ತುಮಕೂರು : ವಾಹನವೊಂದನ್ನು ಬಿಡುಗಡೆ ಮಾಡಲು ರೂ.40 ಸಾವಿರ ಲಂಚ ಪಡೆಯುತ್ತಿದ್ದ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‍ಐ ಚೇತನ್ ಅವರನ್ನು ಜನವರಿ 31ರ ಬೆಳಗ್ಗೆ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಠಾಣೆ ವ್ತಾಪ್ತಿಯಲ್ಲಿದ್ದ ವಾಹನ ಬಿಡುಗಡೆ ಮಾಡಲು ರೂ.1ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಪಿಎಸ್‍ಐ ಚೇತನ್ ರೂ.40 ಸಾವಿರವನ್ನು ತುಮಕೂರು ಕ್ಯಾತ್ಸಂದ್ರ ಟೋಲ್ ಬಳಿಯ ಹೋಟೆಲ್ ಮಾಲೀಕರಿಗೆ ನೀಡುವಂತೆ ವಾಹನದ ಮಾಲೀಕರಿಗೆ ತಿಳಿಸಿದ್ದರು, ಈ ಸಂಬಂಧ ವಾಹನ ಮಾಲೀಕರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಹೋಟೆಲ್ ಸಿಬ್ಬಂದಿ ಶುಕ್ರವಾರ ರಾತ್ರಿ ಹಣ ಪಡೆದುಕೊಳ್ಳುತ್ತಿದ್ದ ಸಮಯದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪಿಎಸ್‍ಐ ಚೇತನ್ ಹೇಸರು ಹೇಳಿದ್ದಾರೆ, ಈ ಹಿನ್ನೆಲೆಯಲ್ಲಿ ಶನಿವಾರ ಬೆಳಗಿನ ಜಾವ ಪಿಎಸ್‍ಐ ಚೇತನ್ ಅವರನ್ನು ಬಂದಿಸಿದ್ದಾರೆ.