ತ್ರಿಕಾಲ ಜ್ಞಾನಿಗಳು ಶ್ರೀ ಯೋಗಿ ನಾರೇಯಣರು – ಕೆ.ಎಸ್. ಸಿದ್ದಲಿಂಗಪ್ಪ.

ತುಮಕೂರು: ಎಲ್ಲಾ ಹಿಂದುಳಿದ ವರ್ಗಗಳ ಗುರು ಸ್ಥಾನದ ಮಹನೀಯರು ತಮ್ಮ ಅಪಾರ ಜ್ಞಾನ ಸಂಪತ್ತಿನಿಂದ ಮುಂದಿರುವವರು. ಆದೇ ಸಾಲಿಗೆ ಸೇರಿದ ಶ್ರೀ ಯೋಗಿ ನಾರೇಯಣರು ಮಾನವನÀ ಒಳಿತಿಗಾಗಿ ಹಿತೊಪದೇಶಗಳನ್ನು ನೀಡಿ ತ್ರಿಕಾಲ ಜ್ಞಾನಿಗಳದವರು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ಹೇಳಿದರು.

ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಬಲಿಜ ಸಂಘದ ವತಿಯಿಂದ ನಡೆದ ಕಾಲಜ್ಞಾನಿ ಶ್ರೀ ಯೋಗಿ ನಾರೇಯಣ ಯತೀಂದ್ರರ 297 ನೇ ವರ್ಷದ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಶ್ರೀ ಯೋಗಿ ನಾರೇಯಣರು ಸಂಸಾರಿಕ ಜಗತ್ತನ್ನು ಪ್ರವೇಶಿಸಿ ನಂತರ ಅಪಾರ ಜ್ಞಾನ ಸಂಪತ್ತು ಪಡೆದು ಮನವ ಕಲ್ಯಾಣ ಕ್ಕೆ ಸಂದೇಶ ನೀಡಿದ ಮಹನೀಯರು. ಇಂದಿನ ವಿದ್ಯಾರ್ಥಿಗಳು ಇಂತಹ ಯೋಗಿಗಳ ಚರಿತ್ರೆ, ಇತಿಹಾಸ ತಿಳಿದುಕೊಂಡು ತಮ್ಮ ಜೀವನದಲ್ಲಿ ಅಳವಡಿಕೊಳ್ಳುವ ಅಗತ್ಯವಿದೆ ಎಂದರು.

ನಿವೃತ್ತ ಪ್ರಾಂಶುಪಾಲ ಹೆಚ್.ಬಿ. ಪ್ರಕಾಶ್ ಉಪನ್ಯಾಸಕರಾಗಿ ಮಾತನಾಡಿ, ಶ್ರೀ ಯೋಗಿ ನಾರೇಯಣರು ಸಿದ್ದಿ ಪುರುಷರು, ಪವಾಡ ಪುರುಷರೂ ಆಗಿದ್ದಾರೆ. ಅವರು ಮನುಕೂಲದ ಉದ್ದಾರಕ್ಕಾಗಿ ಆನೇಕ ಗ್ರಂಥಗಳನ್ನು ರಚಿಸಿದ್ದಾರೆ. ಇವರ ಕಾಲಜ್ಞಾನ ಗ್ರಂಥವು ಜಗತ್ತಿನಲ್ಲಿ ನಡೆಯುತ್ತಿರುವ ಪ್ರಚಲಿತ ವಿದ್ಯಾಮಾನಕ್ಕೆ ಸಾಕ್ಷಿಯಾಗಿದೆ. ಮನುಷ್ಯನು ತನ್ನ ಲೌಕಿಕ ಜಂಜಾಟಗಳಿಂದ ಇಚೆ ಬಂದು ಸಿದ್ದಿ ಪುರುಷರ ಜೀವನ ಚರಿತ್ರೆಗಳನ್ನು ಓದಿ ತಮ್ಮ ಜಿವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದರು.

ಬಲಿಜ ಸಮಾಜದ ಮುಖಂಡ ಹಾಗೂ ಸಮಾಜ ಸೇವಕ ಎಸ್.ಪಿ. ಚಿದಾನಂದ್ ಮಾತನಾಡಿ, ತಾತಯ್ಯ ಪವಾಡ ಪುರುಷರಾಗಿದ್ದು ಅವರ ಸಂದೇಶಗಳನ್ನು ಮಕ್ಕಳಿಗೆ ತಿಳಿಸಬೇಕು. 199 ಹಿಂದುಳಿದ ಜಾತಿಗಳು ಒಂದಾಗುವ ಅಗತ್ಯವಿದ್ದು, ಎಲ್ಲಾ ಹಿಂದುಳಿದ ಜಾತಿಗಳು ತಮ್ಮ ಒಗ್ಗಟ್ಟು ಪ್ರದರ್ಶಿಸಬೇಕು ಎಂದರು. ನಾವು ಸಣ್ಣವರಲ್ಲ ಹೃದಯ ಶ್ರೀಮಂತರಾಗಿದ್ದು ಎಲ್ಲ ವರ್ಗಗಳು ರಾಜಕೀಯವಾಗಿ, ಆರ್ಥಿಕವಾಗಿ ಮುಂದೆ ಬರಬೇಕು ಎಂದು ಕರೆ ನೀಡಿದರು.

ಬಲಿಜ ಸಮಾಜದ ಮುಖಂಡ ಹಾಗೂ ಸಮಾಜ ಸೇವಕ ಎನ್.ಗೋವಿಂದರಾಜು ಮಾತನಾಡಿ, ಮುತ್ತೈದೆಯರಿಗೆ ಬಳೆ,ಅರಿಶಿಣ, ಕುಂಕುಮ ನೀಡುವಂತಹ ಕಾಯಕ ಮಾಡಿಕೊಂಡು ಬಂದವರು ನಾವು. ನಾವೆಲ್ಲರೂ ಭಾಗ್ಯವಂತರು ಎಂದರು.

ತುಮಕೂರು ನಗರದಲ್ಲಿ ಯೋಗಿ ನಾರಾಯಣರ ಗ್ರಂಥಾಲಯ ಸ್ಥಾಪನೆ ಹಾಗೂ ಅವರ ಹೆಸರಿನಲ್ಲಿ ಇನ್ಟಿಟಿಟ್ಯೂಟ್ ಆಗಬೇಕು.ವಿದ್ಯಾಭ್ಯಾಸಕ್ಕಾಗಿ ನಮಗೆ 2 ಎ ಪ್ರವರ್ಗ ಸಿಕ್ಕಿದೆ. ರಾಜಕೀಯ ಹಾಗೂ ಉದ್ಯೋಗಕ್ಕೆ ನಮಗೆ 2ಎ ಪ್ರವರ್ಗ ಇನ್ನೂ ಸಿಕ್ಕಿಲ್ಲ. ಇದಕ್ಕಾಗಿ ನಮ್ಮ ಜನಾಂಗ ಹೋರಾಟ ಮಾಡುವ ಅನಿವಾರ್ಯ ಎದುರಾಗಿದೆ ಎಂದರು.

ಸಮಾರಂಭದಲ್ಲಿ ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ಟಿ.ಆರ್.ಆಂಜಿನಪ್ಪ, ಪ್ರಧಾನ ಕಾರ್ಯದರ್ಶಿ ಟಿ.ಆರ್.ಎಚ್. ಪ್ರಕಾಶ್ ಸೇರಿದಂತೆ ಬಲಿಜ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *