40% ಕಮಿಷನ್ಗೆ ಮತ್ತೊಬ್ಬ ಗುತ್ತಿಗೆದಾರರು ಬಲಿಯಾದರೆ…….!
ಗುತ್ತಿಗೆದಾರ ಟಿ.ಎನ್.ಪ್ರಸಾದ್ ಆತ್ಮಹತ್ಯೆ

ತುಮಕೂರು : ತಾನು ಮಾಡಿಸಿದ ಕೆಲಸಗಳಿಗೆ ಬಿಲ್‍ಗಳು ಆಗದೆ ಸಾಲದ ಸುಳಿಗೆ ಸಿಲುಕಿ ಪ್ರಥಮ ದರ್ಜೆ ಗುತ್ತಿಗೆದಾರ ಟಿ.ಎನ್.ಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇತರ ಗುತ್ತಿಗೆದಾರರುಗಳನ್ನು ಬೆಚ್ಚಿ ಬೀಳಿಸಿದೆ.

ತುಮಕೂರಿನ ಸಪ್ತಗಿರಿ ಬಡಾವಣೆಯ ಟಿ.ಎನ್.ಪ್ರಸಾದ್ ಅವರು ದೇವರಾಯನದುರ್ಗದ ಗೆಸ್ಟ್‍ಹೌಸ್‍ನಲ್ಲಿ ಪ್ಯಾನ್‍ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಜಿಲ್ಲಾಧ್ಯಕ್ಷರಾದ ಬಲರಾಮ ಅವರು ಸ್ಥಳಕ್ಕೆ ಆಗಮಿಸಿ ಟಿ.ಎನ್.ಪ್ರಸಾದ್ ಅವರು ಉತ್ತಮ ಗುತ್ತಿಗೆದಾರರಾಗಿದ್ದು, ಇತ್ತಿಚೆಗೆ ಅವರು ಮಾಡಿಸಿದ ಕೆಲಸಗಳಿಗೆ ಬಿಲ್‍ಗಳು ಆಗಿರಲಿಲ್ಲ, ಸಾಲದ ಸುಳಿಗೆ ಸಿಕ್ಕಿದ್ದ ಪ್ರಸಾದ್ ಅವರು ಇತ್ತೀಚೆಗೆ ಮನೆಯನ್ನು ಮಾರಾಟ ಮಾಡಿದ್ದರು.

ತಾವು ಮಾಡಿಸಿದ್ದ ಹಲವಾರು ಕೆಲಸಗಳ ಬಿಲ್‍ಗಳನ್ನು ಪೆಂಡಿಂಗ್ ಇಡಲಾಗಿತ್ತು, ಬಡ್ಡಿಗೆ ಹಣ ತಂದು ಕಾಮಗಾರಿಗಳನ್ನು ಮಾಡಿದ್ದರು, ಇವರು ಮಾಡಿದ್ದ ಕಾಮಗಾರಿಗಳಿಗೆ ಅಧಿಕಾರಿಗಳು ಬಿಲ್ ಮಾಡದೆ ವರ್ಷಾನುಗಟ್ಟಲೆ ಬಿಲ್‍ಗಳನ್ನು ಪೆಂಡಿಂಗ್ ಇಟ್ಟಿದ್ದರು, ಪೇಮೆಂಟ್ ಬಿಲ್‍ಗಳು ಸಹ ಆಗಿರಲಿಲ್ಲ ಎಂದರು.
ಇತ್ತೀಚೆಗೆ ಇವರಿಗೆ ಸಾಲ ಪಡೆದವರು ಹಣ ನೀಡುವಂತೆ ಒತ್ತಡವನ್ನು ಹಾಕಿದ್ದರು, ಇವರ ಪರಿಸ್ಥಿತಿಯನ್ನು ಅಧಿಕಾರಿಗಳಿಗೆ ಹೇಳಿಕೊಂಡರು ಬಿಲ್‍ಗಳನ್ನು ಮಾಡಿರಲಿಲ್ಲ ಎನ್ನಲಾಗುತ್ತಿದೆ.

ಇದರಿಂದ ಮನನೊಂದ ಪ್ರಥಮ ದರ್ಜೆ ಗುತ್ತಿಗೆದಾರರಾಗಿದ್ದ ಟಿ.ಎನ್.ಪ್ರಸಾದ್ ಅವರು ಆತ್ಮಹತ್ಯೆಗೆ ಶರಣಾಗಿದ್ದರೆ.

ವಿಷಯ ತಿಳಿಯುತ್ತಿದಂತೆ ಜಿಲ್ಲೆಯ ಗುತ್ತಿಗೆದಾರರು, ಕುಟುಂಬಸ್ಥರು ಸ್ಥಳಕ್ಕೆ ಆಗಮಿಸಿದರು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಸಂದರ್ಭದಲ್ಲಿ ಗುತ್ತಿಗೆದಾರರುಗಳು ಸರ್ಕಾರದಿಂದ ಬಿಲ್‍ಗಳು ಆಗದಿರುವುದೇ ಇಂತಹ ಆತ್ಮಹತ್ಯೆಗೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಇದು ಸಹ 40% ಕಮಿಷನ್ಗೆ ಆದ ಬಲಿ ಎಂದು ದೂರಿದರು.

Leave a Reply

Your email address will not be published. Required fields are marked *