ಅವಧಿಗಿಂತ ಮುಂಚೆ ಹುಟ್ಟಿದ ಮಗುವಿಗೆ ಜೀವ ನೀಡಿದ ಅದಿತಿ ಆಸ್ಪತ್ರೆ

ತುಮಕೂರು : ಅವಧಿಗಿಂತ ಮುಂಚೆಯೇ ಜನಿಸಿದ ಮಗುವಿನ ಜೀವ ಉಳಿಸುವಲ್ಲಿ ತುಮಕೂರಿನ ಅದತಿ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.

ಅದಿತಿ ಆಸ್ಪತ್ರೆಯ ಮಕ್ಕಳ ಮತ್ತು ನವಜಾತ ಶಿಶು ತಜ್ಞರಾದ ಡಾ|| ಚಂದನ್.ಸಿ.ಕೆ. ಮತ್ತು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ||ಲಿಖಿತಾ.ಕೆ.ಜಿ.ಅವರುಗಳು ಅವಧಿ ಪೂರ್ವದಲ್ಲಿ ಜನಿಸಿದ ಮಗುವಿಗೆ ಜೀವ ಕೊಡುವಲ್ಲಿ ಯಶಸ್ವಿಯಾಗಿರುವುದಾಗಿ ತಮ್ಮ ಆಸ್ಪತ್ರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ತುಮಕೂರಿನ ಶಿರಾ ಗೇಟ್ ನಲ್ಲಿ ಅದಿತಿ ಮಲ್ಟಿಸ್ಪೆμÁಲಿಟಿ ಆಸ್ಪತ್ರೆ ಗರ್ಭಿಣಿಯರಿಗೆ ಸೇವೆ ಸಲ್ಲಿಸುತ್ತಿದ್ದು. ಹೆರಿಗೆ ಸಮಯಕ್ಕೂ ಮೊದಲೇ ಹುಟ್ಟುವ ಮಕ್ಕಳ ಆರೋಗ್ಯದ ಮೇಲೆ ಅದಿತಿ ಆಸ್ಪತ್ರೆಯಲ್ಲಿ ಸಾಕಷ್ಟು ಗಮನ ಹರಿಸಲಾಗುತ್ತಿದೆ. ಇತ್ತಿಚೆಗೆ ಆ ರೀತಿಯ ಬೇಗ ಹುಟ್ಟಿದ ಮಕ್ಕಳಲ್ಲಿ ಏನೆಲ್ಲಾ ಆರೋಗ್ಯ ಸಮಸ್ಯೆಯ ಸವಾಲು ಎದುರಾಯ್ತು ಎಂಬುದರ ಬಗ್ಗೆ ಇಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಅದಿತಿ ಆಸ್ಪತ್ರೆಯ ಡಾ.ಚಂದನ್ ಮಾತನಾಡಿ, ದಿವ್ಯಾ ಎಂಬ ಮಹಿಳೆ. ಅವರಿಗೆ ಈ ಮೊದಲು ಅಬಾರ್ಷನ್ ಆಗಿತ್ತು. ಮತ್ತೆ ಎರಡನೇ ಮಗುವಿಗೂ ಅಬಾರ್ಷನ್ ಆಗುವ ಸಾಧ್ಯತೆ ಜಾಸ್ತಿ ಇತ್ತು. ಯಾಕಂದ್ರೆ ಸರ್ವೀಕ್ಸ್ ಎನ್ನುವುದರ ಉದ್ದಳತೆ ಕಡಿಮೆ ಇತ್ತು. ಆಕೆಗೆ ಸರ್ವೀಕ್ಸ್‍ಗೆ ಹೊಲಿಗೆ ಹಾಕಿದ್ದೆವು. ಅದು ನಾಲ್ಕು ವಾರಗಳ ಕಾಲ ಇತ್ತು. ಅದು ಬಿಚ್ಚಿಕೊಳ್ಳುವ ಸಾಧ್ಯತೆ ಇದ್ದುದರಿಂದ ಮತ್ತೆ ಸ್ಟಿಚ್ ಹಾಕಿದೆವು. 24 ವಾರ ಚಿಕಿತ್ಸೆ ಬಳಿಕ ಹೆರಿಗೆ ಆಗಿದ್ದರಿಂದ ಸುಮಾರು ಮೂರು ತಿಂಗಳು ಆಸ್ಪತ್ರೆಯಲ್ಲೇ ಮಗುವಿಗೆ ಚಿಕಿತ್ಸೆ ನೀಡಿ ಉಳಿಸಲಾಗಿದೆ ಎಂದು ತಿಳಿಸಿದರು.

ಈ ರೀತಿಯ ಮಕ್ಕಳಲ್ಲಿ ಕಣ್ಣಿನ ಬೆಳವಣಿಗೆ ಸರಿಯಾಗಿ ಆಗಿರುವುದಿಲ್ಲ. ಕಣ್ಣಿನ ಪರೀಕ್ಷೆಯನ್ನು ಮಾಡಿದ್ದೇವೆ. ಅದಕ್ಕೆ ಲೇಸರ್ ಥೆರಪಿ ಮೂಲಕ ಆಪರೇಷನ್ ಮಾಡುತ್ತೇವೆ. ಅವಧಿಗಿಂತ ಮುಂಚೆ ಜನಿಸಿದ ಮಕ್ಕಳಲ್ಲಿ ರಕ್ತವೂ ಕಡಿಮೆ ಇರುತ್ತದೆ. ನಾಲ್ಕು ಬಾರಿ ರಕ್ತವನ್ನು ಮಗುವಿಗೆ ನೀಡಲಾಗಿದೆ, ಕರುಳು ಬೆಳವಣಿಗೆ ಕೂಡ ಆಗಿರುವುದಿಲ್ಲ. ಹಾಲನ್ನು ಜೀರ್ಣ ಮಾಡಿಕೊಳ್ಳುವುದು ಕಷ್ಟವಾಗಿತ್ತು. ಅದಕ್ಕೂ ಸೂಕ್ತ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದರು.

ಇಂಥ ಮಗುವಿಗೆ ಜೀರ್ಣ ಶಕ್ತಿಯೂ ಕಡಿಮೆ ಇರುವುದರಿಂದ ಅದಕ್ಕೂ ಚಿಕಿತ್ಸೆ ನೀಡಲಾಗಿದೆ. ಸಾಕಷ್ಟು ಕಷ್ಟ ಅನುಭವಿಸಿದ ಮಗು ಇಂದು ಆರೋಗ್ಯವಾಗಿದೆ. ಮಗು 1 ಕೆಜಿ 400 ಗ್ರಾಂ ತೂಕ ಆಗಿರುವುದರಿಂದ ಮಗು ಮತ್ತು ತಾಯಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಮನೆಗೆ ಮನೆಗೆ ಕಳಿಸಿರುವುದಾಗಿ ತಿಳಿಸಿದರು.

Leave a Reply

Your email address will not be published. Required fields are marked *