
ತುಮಕೂರು: ಜಿಲ್ಲೆಯಲ್ಲಿ 333ಕಳ್ಳತನದ ಪ್ರಕರಣಗಳನ್ನು ತುಮಕೂರು ಜಿಲ್ಲೆ ಪೊಲೀಸರು ಬೇದಿಸಿ ಸುಮಾರು 4ಕೋಟಿ 9ಲಕ್ಷದ 46ಸಾವಿರದ 441ರೂಪಾಯಿಗಳಷ್ಟು ಮೌಲ್ಯದ ಕಳವು ಮಾಲುಗಳನ್ನು ವಶಪಡಿಸಿಕೊಂಡು ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿರುವುದನ್ನು ಜಿಲ್ಲಾ ಉಸ್ತುವಾರಿ ಸಚಿವರೂ ಹಾಗೂ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಪ್ರಶಂಸಿಸಿದರು.
ಅವರಿಂದು ಬಾರ್ ಲೈನ್ ರಸ್ತೆಯ ಪೊಲೀಸ್ ಇಲಾಖೆಯ ಚಿಲುಮೆಯಲ್ಲಿ ಹಮ್ಮಿಕೊಂಡಿದ್ದ ಕಳವು ಮಾಲನ್ನು ವಾರಸುದಾರರಿಗೆ ವಿತರಿಸಿ ಮಾತನಾಡುತ್ತಿದ್ದರು.2ದರೋಡೆ, 28 ಸುಲಿಗೆ, 19 ಸರಗಳ್ಳತನ, 93 ಮನೆಗಳ್ಳತನ ಮತ್ತು 190 ಸಾಮಾನ್ಯ ಕಳ್ಳತನಗಳನ್ನು ಪೊಲೀಸರು ಪತ್ತೆ ಹಚ್ಚಿ ಕಳ್ಳರನ್ನು ಬಂಧಿಸಿರುವುದಾಗಿ ತಿಳಿಸಿದರು.

ಇದು ಬಹಳ ಸಾಮಾನ್ಯವಾದ ಕೆಲಸವಲ್ಲ, ಬಹಳ ಕಠಿಣವಾದ ಕೆಲಸ, ವಿವಿಧ ಪೊಲೀಸ್ ಠಾಣಾ ವಿಭಾದಲ್ಲಿ ಕಳ್ಳತನ ಪ್ರಕರಣಗಳನ್ನು ಭೇದಿಸಿರುವುದು ಶ್ಲಾಘನೀಯ, ವಿಶೇಷವಾಗಿ ಒಡವೆ ಅಂಡಿಗಳನ್ನು ಮತ್ತು ಮೊಬೈಲ್ ಕಳ್ಳತನಗಳನ್ನು ಉತ್ತರಪ್ರೇಶದ ಆ ಹಳ್ಳಿಯ ಹೆಸರು ‘ಕರ್ಗಾನ’ ಎಂದು. ಅಂತಹ ಹಳ್ಳಿಯಲ್ಲಿ ಜ್ಯುವಲರಿ ಕಳ್ಳರನ್ನು ಹಿಡಿದಿರುವುದು ತುಂಬಾ ಪರಿಶ್ರಮದ ಕೆಲಸ, ಆ ಹಳ್ಳಿಯೇ ದರೋಡೆಕೋರರ ಹಳ್ಳಿ, ಅವರನ್ನು ಹಿಡಿಯಲು ಹೋದರೆ ಯಾರು ವಾಪಸ್ಸು ಬರುವುದಿಲ್ಲ ಅಂತಹ ಪ್ರಕರಣವನ್ನು ಭೇದಿಸಿದ್ದಾರೆ, ಇನ್ನೊಂದು ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯ ಮೊಬೈಲ್ ಮತ್ತು ಪೋನ್ ಪೇ ಮೂಲಕ ಹಣ ಲಪಟಾಯಿಸಿದ್ದ ಇಬ್ಬರನ್ನು ಬಂಧಿಸಿರುವುದು ನಿಜಕ್ಕೂ ಕಠಿಣ ಕೆಲಸ ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು.
ಆಂಧ್ರದ ಮೊಬೈಲ್ ಕಳ್ಳರು 101 ಮೊಬೈಲ್ ಕದಿದ್ದರೆ, ಗುಬ್ಬಿ ತಾಲ್ಲೂಕು ಸಿ.ಎಸ್.ಪುರದಲ್ಲಿ ಜ್ಯವಲರಿ ಅಂಗಡಿಯ 4 ಲಕ್ಷಕ್ಕೂ ಹೆಚ್ಚಿನ ಬೆಲೆ ಬಾಳುವ ಬೆಳ್ಳಿ ಸಾಮಾನುಗಳನ್ನು ವಶಕ್ಕೆ ಪಡೆದು ನಟೋರಿಯಸ್ 7 ಮಂದಿ ಕಳ್ಳರನ್ನು ಬಂಧಿಸಿ, ಕಳ್ಳತನಕ್ಕೆ ಬಳಸಿದ್ದ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರನ್ನು ಗೃಹ ಸಚಿವರು ಶ್ಲಾಘಿಸಿ, ಕಳ್ಳರನ್ನು ಹಿಡಿದ ಪೊಲೀಸ್ ಸಿಬ್ಬಂದಿಗೆ ಇಲಾಖೆಯಿಂದ ಬಹುಮಾನ ನೀಡಲಾಗುವುದು ಎಂದರು.
ಕಳ್ಳರು ಕಂಟ್ರಿ ಪಿಸ್ತೂಲ್, ಹರಿತ ಚಾಕುಗಳು, ಬೀಗ ಹೊಡೆಯಲು ಬಳಸುತ್ತಿದ್ದ ಗ್ಯಾಸ್ ಸಿಲಿಂಡರ್ ಮತ್ತು ದೊಣ್ಣೆ, ಶೆಟರ್‍ಗಳನ್ನು ಮೀಟಲು ಬಳಸುತ್ತಿದ್ದ ಆಧುನಿಕ ವಸ್ತಗಳನ್ನು ನೋಡಿ ನನಗೇ ಭಯವಾಯಿತುಮ ಪೊಲೀಸರು ಇವುಗಳನ್ನೆಲ್ಲಾ ಮೆಟ್ಟಿ ಕಳ್ಳರನ್ನು ಹಿಡಿದಿರುವುದಕ್ಕೆ ಗೃಹ ಸಚಿವರು ಮೆಚ್ಚಿಗೆ ವ್ಯಕ್ತಪಡಿಸಿದರು.
ಶಿರಾ ವಲಯದ ಡಿವೈಎಸ್ಪಿ ಮತ್ತು ಚಿಕ್ಕನಾಯಕನಹಳ್ಳಿ ಸಿಪಿಐರವರ ಕಾರ್ಯ ದಕ್ಷತೆಗೆ ಗೃಹ ಸಚಿವರು ಪ್ರಶಂಸನಾ ಪತ್ರಗಳನ್ನು ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಎಸ್ಪಿ ಅಶೋಕ್.ಕೆ.ವಿ., ಅಡಿಷನಲ್ ಎಸ್ಪಿ ಮರಿಯಪ್ಪ, ಎಡಿಜಿಪಿ ರವಿಕಾಂತೇಗೌಡ ಉಪಸ್ಥಿತರಿದ್ದರು.