ತುಮಕೂರು: ಸಂಕೀರ್ಣವಾದ ಹೃದಯದ, ಜನ್ಮಜಾತ ಹೃದಯರೋಗ (TAPVC) ಸಮಸ್ಯೆಗೆ ತುತ್ತಾಗಿದ್ದ 30 ದಿನದ ಹೆಣ್ಣು ಮಗುವಿಗೆ ಹೃದಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮುಗಿಸಿ, ಮಗುವಿಗೆ ಮರುಹುಟ್ಟು ನೀಡಿರುವ ನಗರದ ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ‘ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್ ವೈದ್ಯರ ತಂಡ ಇನ್ನೊಂದು ಮೈಲಿಗಲ್ಲು ಸ್ಥಾಪಿಸಿದೆ ಎಂದು ಕಾರ್ಡಿಯಾಕ್ ಪ್ರಾಂಟೀಡಾ ಮತ್ತು ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್‍ನ ನಿರ್ದೇಶಕರಾದ ಡಾ.ತಮೀಮ್ ಅಹಮ್ಮದ್ ಅವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ತುಮಕೂರು ಜಿಲ್ಲೇಯ ಚಿಕ್ಕನಾಯಕನಹಳ್ಳಿ ತಾಲೂಕಿನ ಪಂಕಜನಹಳ್ಳಿ ನಿವಾಸಿಯಾದ ಸವಿತಾ ಮತ್ತು ಮಲ್ಲಿಕಾರ್ಜುನ ಸ್ವಾಮಿ ಇವರಿಗೆ ಅಕಾಲಿಕವಾಗಿ ಜನಿಸಿದ ಹೆಣ್ಣು ಮಗುವು ಹುಟ್ಟಿನಿಂದಲೇ ಜನ್ಮಜಾತ ಹೃದಯರೋಗ (TAPVC) ಸಮಸ್ಯೆಯಿಂದ ಬಳಲುತ್ತಿತ್ತು. ಈ ಮಗುವಿಗೆ ಆಗಿರುವ ಹೃದಯ ಶಸ್ತ್ರಚಿಕಿತ್ಸೆ ಅತೀ ಸೂಕ್ಷ್ಮವಾಗಿದ್ದು, ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಹುಟ್ಟಿದಾಗ 1.4ಕಿ.ಗ್ರಾಂ ತೂಕವಿರುವ ಈ ಮಗುವು ಖರ್ಜೂರ ಗಾತ್ರದ ಹೃದಯವನ್ನು ತೆರೆದ ಹೃದಯ ಶಸ್ತ್ರಚಿಕತ್ಸೆ ಮಾಡುವ ಮೂಲಕ ಮಗುವಿನ ಬಾಳಿಗೆ ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್ ಬೆಳಕಾಗಿದೆ ಎಂದರು.
ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್‍ಸೆಂಟರ್’ನ ಮೇಲ್ವಿಚಾರಕರಾದ ಹಾಗೂ “ಕಾರ್ಡಿಯಾಕ್ ಫ್ರಾಂಟಿಡಾ” ಸಂಸ್ಥೆಯ ನಿರ್ದೇಶಕ ಡಾ.ತಮೀಮ್‍ಅಹಮ್ಮದ್ ನೇತೃತ್ವದಲ್ಲಿ ಡಾ.ಅಮೀತ್ ಲಾಲ್, ಡಾ.ತಹೂರ್, ಡಾ.ಸುರೇಶ್, ಡಾ.ಶ್ರೀನಿವಾಸ್, ಡಾ.ಮಸ್ತಾನ್, ವಿವೇಕ್, ಕ್ರಿಸ್ಟೀನಾ ಹಾಗೂ ತಾಂತ್ರಿಕ ಸಿಬ್ಬಂದಿಗಳನ್ನು ಒಳಗÉೂಂಡ ತಂಡ ಸರ್ವಸನ್ನದ್ಧವಾಗಿ ಕೆಲಸ ಮಾಡುತ್ತಿದೆ ಎಂದು ಹಾರ್ಟ್ ಸೆಂಟರ್‍ನ ಸಿಇಓ ಹಾಗೂ ಪ್ರಾಂಶುಪಾಲರಾದ ಡಾ.ಪ್ರಭಾಕರ್ ಅವರು ವಿವರಿಸಿದರು.
ಭಾರತದಿಂದ ವಿದೇಶಕ್ಕೆ ಹೋಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಬದಲಾಗಿ ತುಮಕೂರಿನಂತ ಪ್ರದೇಶದಲ್ಲಿಯೇ ಅಂತಾರಾಷ್ಟ್ರೀಯ ಮಟ್ಟದ ವೈದ್ಯಕೀಯ ಸೌಲಭ್ಯ, ಆಧುನಿಕ ಉಪಕರಣಗಳ ಅಳವಡಿಕೆ, ನುರಿತ ತಜ್ಞ ವೈದ್ಯರತಂಡ ತುಮಕೂರಿನಂತಹ ಪ್ರದೇಶದಲ್ಲಿ ಇದ್ದು ಅತೀ ಸೂಕ್ಷ್ಮರೀತಿಯ ಹೃದಯ ಶಸ್ತ್ರ್ರ ಚಿಕಿತ್ಸೆಗಳನ್ನು ಇಲ್ಲಿ ಯಶಸ್ವಿಯಾಗಿ ಮಾಡಲಾಗುತ್ತಿದೆ ಎಂಬುವುದನ್ನು ‘ಕಾರ್ಡಿಯಾಕ್ ಫ್ರಾಂಟಿಡಾ ಹಾಗೂ ಸಿದ್ಧಾರ್ಥ ಹಾರ್ಟ್ ಸೆಂಟರ್’ ಸೂಪರ್ ಸ್ಪೆμÁಲಿಟಿ ಆಸ್ಪತ್ರೆಯ ವೈದ್ಯರತಂಡ ಸಾಬೀತು ಪಡಿಸಿದೆ ಎಂದು ಡಾ. ಪ್ರಭಾಕರ ತಿಳಿಸಿದರು.
TAPVC ಹೊಂದಿರುವ ಶಿಶುಗಳು ಸಾಮಾನ್ಯವಾಗಿ ಬಲ ಹೃತ್ಕರ್ಣದ ಮತ್ತು ಎಡ ಹೃತ್ಕರ್ಣದ ನಡುವೆ ರಂಧ್ರವನ್ನು ಹೊಂದಿರುತ್ತವೆ. (ಹೃತ್ಕರ್ಣದ ಸೆಪ್ಟಲ್ ದೋಷ) ಇದು ಅಶುದ್ಧ ರಕ್ತವನ್ನು ಹೃದಯದ ಎಡಭಾಗಕ್ಕೆ ಮತ್ತು ದೇಹದ ಉಳಿದ ಭಾಗಗಳಿಗೆ ಪಂಪ್ ಮಾಡುತ್ತದೆ. ಕೆಲವು ಮಕ್ಕಳು ಹೃತ್ಕರ್ಣದ ಸೆಪ್ಟಲ್ ದೋಷವನ್ನು ಹೊರತುಪಡಿಸಿ TAPVC ಜೊತೆಗೆ ಇತರ ಹೃದಯ ದೋಷಗಳನ್ನು ಹೊಂದಿರಬಹುದು. ಈ ಸಮಸ್ಯೆಯಿಂದ ಬಳಲುವ ಜನ್ಮಜಾತ ಮಗುವಿನ ಚರ್ಮ, ತುಟಿ ಹಾಗೂ ಉಗುರುಗಳು ನೀಲಿ ಬಣ್ಣಕ್ಕೆ ತಿರುಗುತ್ತದೆ. ಜೊತೆಗೆ ಉಸಿರಾಟದ ಸಮಸ್ಯೆ, ಸುಸ್ತು ಮತ್ತು ಸರಿಯಾಗಿ ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ. ಇಂತಹ ಗಂಭೀರ ಸಮಸ್ಯೆ ಎದುರಿಸಿದ ಮಗುವಿಗೆ ಶಸ್ತ್ರಚಿಕಿತ್ಸೆ ಮೂಲಕ ಮುಕ್ತಿ ನೀಡಲಾಗಿದೆ. ಆಕೆ ಭವಿಷ್ಯದ ಬದುಕು ಕಾಣಬಹುದಾಗಿದೆ ಎಂದು ಡಾ.ತಮೀಮ್ ಅಹಮ್ಮದ್ ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಸಾಹೇ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ.ಕೆ.ಬಿ ಲಿಂಗೇಗೌಡ, ರಿಜಿಸ್ಟ್ರಾರ್ ಡಾ. ಎಂ.ಝೆಡ್ ಕುರಿಯನ್, ಡಾ.ಅಶೋಕ, ಹೆಣ್ಣುಶಿಶುವಿನ ಪೋಷಕರಾದ ಮಲ್ಲಿಕಾರ್ಜುನ ಸ್ವಾಮಿ ಅವರು ಪತ್ರಿಕಾ ಗೋಷ್ಠಿಯಲ್ಲಿ ಭಾಗಿಯಾಗಿದ್ದರು.