ಅತಿಥಿ ಉಪನ್ಯಾಸಕರಿಗೆ ಶಾಶ್ವತವಾದ ಭದ್ರತೆಗೆ ಆಗ್ರಹ

ತುಮಕೂರು: ಈ ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯನವರು ಬೆಳಗಾವಿ ಅಧಿವೇಶನದಲ್ಲಿ ಅತಿಥಿ ಉಪನ್ಯಾಕರ ಪರವಾಗಿ ಧ್ವನಿಯೆತ್ತಿದ್ದರು ಇಂದು ಸಿದ್ದರಾಮಯ್ಯನವರ ಸರ್ಕಾರ ರಾಜ್ಯದಲ್ಲಿ ಇದೆ. ನುಡಿದಂತ್ತೆನಡೆಯು ಸಿದ್ದರಾಮಯ್ಯನವರು ಅತಿಥಿ ಉಪನ್ಯಾಸಕರಿಗೆ ಶಾಶ್ವತವಾದ ಭದ್ರತೆ ಮತ್ತು ಕಾಯಾಮಾತಿಯನ್ನು ಮಾಡುವವರೆಗೂ ನಮ್ಮ ಅನಿದಿμÁ್ಟವಧಿಯ ಧರಣಿ ಮುಂದುವರೆಯುತ್ತದೆ ಎಂದು ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ. ಧರ್ಮವೀರ ತಿಳಿಸಿದರು.

ಇಂದು ಟೌನಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರಿಗೆ ಜಾತ ನಡೆಸಿ ಜಿಲ್ಲಾಧಿಕಾಚೆರಿಯ ಮುಂಭಾಗದಲ್ಲಿ ಪ್ರತಿಭಟನೆ ಧರಣಿಯನ್ನು ಉದ್ದೇಶಿಸಿ ಮಾತನಾಡುತ್ತಾ ಅತಿಥಿ ಉಪನ್ಯಾಸಕರಿಗೆ ಯಾವುದೇ ಸರ್ಕಾರಿ ಸೌಲಭ್ಯಗಳಿಲ್ಲದೆ ದುಡಿಯುತ್ತಿರುವ ಏಕೈಕ ವರ್ಗವೆಂದರೆ ಅದು ಅತಿಥಿ ಉಪನ್ಯಾಸಕರು ಎಂದು ಹೇಳಿದರು.

ಮಹಿಳಾ ಅತಿಥಿ ಶಿಕ್ಷಕಿ ಡಾ. ಕವಿತಾ ಮಾತನಾಡಿ ಅತಿಥಿ ಶಿಕ್ಷಕರಿಗೆ ಯಾವುದೇ ರಜೆ,ಇಲ್ಲದೆ ಕನಿಷ್ಠ ವೇತನವೂ ಇಲ್ಲದೆ, ಸರ್ಕಾರಿ ಯಾವುದೇ ಸೌಲಭ್ಯಗಳಿಲ್ಲದೆ ದುಡಿಯುತ್ತಿರುವ ಏಕೈಕ ವರ್ಗನಮ್ಮದು. ಬೇರೆ -ಬೇರೆ ಇಲಾಖೆಗಳಂತೆ ಅತಿಥಿ ಶಿಕ್ಷಕರನ್ನು ಪರಿಗಣಿಸಿ ಶಾಶ್ವತ ಭದ್ರತೆ ಮತ್ತು ಕಾಯಾಮಾತಿಯನ್ನು ಒದಗಿಸಬೇಕು. ಸುಮಾರು 10- 15 ವರ್ಷಗಳಿಂದ ಅತಿಥಿ ಶಿಕ್ಷಕರಾಗಿ ದುಡಿಯುತ್ತಿರುವ ನಮಗೆ ಬೇರೆ ಯಾವುದೇ ವೃತ್ತಿ ಮಾಡಲು ಸಾಧ್ಯವಾಗುತ್ತಿಲ್ಲ. ಅತಿಥಿ ಉಪನ್ಯಾಸಕರನ್ನು ವಿಶೇಷವಾಗಿ ಪ್ರಕರಣ ಎಂದು ಪರಿಗಣಿಸಿ ದೇವ ಭದ್ರತೆ ಕಲ್ಪಿಸಬೇಕುಎಂದರು.

ಹಿರಿಯ ಅತಿಥಿ ಉಪನ್ಯಾಸಕ ಕೆಂಚರಾಯಪ್ಪ ಮಾತನಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶೇ%80ರಷ್ಟು ಅತಿಥಿ ಉಪನ್ಯಾಸಕರೆ ಸೇವೆ ಸಲ್ಲಿಸುತ್ತಿದ್ದು. ರಾಜ್ಯಾದ್ಯಂತ ಸುಮಾರು 14 ಸಾವಿರ ಅತಿಥಿ ಉಪನ್ಯಾಸಕರಿದ್ದು ನಾವು ಸುಮಾರು 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಈ ಬಾರಿ ಮಾಡು ಇಲ್ಲವೇ ಮಡಿ ಎಂಬ ಧ್ಯೇಯ ವಾಕ್ಯದೊಂದಿಗೆ ನಾವುಗಳು ಹೋರಾಟ ಪ್ರಾರಂಭಿಸಿದ್ದು ಸರ್ಕಾರ ನಮ್ಮಗೆ ಲಿಖಿತ ರೂಪದ ಆದೇಶ ಬರುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದರು. ಪ್ರತಿಭಟನೆಯಲ್ಲಿ ಅತಿಥಿ ಶಿಕ್ಷಕರುಗಳಾದ ಹೇಮಾವತಿ, ಅನಿತಾ, ಅಂಬಿಕಾ, ಭವ್ಯ, ಗಿರೀಶ್ ,ಎರ್ರಿಸ್ವಾಮಿ ,ವೇದಮೂರ್ತಿ ,ಶಿವಣ್ಣ ತಿಮ್ಮಲಾಪುರ, ಶಂಕರಪ್ಪ ಹಾರೋಗೆರೆ, ಶಶಿ, ಚಿತ್ತಯ್ಯ, ಕಾಂತರಾಜು ಸೇರಿದಂತೆ ನೂರಾರು ಅತಿಥಿ ಉಪನ್ಯಾಸಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *