ತಿಪಟೂರು : ಕೆಲವೊಮ್ಮೆ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಲು ರಾಜಕೀಯ ಅಧಿಕಾರ ಮತ್ತು ಸ್ಥಾನ ಮುಖ್ಯ. ನಾನು ಚುನಾಯಿತ ಪ್ರತಿನಿಧಿಯಾಗದೆ ನಿಮ್ಮ ಸೇವೆ ಮಾಡಲು ಸಾಧ್ಯವಾದಾಗ, ನಾನು ನಿಮ್ಮನ್ನು ಶಾಸಕಾಂಗ ಸಭೆಯಲ್ಲಿ ಪ್ರತಿನಿಧಿಸಿದರೆ ನಾನು ಪ್ರತಿನಿತ್ಯ ಹೆಚ್ಚು ಕೆಲಸ ಮಾಡಲು ಸಾಧ್ಯ ಎಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸಿ. ಬಿ. ಶಶಿಧರ್ (ಟೂಡಾ) ತಿಳಿಸಿದರು.
ತಿಪಟೂರಿನ ಕೆ. ಬಿ ಕ್ರಾಸ್ ನಲ್ಲಿ ನಡೆದ ಆರೋಗ್ಯ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನೀವೆಲ್ಲರೂ ನನ್ನ ಬೆಂಬಲಕ್ಕೆ ನಿಂತು ರಾಜಕೀಯ ಅಧಿಕಾರ ಪಡೆಯಲು ಸಹಕರಿಸಿದರೆ ತಿಪಟೂರಿಗಾಗಿ ಇನ್ನೂ ಹೆಚ್ಚಿನ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡುವೆ. ಜನಸ್ಪಂದನ ಟ್ರಸ್ಟ್ ಮೂಲಕ ನಾನು ಕೆಲಸ ಮಾಡುವುದನ್ನು ನೀವೆಲ್ಲರೂ ನೋಡಿದ್ದೀರಿ. ನಾನು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಸಾವಿರಾರು ಆಹಾರ ಕಿಟ್ ಗಳನ್ನು ವಿತರಿಸಿದ್ದು ನಿಮ್ಮ ನೆನಪಿಗೆ ಬರಬಹುದು ಅಲ್ಲವೇ? ಸದ್ಯ ಆರೋಗ್ಯ ಸೇವೆಗೆ ಹೆಚ್ಚು ಒತ್ತು ನೀಡುತ್ತಿದ್ದೇನೆ. ತಿಪಟೂರಿನ ಯುವಕರ ಉದ್ಯೋಗದ ಅಗತ್ಯಗಳಿಗೆ ಸ್ಪಂದಿಸುತ್ತೇನೆ. ಶೀಘ್ರದಲ್ಲೇ ನಾನು ಈ ಬಗ್ಗೆಯೂ ಕಾರ್ಯಪ್ರವೃತ್ತನಾಗುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಆರ್ಟಿಸ್ಟ್ ಫಾರ್ ಹರ್ ಸಂಸ್ಥೆಯ ಅಧ್ಯಕ್ಷೆ ಮತ್ತು ಸ್ತ್ರೀರೋಗ ತಜ್ಞೆ ಡಾ.ಹೇಮಾ ದಿವಾಕರ್ ಮಾತನಾಡಿ, ಮನಸಿದ್ದಲ್ಲಿ ಮಾರ್ಗ ಎಂಬಂತೆ ಆರೋಗ್ಯ ಸಖಿಯರಿದ್ದಲ್ಲಿ ಆರೋಗ್ಯ ಕೇಂದ್ರವಿದೆ ಎಂದು ಅಭಿಪ್ರಾಯಪಟ್ಟರು.
ಗುಣಮಟ್ಟದ ಆರೋಗ್ಯ ರಕ್ಷಣೆಯನ್ನು ಸಮಾಜದ ಪ್ರತಿ ಮಹಿಳೆಗೂ ತಲುಪಿಸುವ ಉತ್ಸಾಹ ಮತ್ತು ದೃಢ ನಿರ್ಧಾರದೊಂದಿಗೆ, ಡಿಜಿಟಲ್ ತಂತ್ರಜ್ಞಾನವನ್ನು ಆರೋಗ್ಯ ಸಖಿಯರಿಗೆ ತರಬೇತಿ ನೀಡಲು ಮತ್ತು ಸಮಾಲೋಚನೆಗಾಗಿ ವೀಡಿಯೊ ಕರೆಯಲ್ಲಿ ತಜ್ಞರೊಂದಿಗೆ ಸಂಪರ್ಕಿಸಲು ಬಳಸಲಾಗಿದೆ. ಆರೋಗ್ಯ ಕೇಂದ್ರದಲ್ಲಿರಕ್ತಹೀನತೆ, ಮಧುಮೇಹ, ಅಧಿಕ ರಕ್ತದೊತ್ತಡ, ಪೌಷ್ಟಿಕಾಂಶ ಕೊರತೆ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವುದಕ್ಕೆ ಒತ್ತು ನೀಡಲಾಗಿದೆ ಎಂದು ಅವರು ವಿವರಿಸಿದರು.
ನಮ್ಮ ಆರೋಗ್ಯ ಕೇಂದ್ರವನ್ನು ಗೋಡೆಕೆರೆ ಭೂಸುಕ್ಷೇತ್ರದ ಚರಪಟ್ಟಾಧ್ಯಕ್ಷರಾದ ಪರಮ ಪೂಜ್ಯ ಶ್ರೀಶ್ರೀಶ್ರೀ ಮೃತ್ಯುಂಜಯ ದೇಶಿಕೇಂದ್ರ ಮಹಾಸ್ವಾಮೀಜಿಯವರು ವಿದ್ಯುಕ್ತವಾಗಿ ಉದ್ಘಾಟಿಸಿದರು. ನಂತರ ಮಾತಾ ರೆಸಿಡೆನ್ಸಿ ಹೋಟೆಲ್ ಆವರಣದಲ್ಲಿ ಬಹಿರಂಗ ಸಭೆ ನಡೆಯಿತು.
ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ತುಮಕೂರಿನ ಶ್ರೀ ಸಿದ್ಧಾರ್ಥ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಡಾ.ದ್ವಾರಕನಾಥ್ ಎಲ್, ಬೆಂಗಳೂರಿನ ದಿವಾಕರರ್ಸ್ ಸ್ಪೆಷಾಲಿಟಿ ಆಸ್ಪತ್ರೆಯ ಡಾ.ಜಿ.ವಿ. ದಿವಾಕರ್, ಶ್ರೀ ಸಿದ್ಧಾರ್ಥ ಅಡ್ವಾನ್ಸ್ ಹಾರ್ಟ್ ಸೆಂಟರ್‌ನ ಮೇಲ್ವಿಚಾರಕರು ಹಾಗೂ ಕಾರ್ಡಿಯಾಕ್ ಫ್ರಾಂಟಿಡಾ ಸಂಸ್ಥೆಯ ನಿರ್ದೇಶಕರಾದ ಡಾ.ತಮೀಮ್ ಅಹಮದ್, ಬೆಂಗಳೂರಿನ ಎಂಜೆಎಸ್ ಪಿಆರ್ ನ ಎಂ.ಜೆ. ಶ್ರೀಕಾಂತ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ನಂದಿನಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ತ್ರಿಯಂಬಕ ಹಾಗೂ ಅತಿಥಿಯಾಗಿ ಹಾಲ್ಕುರಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮಾಮಹೇಶ್ ಭಾಗವಹಿಸಿದ್ದರು.
ಹಾಗೇಯೇ ಬಳುವನೇರಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲಮ್ಮ, ಸದಸ್ಯರಾದ ರಾಜೇಶ್ವರಿ, ಶೋಭಾ, ಕಲಾ, ಸಾರ್ಥವಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ನೇತ್ರಾವತಿ ರಮೇಶ್,ಭವ್ಯ ಎಸ್. ಜೆ., ತಡಸೂರು ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರುತಿ, ಭವ್ಯ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಮಮತಾ ಉಮೇಶ್, ಮಾವಿನಳ್ಳಿ ಗ್ರಾಮ ಪಂಚಾಯಿತಿ ಕಾಂಗ್ರೆಸ್ ಮುಖಂಡರಾದ ಕಾವ್ಯ ಜಗದೀಶ್, ಯಚ್ನೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಪುಷ್ಪ ಜಗದೀಶ್, ಸದಸ್ಯರಾದ ಸುಧಾ ಉಮೇಶ್,ಗೀತಾ ರೇಣುಕಾಸ್ವಾಮಿ, ಗುಡಿಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ರೇಣುಕಮ್ಮ, ಕರಿಯಮ್ಮ, ಮಮತಾ, ಹಾಲ್ಕುರಿಕೆ ಗ್ರಾಮ ಪಂಚಾಯಿತಿ ಸದಸ್ಯರಾದ ಜಯಶೀಲ, ರೇಖಾ, ಲೊಲಾಕ್ಷಮ್ಮ ಹಾಗೂ ಮತ್ತಿತರರು ಉಪಸ್ಥಿತರಿದ್ದರು.