ಅಕ್ಕಿ ಗಿರಣಿದಾರರ ಸಮಸ್ಯೆ ಬಗೆಹರಿಸದಿದ್ದರೆ ಉಗ್ರ ಹೋರಾಟಕ್ಕೆ ಮುಂದಾಗುವಂತೆ ಎಚ್ಚರಿಕೆ ನೀಡಿದ ಅಕ್ಕಿ ಗಿರಣಿ ಮಾಲೀಕರು

ತುಮಕೂರು ನಗರದಲ್ಲಿರುವ ಅಕ್ಕಿ ಗಿರಣಿದಾರರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆರ್.ಎಲ್.ರಮೇಶ್ ಬಾಬುರವರು ಪ್ರಸ್ತುತ ದಿನಗಳಲ್ಲಿ ವಿದ್ಯುತ್ ದರಗಳ ಹೆಚ್ಚಳದಿಂದ ಈಗಾಗಲೇ ಅಕ್ಕಿ ಗಿರಣಿದಾರರಿಗೆ ಆರ್ಥಿಕವಾಗಿ ಹೊರೆಯಾಗುತ್ತಿದೆ. ಈ ಹೆಚ್ಚಳದಿಂದ ಗಿರಣಿಗಳನ್ನು ನಡೆಸುವುದು ಕಷ್ಟಕರವಾಗಿದ್ದು, ಅಕ್ಕಿ ಗಿರಣಿಧಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ, ಆದಷ್ಟು ಶೀಘ್ರವಾಗಿ ವಿದ್ಯುತ್ ದರಗಳ ಹೆಚ್ಚಳವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು. ಜೊತೆಗೆ ನೂತನ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದ ನಿರ್ಧಾರದಂತೆ ಎ.ಪಿ.ಎಂ.ಸಿ. ಕಾಯ್ದೆಯನ್ನು ಪುನಃ ಹಿಂದಿನ ರೀತಿಯಂತೆ ತಿದ್ದುಪಡಿ ಮಾಡಲು ಹೊರಟಿರುವ ಸರ್ಕಾರದ ನಿರ್ಧಾರದಿಂದ ಅಕ್ಕಿಗಿರಣಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ ಇದರಿಂದ ಅಕ್ಕಿ ಗಿರಣಿ ಉದ್ಯಮಗಳು ತೀವ್ರತರವಾದ ತೊಂದರೆಗೆ ಸಿಲುಕುತ್ತದೆಂದರು. ಅಕ್ಕಿಗಿರಣಿದಾರರು ಕೃಷಿ ಮಾರುಕಟ್ಟೆಯ ಯಾವುದೇ ಸೌಕರ್ಯದ ಬಳಕೆ ಮಾಡುತ್ತಿಲ್ಲವಾದ್ದರಿಂದ ಅಕ್ಕಿಗಿರಣಿದಾರರನ್ನು ಸದರಿ ಕಾಯ್ದೆಯ ವ್ಯಾಪ್ತಿಯಿಂದ ಹೊರತುಪಡಿಸಬೇಕೆಂದು ಒತ್ತಾಯ ಮಾಡುತ್ತಿದ್ದೇವೆಂದರು.

ಮುಂದುವರೆದು ನಿಯಮಾನುಸಾರ ರೈತರು ಬೆಳೆದ ಭತ್ತವನ್ನು ರಾಜ್ಯದ ಯಾವುದೆ ಮಾರುಕಟ್ಟೆಗೆ ಕೊಂಡೊಯ್ಯಲು ಮತ್ತು ಮಾರಾಟ ಮಾಡಲು ಅನುಕೂಲವಿರುತ್ತಿತ್ತು. ಆದರೆ ಎ.ಪಿ.ಎಂ.ಸಿ. ಕಾಯ್ದೆ ಒಂದು ವೇಳೆ ಜಾರಿಯಾದಲ್ಲಿ ರೈತರು ಭತ್ತ ಸಾಗಣೆ ಮಾಡಲು ತೊಂದರೆಯಾಗುತ್ತದೆ ಆದುದರಿಂದ ಇದನ್ನು ಜಾರಿ ಮಾಡಬಾರದೆಂಬುದು ತಮ್ಮ ಒತ್ತಾಯವಾಗಿದೆಂದರು. ಹಾಗೊಂದು ವೇಳೆ ಈ ರೀತಿಯಾಗಿ ಹೊಸ ಕಾಯ್ದೆ ಮಾಡಬೇಕಾದಲ್ಲಿ ಅಕ್ಕಿ ಗಿರಣಿಗಳ ಒಕ್ಕೂಟದವರ ಸಭೆಯನ್ನು ಕರೆದು ಸಮಗ್ರ ಚರ್ಚೆ ಮಾಡಿ ತದನಂತರ ಕಾಯ್ದೆಯನ್ನು ತಿದ್ದುಪಡಿ / ರೂಪಿಸಬೇಕೆಂಬುದು ನಮ್ಮ ಒತ್ತಾಯವಾಗಿದೆಂದು ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ ಎಂದರು.

ಇನ್ನು ರಮೇಶ್ ಬಾಬುರವರು ಮಾತನಾಡುತ್ತ ಹಾಲಿ ನಮ್ಮ ರಾಜ್ಯದಲ್ಲಿ ಬೆಳೆಯುತ್ತಿರುವ ಭತ್ತದೊಂದಿಗೆ ಹೊರ ರಾಜ್ಯಗಳಿಂದಲೂ ಭತ್ತವನ್ನು ಸರ್ಕಾರವೇ ಎಂ.ಎಸ್.ಪಿ. ಬೆಂಬಲಬೆಲೆ ಯೋಜನೆ ಅಡಿಯಲ್ಲಿ ಅಧಿಕ ಪ್ರಮಾಣದ ಭತ್ತವನ್ನು ಖರೀದಿಸಿ ತಂದು ನಮ್ಮ ಗಿರಣಿಗಳಲ್ಲಿಯೇ ಸಂಸ್ಕರಿಸಿ ಅಧಿಕ ಪ್ರಮಾಣದ ಅಕ್ಕಿ ನಮ್ಮ ರಾಜ್ಯದ ಜನತೆಗೆ ಲಭ್ಯವಾಗುವಂತೆ ಮಾಡಬೇಕೆಂಬುದು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದೇವೆಂದರು ಇನ್ನು ಈ ರೀತಿಯಾಗಿ ಮಾಡುವುದರಿಂದ ಸರ್ಕಾರದ ಮಹತ್ವಾಕಾಂಕ್ಷಿ ‘ಅನ್ನಭಾಗ್ಯ’ ಯೋಜನೆಗೂ ಸಹಕಾರಿಯಾಗುತ್ತದೆಂದು ಈ ಮೂಲಕ ಸರ್ಕಾರಕ್ಕೆ ಸಲಹೆ ನೀಡುತ್ತಿದ್ದೇವೆಂದರು.

ತಮ್ಮ ಮನವಿಯನ್ನು ಸರ್ಕಾರವು ಪುರಸ್ಕರಿಸದೇ ಇದ್ದಲ್ಲಿ ರಾಜ್ಯದ ಅಕ್ಕಿ ಗಿರಣಿಗಳ ಹಿತಾಸಕ್ತಿಗೆ ಪ್ರತಿಕೂಲವಾದ್ದಲ್ಲಿ, ಅಕ್ಕಿ ಗಿರಣಿಗಳು ಕಾರ್ಯನಿರ್ವಹಿಸದೆ ಸ್ಥಗಿತಗೊಳ್ಳುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಅಂತಹ ಸಂದಿಗ್ಧ ಪರಿಸ್ಥಿತಿಗೆ ಅವಕಾಶ ನೀಡಬಾರದೆಂದು ಸರ್ಕಾರಕ್ಕೆ ಮನವರಿಕೆ ಮಾಡುತ್ತಿದ್ದೇವೆ ಎಂದರು ಅಲ್ಲದೇ ಸರ್ಕಾರ ತಮ್ಮಗಳಿಗೆ ಪ್ರತಿಕ್ರಿಯೆ ನೀಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಅಲ್ಲದೇ ಅಕ್ಕಿ ಗಿರಣಿಗಳು ಮುಚ್ಚಿ ಪ್ರತಿಭಟನೆ ಮಾಡಲಾಗುವುದೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಕ್ಕಿ ಗಿರಣಿ ಸಂಘದ ಎನ್.ಆರ್.ವಿಶ್ವರಾಧ್ಯ, ಆರ್.ಎಲ್.ರಮೇಶ್ ಬಾಬು, ಕೆ.ಜಿ.ಮುನಿಗಂಗಪ್ಪ, ಟಿ.ಎಸ್.ಪ್ರಿತೇಶ್, ಕೆ.ನಂಜುಂಡ ಪ್ರಸಾದ್, ಎಸ್.ಆರ್.ಜಗನ್ನಾಥ್ ಶೆಟ್ಟಿ, ಕೆ.ನಟೇಶ್ ಬಾಬು ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *