ತುಮಕೂರು ಜಿಲ್ಲೆಯಲ್ಲಿ 7 ಕಾಂಗ್ರೆಸ್, 2ಬಿಜೆಪಿ, 2ಜೆಡಿಎಸ್ ಜಯಭೇರಿ

ತುಮಕೂರು : ತುಮಕೂರು ಜಿಲ್ಲೆಯಲ್ಲಿ 7 ಕ್ಷೇತ್ರಗಳಲ್ಲಿ ಜಯ ಸಾಧಿಸುವ ಮೂಲಕ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗಳಿಸಿದ್ದು, ಬಿಜೆಪಿ ಮತ್ತು ಜೆಡಿಎಸ್ ತಲಾ 2 ಸ್ಥಾನಗಳಲ್ಲಿ ಜಯಗಳಿಸಿವೆ.

ಕಾಂಗ್ರೆಸ್ ಪಕ್ಷವು ಕೊರಟಗೆರೆ-ಡಾ.ಜಿ.ಪರಮೇಶ್ವರ್,ಮಧುಗಿರಿ-ಕೆ.ಎನ್.ರಾಜಣ್ಣ, ಸಿರಾ-ಟಿ.ಬಿ.ಜಯಚಂದ್ರ, ತಿಪಟೂರು-ಕೆ.ಷಡಕ್ಷರಿ, ಕುಣಿಗಲ್-ರಂಗನಾಥ್,ಗುಬ್ಬಿ-ಎಸ್.ಆರ್.ಶ್ರೀನಿವಾಸ್,ಪಾವಗಡ-ಹೆಚ್.ವಿ.ವೆಂಕಟೇಶ್ ಅವರುಗಳು ಜಯಗಳಿಸಿದ್ದಾರೆ.

ಜೆಡಿಎಸ್ ಪಕ್ಷವು ತುರುವೇಕೆರೆ-ಎಂ.ಟಿ.ಕೃಷ್ಣಪ್ಪ, ಚಿಕ್ಕನಾಯಕನಹಳ್ಳಿ-ಸುರೇಶ್ ಬಾಬು ಅವರುಗಳು ಗೆಲುವು ಸಾದಿಸಿದ್ದರೆ, ಬಿಜೆಪಿಯಿಂದ ತುಮಕೂರು ನಗರ-ಜಿ.ಬಿ ಜ್ಯೋತಿಗಣೇಶ್.ತುಮಕೂರು ಗ್ರಾಮಾಂತರ-ಬಿಜೆಪಿ ಸುರೇಶ್ ಗೌಡ ಅವರುಗಳು ಜಯಗಳಿಸಿದ್ದಾರೆ.

Leave a Reply

Your email address will not be published. Required fields are marked *