ಕುಣಿಗಲ್: ಕುಣಿಗಲ್ ಸ್ಟಡ್ ಫಾರಂನಲ್ಲಿ ಬೃಹತ್ತಾದ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಹೇಳಿದರು.
ಅವರಿಂದು ಕುಣಿಗಲ್‍ನಲ್ಲಿ ಹಮ್ಮಿಕೊಳ್ಳಲಾಗಿದ್ದ ಜನಸಂಕಲ್ಪ ಯಾತ್ರೆಯನ್ನು ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು, ಸ್ಟಡ್ ಫಾರಂ ಬಗ್ಗೆ ಈ ಭಾಗದ ಜನರ ಸಭೆಯ ಕರೆದು ಒಂದು ತೀರ್ಮಾನ ಮಾಡಿ ಕುಣಿಗಲ್ ತಾಲ್ಲೂಕಿನ ರೈತ ಮಕ್ಕಳಿಗೆ ಉಪಯೋಗ ಆಗಬೇಕು, ಅಲ್ಲದೆ ಕಲ್ಪತರು ನಾಡಾದ ಈ ನೆಲದಲ್ಲಿ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶವನ್ನು ಸ್ಥಾಪಿಸಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಠಿಯನ್ನು ಮಾಡಲಾಗುವುದು ಎಂದು ಹೇಳಿದರು.
ಈ ಮೂಲಕ ಮುಂದಿನ 2023ರ ಚುನಾವಣೆಗೆ ಮುನ್ನುಡಿ ಮಾತು ಆಡಿದ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಭವಿಷ್ಯ ಹೇಳುತ್ತೇನೆ ತುಮಕೂರು ಜಿಲ್ಲೆಯು ಇಡೀ ರಾಜ್ಯದಲ್ಲಿ ನಂಬರ್1 ಜಿಲ್ಲೆಯಾಗಲಿದೆ ಮುಂದೊಂದು ದಿನ ಜಿಲ್ಲೆಗೆ ಬೃಹತ್ ಕೈಗಾರಿಕೆಗಳು ಬರಲಿದ್ದು, ವಾಣಿಜ್ಯ ಜಿಲ್ಲೆಯಾಗಲಿದೆ ಅಂತಹ ಸಂದರ್ಭದಲ್ಲಿ ತುಮಕೂರಿಗೆ ಬೆಂಗಳೂರುನಲ್ಲಿರುವಂತಹ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಂದರೂ ಬರಬಹುದು ಎಂದು ಮುಖ್ಯಮಂತ್ರಿ ಹೇಳಿದರು.
ಅವರಿಂದು ಕುಣಿಗಲ್‍ನಲ್ಲಿ ಜನಸಂಕಲ್ಪ ಯಾತ್ರೆಯನ್ನು ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು, ಇಲ್ಲಿಯ ಶಾಸಕರು ಮತ್ತು ಸಂಸದರು ಜನಪರ ಕೆಲಸಗಳನ್ನು ಮಾಡದೆ ಸರ್ಕಾರದ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿ ಪಡಿಸುವ ಶಾಸಕ, ಸಂಸದರನ್ನು ಮನೆಗೆ ಕಳಿಸುವ ದಿನಗಳು ದೂರವಿಲ್ಲ ಎಂದರು.
ನೀರಾವರಿ ಯೋಜನೆಗೆ ಅಡ್ಡಿ-ಸಂಸದ-ಶಾಸಕರಿಗೆ ಸವಾಲಾಕಿದ ಮು.ಮಂ. ಬಸವರಾಜ ಬೊಮ್ಮಾಯಿ
ತುಮಕೂರು ಜಿಲ್ಲೆಯಲ್ಲಿ ಬಿಜೆಪಿ ಗಾಳಿ:
ತುಮಕೂರು : ಮಾರ್ಕೋನಹಳ್ಳಿ ಮತ್ತು ಮಂಗಳ ಜಲಾಶಕ್ಕೆ ನೀರಾವರಿ ಕಾರಿಡಾರ್ ನಿರ್ಮಾಣಕ್ಕೆ ಇಲ್ಲಿಯ ಸಂಸದರು ಮತ್ತು ಶಾಸಕರು ಅಡಿಗಲ್ಲು ಹಾಕಲು ಅಡ್ಡಿ ಪಡಿಸುತ್ತಿದ್ದಾರೆ ಎಂಬ ಮಾತಿದೆ, ಕೆಲವೆ ದಿನಗಳಲ್ಲಿ ಮಂಗಳ ಜಲಾಶಯ ನೀರಾವರಿ ಕಾರಿಡಾರ್‍ಗೆ ನಾನೇ ಅಡಿಗಲ್ಲು ಹಾಕುತ್ತೇನೆ ಎಂದು ಪರೋಕ್ಷವಾಗಿ ಸಂಸದ ಡಿ.ಕೆ.ಸುರೇಶ್ ಅವರಿಗೆ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಸವಾಲಾಕಿದರು.
ಬಿಜೆಪಿ ಗಾಳಿ : ತುಮಕೂರು ಜಿಲ್ಲೆಯಲ್ಲಿ ಕುಣಿಗಲ್, ಮಧುಗಿರಿ ಮತ್ತು ಕೊರಟಗೆರೆಗಳಲ್ಲಿ 2023ರ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸಲಿದ್ದೇವೆ ಎಂದು ಹೇಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಾತಿ-ಜಾತಿ, ಧರ್ಮ-ಧರ್ಮಗಳ ನಡುವೆ ಒಡೆದು, ಮರಳು ಮಾಡಿದ್ದಕ್ಕಾಗಿ ದೇಶದಲ್ಲಿ ಕಾಂಗ್ರೆಸ್ ನೆಲೆ ಕಳೆದುಕೊಂಡಿದೆ, ಅದೇ ರೀತಿ ರಾಜ್ಯದಲ್ಲೂ ಅಧಿಕಾರ ಕಳೆದುಕೊಂಡಿದೆ, ಸಾಮಾಜಿಕ ನ್ಯಾಯ, ಧೀನ-ದಲಿತರ ಬಗ್ಗೆ ಭಾಷಣ ಮಾಡಿ ಅವರನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಮುಂದುವರೆಯದಂತೆ ಮಾಡಿದ್ದೀರಿ ಎಂದು ಕಾಂಗ್ರೆಸ್ ಪಕ್ಷದ ನಾಯಕರನ್ನು ಕುಟುಕಿದರು.
ಸಿದ್ದರಾಮಯ್ಯನವರು ಹೇಳುತ್ತಾರೆ ನಾವು ರಾಜ್ಯವನ್ನು ಅಭಿವೃದ್ಧಿ ಮಾಡಿದ್ದೆವು ಎಂದು, ನಿಮ್ಮ ಕಾಲದಲ್ಲಿ ಕೊರೊನಾ ಬಂದಿತ್ತಾ, ನೆರೆ ಬಂದಿತ್ತಾ ಇಲ್ಲ ಹಾಗಾದರೆ ಎರಡು ಸಾವಿರ ಲಕ್ಷ ಸಾಲ ಏಕೆ ಮಾಡಿದ್ರಿ ಎಂದು ಪ್ರಶ್ನಿಸಿದರು.
ನೀರಾವರಿಗೆ ಕೊಟ್ಟ ಹಣ ಎಲ್ಲಿಗೆ ಹೋಯಿತು, ನೀವು ಭ್ರಷ್ಟರಲ್ಲದಿದ್ದರೆ ಲೋಕಾಯುಕ್ತ ಮುಚ್ಚಿ ಎಸಿಬಿ ಏಕೆ ಜಾರಿಗೆ ತಂದ್ರಿ, ಎಲ್ಲಾ ಕೇಸುಗಳನ್ನು, ಭ್ರಷ್ಟಚಾರವನ್ನು ಮುಚ್ಚಿ ಹಾಕಲು ಎಸಿಬಿ ತಂದು ‘ಬಿ’ ರಿಪೋರ್ಟ್ ಹಾಕಿಸಿಕೊಂಡು ಕೇಸುಗಳನ್ನು ಮುಚ್ಚಿ ಹಾಕಿದವರು ಯಾರು ಎಂದು ಪ್ರಶ್ನಿಸಿದರು.
ನಿಮ್ಮ ಸರ್ಕಾರ ಇದ್ದಾಗ ಬಡ ಮಕ್ಕಳ-ಹಾಸಿಗೆ ದಿಂಬಿನ ಹಣವನ್ನು ಬಿಡಲಿಲ್ಲ ಹಾಗೆ ಕೊಳ್ಳೆ ಹೊಡೆದ ನೀವು, ಮೋದಿ ನೀಡುವ 30 ರೂಪಾಯಿಗಳ ಪಡಿತರ ಅಕ್ಕಿಯನ್ನು 3ರೂಗಳ ಚೀಲದ ಮೇಲೆ ನಿಮ್ಮ ಪೋಟೋ ಹಾಕಿಕೊಂಡು ನಾವು ಅಕ್ಕಿ ಕೊಟ್ಟೆವು ಎಂದು ಹೇಳುತ್ತೀರಲ್ಲ, ಅದು ಅನ್ಯಭಾಗ್ಯ ಅಲ್ಲ ಕನ್ಯಭಾಗ್ಯ ಎಂದು ಕುಟುಕಿದರು.
ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಅವರನ್ನು ಸಿದ್ದರಾಮಯ್ಯ ಅವರು ಅವರಪ್ಪನಾಣೆ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಹೇಳುತ್ತಿದ್ದರು, ಆದರೆ ಇಬ್ಬರೂ ಮುಖ್ಯಮಂತ್ರಿಯಾದರು, ಅಂದರೆ ಸಿದ್ದರಾಮಯ್ಯನವರ ಮಾತಿಗೆ ವಿರುದ್ಧವಾಗಿ ಜನ 2018ರಲ್ಲಿ ಕಾಂಗ್ರೆಸ್‍ನ್ನು ಕಿತ್ತೊಗೆದರು ಎಂದು ಜರಿದರು.
ನಮ್ಮ ಸರ್ಕಾರವು ರೈತ ಮಕ್ಕಳಿಗೆ ವಿದ್ಯಾನಿಧಿ ತಂದಂತೆ ನೇಕಾರರು, ಮೀನುಗಾರರು, ಆಟೋ ಚಾಲಕರು, ಟಾಕ್ಸಿ ಚಾಲಕರುಗಳ ಮಕ್ಕಳಿಗೂ ಜಾರಿ ಮಾಡಲಾಗುವುದು, ಅಲ್ಲದೆ, ಬಡಗಿ, ಕಮ್ಮಾರ, ಕುಂಬಾರದಂತಹ ವರ್ಗಗಳಿಗೆ ಕಾಯಕ ಯೋಜನೆ, ಸ್ತ್ರೀ ಶಕ್ತಿ ಸಂಘಗಳಿಗೆ ಸಾಮಥ್ರ್ಯ ಯೋಜನೆ ಮತ್ತು ಯುವಕರಿಗೆ ವಿವೇಕಾನಂದರ ಹೆಸರಿನಡಿಯಲ್ಲಿ ‘ಯುವಶಕ್ತಿ ಸಂಘ’ ಜಾರಿ ಮಾಡಿ ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹಿಸಲಾಗುವುದು ಎಂದು ಹೇಳಿದರು.
ಇದಕ್ಕೂ ಮುನ್ನ ತುಮಕೂರಿನಲ್ಲಿ ನಾರಾಯಣ ದೇವಾಲಯ ಉಚಿತ ನೇತ್ರ ಚಿಕಿತ್ಸಾ ಕೇಂದ್ರ ಮತ್ತು ತುಮಕೂರು ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಾಲಯವನ್ನು ಉದ್ಘಾಟಿಸಿದರು.