ಮಾಜಿ ಸಚಿವ ಸೊಗಡು ಶಿವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದ ಜಯಸಿಂಹರಾವ್ ಅವರು ನಿಧನರಾಗಿದ್ದಾರೆ.
66 ವರ್ಷದ ಜಯಸಿಂಹರಾವ್ ಅವರು ವಯೋಸಾಹಜ ಕಾಯಿಲೆಯಿಂದ ಬಳಲುತ್ತಿದ್ದವರನ್ನು ಬೆಂಗಳೂರು ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು.
ಮಾಜಿ ಸಚಿವ ಸೊಗುಡು ಶಿವಣ್ಣನವರು ಶಾಸಕರು ಮತ್ತು ಮಂತ್ರಿಗಳಾಗಿದ್ದ ಕಾಲದಿಂದಲೂ ಸುಮಾರು 20 ವರ್ಷಗಳ ಕಾಲ ಆಪ್ತ ಸಹಾಯಕರಾಗಿ ಕೆಲಸ ನಿರ್ವಹಿಸಿದ್ದರು.
ಒಂದು ಬಾರಿ ಮಾಜಿ ಶಾಸಕ ಎಸ್.ಷಫಿ ಅಹ್ಮದ್ ಅವರಿಗೂ ಆಪ್ತ ಕಾರ್ಯದರ್ಶಿ ಯಾಗಿ ಕಾರ್ಯನಿರ್ವಹಿಸಿದ್ದರು.
ಇವರು ಮೃದು ಸ್ವಭಾವದ ವ್ಯಕ್ತಿಯಾಗಿದ್ದರು.
ಒಬ್ಬ ಪುತ್ರ, ಮಗಳು, ಮಡದಿ ಮತ್ತು ಅತ್ತೆಯನ್ನು ಅಗಲುದ್ದಾರೆ.
ಇವರು ಮೂಲ ಮರಳೂರು ದಿಣ್ಣೆಯ ಶಾನುಭೋಗರ ವಂಶಸ್ಥರಾಗಿದ್ದಾರೆ.
ಅವರ ಮಗಳು ಆಚಾರ್ಯ ವಿದ್ಯಾಪೀಠ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದಾರೆ.
ಅಂತಿಮ ದರ್ಶನವನ್ನು ಎಸ್ಐಟಿ ಅವರ ಸ್ವಗೃಹ ದಲ್ಲಿ ಏರ್ಪಡಿಸಲಾಗಿದೆ.