ಮಾಡಬಾರದೆಂದು ಸಭೆಯಲ್ಲಿ ನಡಾವಳಿ ಓದಬೇಕು ಎಂದು ತಾಕೀತು ಮಾಡಿದ್ದರು ಇದಕ್ಕೆ ಪ್ರತಿಕ್ರಿಯೆಯಾಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕೃಷ್ಣಮೂರ್ತಿಯವರು ಜಿಲ್ಲಾಧಿಕಾರಿಗಳ ಆದೇಶದನ್ವಯ ವಿಶೇಷ ಗ್ರಾಮ ಸಭೆಯನ್ನು ಆಯೋಜನೆ ಮಾಡಲಾಗಿದೆ ಸರ್ಕಾರದ ಉದ್ದೇಶದೊಂದಿಗೆ ನಿರ್ಗತಿಕ ಬಡವರಿಗೆ ನಿವೇಶನ ಹಂಚಿಕೆ ಮಾಡಲು ಸಹಮತ ಬೇಕಿರುವುದರಿಂದ ಪಂಚಾಯತಿ ಎಲ್ಲ ಸದಸ್ಯರಿಗೂ ವಿಶೇಷ ಗ್ರಾಮ ಸಭೆಯ ಸೂಚನಾ ಪತ್ರವನ್ನು ಹೊರಡಿಸಲಾಗಿದೆ ಎಂದಾಗ ಇದಕ್ಕೆ ಏರು ಧ್ವನಿಯಲ್ಲಿ ಪ್ರತಿಕ್ರಿಸಿದ ಗ್ರಾಮ ಪಂಚಾಯಿತಿಯ ಸದಸ್ಯರುಗಳು ಜಿಲ್ಲಾಧಿಕಾರಿಗಳ ಆದೇಶಕ್ಕೆ ಇಲ್ಲಿ ಯಾವುದೇ ಕಿಮ್ಮತ್ತಿಲ್ಲ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯಿತಿಗೆ ವಿಶೇಷ ಅಧಿಕಾರವಿದ್ದು ಸದಸ್ಯರುಗಳ ಸಭಾ ನಡಾವಳಿಯಂತೆ ನಿವೇಶನ ಹಂಚಿಕೆಯನ್ನು ಕೈ ಬಿಟ್ಟು ಶಾಲೆ ಅಂಗನವಾಡಿ ಸಮುದಾಯ ಭವನಗಳನ್ನು ಸ್ಥಾಪಿಸಲು ಈ ಜಾಗವನ್ನು ಬಳಸಿಕೊಳ್ಳಬೇಕು ಎಂದು ಏರು ಧ್ವನಿಯಲ್ಲಿ ಕೂಗಿ ಹೇಳಿದರು.

ಕೆಲಸ ಸದಸ್ಯರು ಈಗಾಗಲೇ ನಿವೇಶನ ರಹಿತರು ನಿವೇಶನಕ್ಕಾಗಿ ಅರ್ಜಿ ದಾಖಲೆಗಳನ್ನು ಸಲ್ಲಿಸಿದ್ದು ಅದರಂತೆ ಅವರಿಗೆ ಜಿಲ್ಲಾಧಿಕಾರಿಗಳ ಆದೇಶದಂತೆ ನಿವೇಶನ ಹಂಚಿಕೆ ಮಾಡಬೇಕು ಎಂದು ಕೂಗಾಡಿದರು ಗ್ರಾಮ ಪಂಚಾಯತಿ ಸದಸ್ಯರುಗಳ ಏರು ಧ್ವನಿಯ ಕೂಗಾಟದಿಂದ. ಸಭೆ ಕೆಲಸ ಗೊಂದಲದ ಗೂಡಾಯಿತು.

ಕೆಲ ಸದಸ್ಯರು ಪಿಡಿಓ ಅವರು ಕ್ರಮಬದ್ಧವಾದ ವಿಶೇಷ ಗ್ರಾಮ ಸಭೆಯನ್ನು ಆಯೋಜನೆ ಮಾಡಿಲ್ಲ ಎಂದು ಆರೋಪ ಮಾಡಿದ್ರು, ಗ್ರಾಮ ಸಭೆಯ ನಡವಳಿಯ ಮುಂದೆ ಜಿಲ್ಲಾಧಿಕಾರಿಗಳ ಆದೇಶಕ್ಕೆ ಯಾವುದೇ ಬೆಲೆ ಇಲ್ಲ ಹೀಗಾಗಿ ವಿಶೇಷ ಗ್ರಾಮ ಸಭೆ ಅರ್ಥ ಇಲ್ಲದ್ದು ಎಂದು ಸದಸ್ಯರುಗಳು ಈ ವೇಳೆ ಕೂಗಾಟ ಮಾಡಿದ್ರು.

ಗೊಂದಲದ ಸಭೆಯ ಎಲ್ಲಾ ಆಯಾಮಗಳನ್ನು ಅರಿತ ನೋಡಲ್ ಅಧಿಕಾರಿ ಎಸ್ ಕೃಷ್ಣಪ್ಪ ಅವರು ಗ್ರಾ.ಪಂ. ನಡಾವಳಿಗೆ ಅದರದೇ ಆದ ಗೌರವವಿದೆ ಜಿಲ್ಲಾಧಿಕಾರಿಗಳ ಆದೇಶಕ್ಕೆ ನಾವು ಬೆಲೆ ಕೊಡಬೇಕಿದೆ ಸಭೆಯಲ್ಲಿ ಒಮ್ಮತ ಮೂಡದೆ ಹೋದರೆ ನಿರ್ಣಯಗೊಳಿಸಲು ಸಾಧ್ಯವಾಗುವುದಿಲ್ಲ ಬಡವರ ಬಗ್ಗೆ ಕಾಳಜಿ ಇರುವ ಸರ್ಕಾರಗಳು ಮಾಡಿರುವ ಉದ್ದೇಶಗಳನ್ನ ಅರಿತು ಗ್ರಾ.ಪಂ ಸದಸ್ಯರು ಅವಕಾಶಗಳನ್ನು ಸದ್ಬಳಕೆ ಮಾಡಿ ಕೊಳ್ಳಬೇಕು ಸಭೆಯಲ್ಲಿ ಓಮ್ಮತ ನೋಡದ ಕಾರಣ ಇದರ ಬಗ್ಗೆ ವಿಸ್ತೃತವಾದ ವರದಿಯನ್ನು ಜಿಲ್ಲಾಧಿಕಾರಿಗಳು ಹಾಗೂ ಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ಅವರುಗಳ ಗಮನಕ್ಕೆ ತಂದು ಅವರುಗಳ ನಿರ್ದೇಶನ ಮಾರ್ಗದರ್ಶನದಂತೆ ಮುಂದಿನ ಸಭೆಯ ರೂಪರೇμÉ ಮತ್ತು ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Leave a Reply

Your email address will not be published. Required fields are marked *