ತಿಪಟೂರು ತಾಲ್ಲೂಕಿನ ಹಾಲ್ಕುರಿಕೆ ಗ್ರಾಮದಲ್ಲಿ ವಿಶಿಷ್ಟ ಮತ್ತು ವಿನೂತನ ಯೋಜನೆಯಾದ ‘ನಮ್ಮ ಆರೋಗ್ಯ ಕೇಂದ್ರ’ದ ಉದ್ಘಾಟನಾ ಸಮಾರಂಭ ಅದ್ದೂರಿಯಾಗಿ ನೆರವೇರಿತು.
ಈ ಕಾರ್ಯಕ್ರಮದಲ್ಲಿ ಕೆರಗೋಡಿ ರಂಗಾಪುರ ಸುಕ್ಷೇತ್ರಾಧ್ಯಕ್ಷ ಶ್ರೀ ಶ್ರೀ ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮೀಜಿ, ತಮ್ಮಡಿಹಳ್ಳಿ ಶ್ರೀಕ್ಷೇತ್ರ ವಿರಕ್ತ ಮಠದ ಶ್ರೀ ಶ್ರೀ ಶ್ರೀ ಡಾ. ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿ, ಅರಸೀಕೆರೆ ಮಾಡಾಳು ನಿರಂಜನ ಪೀಠದ ಶ್ರೀ ಶ್ರೀ ಶ್ರೀ ರುದ್ರಮುನಿ ಮಹಾಸ್ವಾಮೀಜಿ, ಆರ್ಟಿಸ್ಟ್ ಫಾರ್ ಹರ್ ಸಿ. ಇ. ಒ ಮತ್ತು ಅಧ್ಯಕ್ಷೆ ಡಾ.ಹೇಮಾ ದಿವಾಕರ್, ಬೆಂಗಳೂರಿನ ದಿವಾಕರ್ಸ್ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಜಿ.ವಿ. ದಿವಾಕರ್, ಸ್ಟ್ರೆಟಜಿಸ್ಟ್ ಎಂ.ಜೆ. ಶ್ರೀಕಾಂತ್, ಹಾಲ್ಕುರಿಕೆ ಗ್ರಾಮ ಪಂಚಾಯತಿ ಅಧ್ಯಕ್ಷ ಉಮಾಮಹೇಶ್, ಮಾಜಿ ಜಿ. ಪಂ. ಸದಸ್ಯ ತ್ರಿಯಂಬಕ ಮತ್ತು ಮಮತಾ ಉಮಾಮಹೇಶ್, ಬಳುವನೇರಲು ಗ್ರಾ. ಪಂ. ಅಧ್ಯಕ್ಷೆ ಸುಶೀಲಮ್ಮ ಹಾಗೂ ಸದಸ್ಯ ಸಿದ್ದಪ್ಪ, ಗ್ಯಾರಘಟ್ಟ ಗ್ರಾ. ಪಂ. ಅಧ್ಯಕ್ಷೆ ಗೀತಾ ಎಂ.ಎಂ., ಹಾಲ್ಕುರಿಕೆ ಗ್ರಾ. ಪಂ. ಮಾಜಿ ಅಧ್ಯಕ್ಷೆ ಲೋಲಾಕ್ಷಮ್ಮ, ಸಾರ್ಥವಳ್ಳಿ ಗ್ರಾ. ಪಂ. ಸದಸ್ಯೆ ಭವ್ಯ ಎಸ್. ಜೆ., ಆನಿವಾಳ ಗ್ರಾ. ಪಂ. ಸದಸ್ಯೆ ಸುಮಲತಾ ಪಿ. ಬಿ., ಸೂರನಹಳ್ಳಿ ಗ್ರಾ.ಪಂ. ಸದಸ್ಯ ಜಯಣ್ಣ, ಕೊಬ್ಬರಿ ದೊಡ್ಡಯ್ಯನಪಾಳ್ಯ ಗ್ರಾ.ಪಂ. ಸದಸ್ಯೆ ಕರಿಯಮ್ಮ, ಮುದ್ದೇನಹಳ್ಳಿ ಗ್ರಾ.ಪಂ. ಮಾಜಿ ಸದಸ್ಯೆ ಶೋಭರಾಣಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.