ತುಮಕೂರು: ಪತ್ರಿಕಾ ವಿತರಕರು ಪ್ರತಿನಿತ್ಯ ನಸುಕಿನ ಮುಂಜಾನೆಯಲ್ಲಿ ಎದ್ದು ಚಳಿ ಮಳೆ ಗಾಳಿ ಎನ್ನದೆ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಪ್ರತಿ ಮನೆ ಮನೆಗೂ ಪತ್ರಿಕೆಗಳನ್ನ ತಲುಪಿಸುತ್ತಾರೆ ವೃತ್ತಿಯಲ್ಲಿ ಪ್ರವೃತ್ತಿ ಎಂಬ ಉದ್ದೇಶದೊಂದಿಗೆ ಬೇರೆ ಬೇರೆ ಕೆಲಸದ ನಡುವೆಯೂ ತಪ್ಪದೇ ಪ್ರತಿನಿತ್ಯ ಪತ್ರಿಕೆಗಳನ್ನ ಸರಬರಾಜು ಮಾಡುತ್ತಾರೆ ಹಾಗಾಗಿ ಸರ್ಕಾರ ಸೂಕ್ತ ಯೋಜನೆ ರೂಪಿಸಿಬೇಕುಎಂದು ಸಿದ್ದರಬೆಟ್ಟದ ಬಾಳೆಹೊನ್ನೂರು ಶಾಖಾ ಮಠದ ಶ್ರೀ ಶ್ರೀ ವೀರಭದ್ರ ಶಿವಚಾರ್ಯ ಸ್ವಾಮೀಜಿ ಅವರು ತಿಳಿಸಿದರು.
ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ
ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ನಗರ ಪ್ರದೇಶದಲ್ಲಿ ಬಡ ಕುಟುಂಬದ ವಿದ್ಯಾರ್ಥಿಗಳು ಕೂಡ ಪತ್ರಿಕೆಗಳನ್ನ ವಿತರಣೆ ಮಾಡಿ ಅದರಿಂದ ಬರುವ ಹಣವನ್ನ ತಮ್ಮ ವಿದ್ಯಾಭ್ಯಾಸಕ್ಕೆ ವಿನಯೋಗಿಸಿಕೊಂಡು ಸಾಧನೆ ಮಾಡಿರುವ ಘಟನೆಗಳು ನಮ್ಮ ಕಣ್ಣಮುಂದೆ ಇದೆ ಹೀಗಾಗಿ ಪತ್ರಿಕಾ ಸರಬರಾಜು ದಾರರಿಗೆ ಸರ್ಕಾರ ಮತ್ತು ಜನಪ್ರತಿನಿಧಿಗಳು ವಿಶೇಷ ಸೌಲಭ್ಯ ಸಹಕಾರ ಯೋಜನೆಗಳನ್ನು ರೂಪಿಸಿ ಅವರ ಶ್ರೇಯೋಭಿವೃದ್ಧಿಗೆ ಮುಂದಾಗಬೇಕು ಎಂದು ತಿಳಿಸಿದರು.
ಹಿರಿಯ ಪತ್ರಿಕೆ ಸಂಪಾದಕ ರವಿಹೆಗಡೆ ಮಾತನಾಡಿ ತುಮಕೂರು ಆರ್ಥಿಕ ವೇಗವಾಗಿ ಬೆಳೆಯುವ ನಗರ ಕಾರಣ ಇಲ್ಲಿನ ವಾತಾವರಣ ದಿನ ಪತ್ರಿಕೆ ವಿತರಕರ ಬವಣೆ, ಬಡತನವನ್ನು ನಾಟಕದ ಮೂಲಕಕಟ್ಟಿ ಕೊಟ್ಟಿದ್ದಾರೆ ಪತ್ರಿಕಾ ಸಂಪಾದಕರಗಳ ಬಗ್ಗೆ ಅನೇಕ ಸಿನಿಮಾ ಗಳಿವೆ ಆದರೆ ತೊಂಬತ್ತು ನಿಮಿಷಗಳ ನಿರಂತರ ವಾಗಿ ಭಾವ ತುಂಬಿ ಅಭಿನಯಿಸಿದ ವಿತರಕರ ನಾಟಕದಲ್ಲಿ ನವರಸಗಳು ಮೂಡಿವೆ ಇಂತಹ ನಾಟಕಗಳನ್ನು ರಾಜ್ಯಾದ್ಯಂತ ಪ್ರದರ್ಶನಗೊಳ್ಳುವ ಕೆಲಸವಾಗಬೇಕು ಇದಕ್ಕೆ ನಮ್ಮ ಸಹಕಾರವಿದೆ ಎಂದರು.
ಪತ್ರಿಕಾ ವಿತರಕರಿಗೆ ಅನೇಕ ಸೌಲಭ್ಯ ಸಹಕಾರ ಅಪಘಾತ ವಿಮೆ ಸೇರಿದಂತೆ ಪತ್ರಿಕಾರಂಗದ ಅಂಗವಾಗಿರುವ ವಿತರಕರಿಗೆ ಕೊಡಿಸುವ ಕೆಲಸ ಮಾಡಲಾಗುತ್ತಿದೆ ಇದರ ಜೊತೆಗೆ ಸರ್ಕಾರದ ಜನಪ್ರತಿನಿಧಿಗಳು ಪತ್ರಿಕೆ ಸಂಪಾದಕರುಗಳು ಸ್ಥಳೀಯ ಸಂಘ ಸಂಸ್ಥೆಗಳು ವಿತರಕರ ಧ್ವನಿಯಾಗಿ ನಿಲ್ಲಬೇಕು ಎಂದು ತಿಳಿಸಿದರು.
ಕೇಂದ್ರ ನಾಟಕ ಪ್ರಶಸ್ತಿ ಪುರ ಪುರಸ್ಕೃತ ಹಾಗೂ ಹಿರಿಯ ರಂಗಭೂಮಿ ಕಲಾವಿದ ಡಾಕ್ಟರ್ ಲಕ್ಷ್ಮಣ ದಾಸ್ ಅವರು ಮಾತನಾಡಿ ಪತ್ರಿಕ ವಿತರಕರು ಚಳಿಗಾಳಿ ಮಳೆ ಎನ್ನದೆ ಜೀವದ ಹಂಗು ತೊರೆದು ಪತ್ರಿಕೆ ವಿತರಣೆ ಮಾಡುತ್ತಾರೆ ಸರ್ಕಾರಗಳು ಇವರ ಪರವಾದ ಕಾನೂನು ಕಾಯ್ದೆಗಳನ್ನ ತಂದು ಇವರ ರಕ್ಷಣೆಗೆ ನಿಲ್ಲಬೇಕು ಎಂದು ಒತ್ತಾಯಿಸಿದರು.
ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ರಾಜ್ಯ ಕೆಪಿಸಿಸಿ ಉಪಾಧ್ಯಕ್ಷ ಮುರುಳಿಧರ್ ಹಾಲಪ್ಪ ಅವರು ಮಾತನಾಡಿ ಪತ್ರಿಕೆಗಳು ಮನೆ ಮಾತದಂತೆ ವಿತರಕರ ಬಗ್ಗೆ ಜನಸಾಮಾನ್ಯರು ಮಾತನಾಡುವ ಅಂತಾಗಬೇಕು ಸಾಕಷ್ಟು ಪರಿಶ್ರಮ ಹಾಕಿ ಪತ್ರಿಕೆಗಳನ್ನ ವಿತರಿಸುವ ಈ ಶ್ರಮಜೀವಿಗಳಿಗೆ ಗೌರವ ನೀಡುವಂತಹ ಕೆಲಸ ಆಗಬೇಕು ಪ್ರತಿನಿತ್ಯ ವಿತರಕರು ಪಡುವ ಭವಣೆ ಕಷ್ಟಗಳನ್ನ ನಾಟಕದ ಮೂಲಕ ಸಾರ್ಥಕ ಗೊಳಿಸಿದ ತಂಡಕ್ಕೆ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದು ಹೇಳಿದರು.
ಪತ್ರಿಕಾ ಸಂಪಾದಕ ಡಾ. ಎಸ್ ನಾಗಣ್ಣ ಅವರು ಮಾತನಾಡಿ ಕೋವಿಡ್ನ ನಂತರ ಪತ್ರಿಕಾ ವಿತರಕರ ಭವಣೆ ಹೇಳುತ್ತೀರದಾಗಿದೆ ಇವರನ್ನು ಜಾಗೃತಿಗೊಳಿಸುವಂತಹ ನಾಟಕ ಆಂದೋಲನಗಳು ಮತ್ತಷ್ಟು ಜಾಗೃತಗೊಳ್ಳಬೇಕು ವಿತರಕರು ಬಲಿಷ್ಠರಾದರೆ ಮನೆ ಮನೆಗೆ ಪತ್ರಿಕೆ ತಲುಪಿ ಎಲ್ಲರೂ ಪತ್ರಿಕೆಯಿಂದ ಬರುವ ಭಾಷೆ ವಿಚಾರ ವಸ್ತುವನ್ನು ಅರಿತುಕೊಳ್ಳುತ್ತಾರೆ ಇತ್ತೀಚಿಗೆ ಸರ್ಕಾರ ಶಾಲೆಗಳಲ್ಲಿ ಇತ್ತೀಚಿಗೆ ಸರ್ಕಾರ ಶಾಲೆಗಳಲ್ಲಿ ಮಕ್ಕಳು ಪತ್ರಿಕೆ ಓದುವ ಅಭಿಯಾನವನ್ನ ಕೈಗೊಂಡಿರುವುದು ಶ್ಲಾಘನೀಯವಾಗಿದೆ ವಿತರಕರನ್ನ ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪತ್ರಿಕೆಗಳ ಸಂಪಾದಕರುಗಳು ಮತ್ತು ವಿತರಕರ ಸಂಬಂಧಗಳು ಗಟ್ಟಿಯಾದಾಗ ಮಾತ್ರ ಇದು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಂಗಬ್ರಹ್ಮ ಡಾ ಎಸ್ ಎಲ್ ಎನ್ ಸ್ವಾಮಿ ರಚನೆಯ ಪತ್ರಿಕಾ ವಿತರಕರ ಅಂತರಂಗ ದರ್ಶನದ ಏಕವ್ಯಕ್ತಿ ರಂಗ ಪ್ರಯೋಗ ನಸುಕಿನ ನೂಗ ಎಂಬ ಸದಾಭಿರುಚಿಯ ಸಂಶೋಧನಾತ್ಮಕ ನಾಟಕವನ್ನು ಆಯೋಜನೆ ಮಾಡಲಾಗಿತ್ತು ಪ್ರಜಾಪ್ರಭುತ್ವದ ನಾಲ್ಕನೇ ಅಂಗ, ಪ್ರಭಾವಶಾಲಿ ಮಾಧ್ಯಮದ ದಿನಪತ್ರಿಕೆಗಳನ್ನು ನಸುಕಿನ ಜಾವದಲ್ಲಿ ಎದೆಗೆ ಹೌಚಿಕೊಂಡು ಶ್ರದ್ದೆಯಿಂದ ಸೂರ್ಯೋದಯದ ಒಳಗಾಗಿ ಮನೆ ಮನೆಗೆ ಮನಗಳಿಗೆ ತಲುಪಿಸುವ ವೀರಯೋಧರ ವಿತರಕ ಬಳಗ ಮಳೆ ಚಳಿ ಗಾಳಿ ಬಿಸಿಲು ಎನ್ನದೆ ಸ್ವಂತ ವಿಚಾರಗಳಿಗೆ ಮಹತ್ವ ಕೊಡದೆ ರಜೆಯ ಮೋಜು ಮಾಡದೆ ನಿತ್ಯ ಕಾಯಕವನ್ನ ಯಜ್ಞ ಕಾರ್ಯದಂತೆ ಮುನ್ನಡೆಸುವ ಲಕ್ಷಾಂತರ ಪತ್ರಿಕಾ ವಿತರಕರ ಅಂತರಂಗದ ತೂಳಲಾಟದ ವಿಚಾರ ವಿದ್ಯಮಾನವನ್ನ ನಾಟಕದಲ್ಲಿ ಯಶಸ್ವಿಯಾಗಿ ಕಟ್ಟಿಕೊಡಲಾಯಿತು.