ತುಮಕೂರು : ತುಮಕೂರು ನಗರದಲ್ಲಿ ಬಿಜೆಪಿಯ ಜ್ಯೋತಿಗಣೇಶ್ ಅವರು ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.
15ನೇ ಸುತ್ತಿನವರೆಗೂ ಜೆಡಿಎಸ್ ಮುನ್ನಡೆ ಕಾಯ್ದುಕೊಂಡಿತ್ತು, ನಡುವೆ ಒಂದೆರಡು ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದರು.
16 ಮತ್ತು 17ನೇ ಸುತ್ತಿನಲ್ಲಿ ಮುನ್ನಡೆ ಸಾಧಿಸಿದ ಜಿ.ಬಿ.ಜ್ಯೋತಿಗಣೇಶ್ ಅವರು 3600 ಮತಗಳಿಂದ ಜೆಡಿಎಸ್ ಅಭ್ಯರ್ಥಿ ಎನ್.ಗೋವಿಂದರಾಜು ಅವರನ್ನು ಪರಾಭವಗೊಳಿಸಿದ್ದಾರೆ.
ನಿನ್ನೆಯೇ ಶಾಸಕರೆಂದು ನಾಮ ಫಲಕ ಬರೆಸಿಕೊಂಡಿದ್ದ ಎನ್.ಗೋವಿಂದರಾಜುಗೆ 3ನೇ ಬಾರಿಯೂ ಗೆಲುವು ಸಾಧಿಸಲಾಗಿಲ್ಲ.