ತುಮಕೂರು: ಮುಖ್ಯಮಂತ್ರಿಯ ನಂತರದ ಸ್ಥಾನ ಗೃಹ ಮಂತ್ರಿಗಳು, ಇಂತಹ ಗೃಹಮಂತ್ರಿಯ ತವರು ಜಿಲ್ಲೆಯಲ್ಲಿಯೇ ಅವರ ಭಯವೂ ಇಲ್ಲ, ಗೌರವವೂ ಇಲ್ಲದಂತೆ ಈ ಜೆಲ್ಲೆಯ ಉನ್ನತಾಧಿಕಾರಿಗಳು ನಡೆದುಕೊಂಡು ಗೃಹ ಸಚಿವರ ಗೌರವ ಮತ್ತು ಘನತೆಯನ್ನು ಹಾಳು ಮಾಡಿ ಅವರಿಗೆ ಮಸಿ ಬಳಿಯುವ ಹುನ್ನಾರಗಳು ಅಧಿಕಾರಿ ವರ್ಗದಿಂದಲೇ ನಡೆದಂತಿದೆ.
ಈ ಜಿಲ್ಲೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಧಿಕಾರಿಗಳೇ ಉನ್ನತ ಸ್ಥಾನದಲ್ಲಿದ್ದು, ಉನ್ನತ ಸ್ಥಾನದ ಅಧಿಕಾರದ ಖುರ್ಚಿಗೆ ಧಕ್ಕೆ ಬಾರದಂತೆ, ಇಲ್ಲಾ ಮಂತ್ರಿಗಳಿಗೆ ಯಾವುದೇ ಮುಜಗರವಾಗದಂತೆ ಆಡಳಿತವನ್ನು ನೀಡ ಬೇಕಾದ ಅಧಿಕಾರಿಗಳೇ ಈಗ ಜಾಲ ತಾಳಗಳಲ್ಲಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ವರ್ಗ ಬಾಲಕಿಯರ ಹಾಸ್ಟಲ್‌ನಲ್ಲಿ ಮಸ್ತ್ ಮಸ್ತ್ ಹುಡುಗಿ ಬಂದಳು ಸಿನಿಮಾ ಹಾಡಿಗೆ ಬಾಲಕಿಯರ ಕೈ ಹಿಡಿದು ಡಾನ್ಸ್ ಮಾಡಿರುವುದು ವಿವಾದಕ್ಕೆ ಎಡೆ ಮಾಡಿ ಕೊಟ್ಟಿದೆ.
ಈ ಜಿಲ್ಲೆಗೆ ಅಧಿಕಾರದ ಉನ್ನತ ಹುದ್ದೆಯಲ್ಲಿರುವ ಇಬ್ಬರು ಅವರು ಆಡಿದ್ದೇ ಆಟ, ಊಡಿದ್ದೇ ಲಗ್ಗೆ ಎನ್ನುವಂತಾಗಿದೆ, ಈ ಇಬ್ಬರನ್ನು ನೋಡಿ ಅವರ ಕೈ ಕೆಳಗಿನ ಅಧಿಕಾರಿಗಳು ಕೋತಿ ತಾನು ಕೆಟ್ಟಿದ್ದಲ್ಲದೆ ವನವನ್ನೇಲ್ಲಾ ಕೆಡಿಸಿತು ಅನ್ನುವಂತೆ ಕೆಳ ಹಂತದ ಅಧಿಕಾರಿಗಳನ್ನು ಕೆಡಿಸಿ ಕುಲಕಾರ ಮಾಡಿದ್ದಾರೆ.
ಈ ಉನ್ನತ ಅಧಿಕಾರಿಗಳು ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ವರ್ಗ ಬಾಲಕಿಯರ ಹಾಸ್ಟಲ್‌ನಲ್ಲಿ ಕುಣಿದು ಕುಪ್ಪಳಿಸಿದ್ದರೂ ದಲಿತ ಸಂಘರ್ಷ ಸಮಿತಿಗಳು ಇಲ್ಲಿಯವರೆಗೂ ಬಾಯಿ ಮುಚ್ಚಿಕೊಂಡಿರುವುದು ಖಂಡನೀಯ.
ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ವರ್ಗ ಬಾಲಕಿಯರ ಹಾಸ್ಟಲ್‌ನಲ್ಲಿರುವವರೆಲ್ಲಾ ಬಡವರ, ರೈತರ, ದಲಿತರ ಮಕ್ಕಳು ಈ ಮಕ್ಕಳು ದಾರಿ ತಪ್ಪಿದರೆ ಬುದ್ದಿ ಹೇಳ ಬೇಕಾದ ಉನ್ನತಾಧಿಕಾರಿಗಳೇ ಕೈ ಕೈ ಹಿಡಿದು ಕುಣಿದಾಗ ನಾಳೆ ದಿನ ಹಾಸ್ಟಲ್‌ಗಳಿಗೆ ಪುಂಡು ಪೋಕರಿಗಳು ಹುಡುಗಿಯರನ್ನು ಆಹಾ ಅಧಿಕಾರಿಗಳ ಜೊತೆ ಡಿಸ್ಕೋ ಡಾನ್ಸ್ ಮಾಡುತ್ತಿರ ಬನ್ನಿ ನಮ್ಮ ಜೊತೆನೂ ಡಾನ್ಸ್ ಮಾಡಿ ಎಂದು ಕರೆದರೆ ಈ ಅಧಿಕಾರಿಗಳಿಗೆ ಕಾನೂನು ಕ್ರಮ ಕೈಗೊಳ್ಳಲು ನೈತಿಕತೆ ಇದೆಯೇ.
ಗೃಹ ಸಚಿವರು ನಮ್ಮವರು, ನಮ್ಮ ಹಿತ ಕಾಪಾಡುವವರು ಎಂದು ಈ ಅಧಿಕಾರಿಗಳನ್ನು ನಂಬಿದ್ದರೆ, ಗೃಹ ಸಚಿವರಿಗೆ ಮಸಿ ಬಳಿಯುವ ಹುನ್ನಾರ ಇದಲ್ಲವೇ, ಇಂತಹ ಅಧಿಕಾರಿಗಳು ಉನ್ನತ ಅಧಿಕಾರದ ಖುರ್ಚಿಯಲ್ಲಿರಬೇಕಾ? ಈ ಅಧಿಕಾರಿಗಳು ಈ ರೀತಿ ಡಾನ್ಸ್, ಮೋಜು, ಮಸ್ತಿ ಮಾಡುತ್ತಿದ್ದರೆ ಜಿಲ್ಲೆಯ ಆಡಳಿತ ಏನಾಗಿದೆ, ದಿನ ಬಡವ, ಬಲ್ಲಿಗ, ರೈತನು ಕಛೇರಿಗಳ ಬಾಗಿಲಿಗೆ ಅಲೆಯುತ್ತಿದ್ದಾರೆ, ಹಾಗಾದರೆ ಈ ಅಧಿಕಾರಿಗಳು ಎಲ್ಲಿಗೆ ಹೋದರು.
ಈ ಜಿಲ್ಲೆಯ ಎರಡನೇ ಉನ್ನತ ಅಧಿಕಾರಿಯೊಬ್ಬರು ಗ್ರಾಮ ಪಂಚಾಯಿತಿಯ ಪಿಡಿಓ ಗಳನ್ನು ನಾಯಿ ನರಿಗಿಂತ ಕಡೆಯಾಗಿ ಕಾಣುತ್ತಿದ್ದಾರೆ, ಬೆದರಿಸುತ್ತಿದ್ದಾರೆ, ಹೆದರಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಗ್ರಾಮ ಪಂಚಾಯಿತಿಗಳಿಗೆ ತಮ್ಮದೇ ಆದ ಅಧಿಕಾರವನ್ನು ಹೊಂದಿವೆ, ಅದರಲ್ಲಿ ಮೂಗು ತೂರಿಸುವ ಅಧಿಕಾರ ಈ ಅಧಿಕಾರಿಗೆ ಇರುವುದಿಲ್ಲ.
ಇದೇ ರೀತಿ ಅಧಿಕಾರಿಗಳು ಡ್ಯಾನ್ಸ್ ಮಾಡಿಕೊಂಡು ಕಳೆಯಲಿ ಬಿಡಿ, ಜನರು ಬರ ಬಂದು ಸಾಯಲಿ, ನಮಗೇನಾಗಬೇಕು ಅನ್ನುವಂತಿದೆ ಈ ಡ್ಯಾನ್ಸ್.

ಇತ್ತೀಚೆಗೆ ನಡೆದ ಸವಲತ್ತುಗಳ ವಿತರಣಾ ಸಮಾರಂಭದ ನಂತರ ಹಗಲು ವೇಳೆಯಲ್ಲಿ ಬಾಲಕಿಯರ ಹಾಸ್ಟಲ್‌ನಲ್ಲಿ ಊಟ ಮಾಡುತ್ತಿರುವ ಜಿಲ್ಲಾಧಿಕಾರಿಗಳು.
ಸಮಾಜ ಕಲ್ಯಾಣ ಅಧಿಕಾರಿಗಳು ಏನು ಮಾಡುತ್ತಿದ್ದರೂ, ಅವರು ವಿದ್ಯಾರ್ಥಿಗಳನ್ನು ರಕ್ಷಿಸಬೇಕಾದ ದೇವರು ಅವರೂ ಸೇರಿ ಡ್ಯಾನ್ಸ್ ಮಾಡಿರುವುದು ಕಾಲ ಎಲ್ಲಿಗೆ ಹೋಯಿತು ಅನ್ನುವುದನ್ನು ಕಲ್ಪಿಸಿಕೊಳ್ಳಲು ಆಗುತ್ತಿಲ್ಲ. ಈ ಅಧಿಕಾರಿಗೆ ಇದರ ಬಗ್ಗೆ ಮಾಹಿತಿ ಪಡೆಯಲು ದೂರವಾಣಿ ಮಾಡಿದರೆ ಕಟ್ ಮಾಡಿ, ಎಂಗ್ಗೇಜ್ ಮಾಡಿಕೊಂಡರು.
ದೀಪಾವಳಿಯ ಹಬ್ಬದ ನೆಪದಲ್ಲಿ ತುಮಕೂರಿನಲ್ಲಿ ಜಿಲ್ಲಾ ಮಟ್ಟದ ಉನ್ನತ ಅಧಿಕಾರಿಗಳು ಬಾಲಕಿಯರ ಹಾಸ್ಟೆಲ್‌ನಲ್ಲಿ ತಡ ರಾತ್ರಿಯ ಡಿಸ್ಕೋ ಡಾನ್ಸ್ ನ್ನು ಹಾಸ್ಟೆಲ್ ವಿದ್ಯಾರ್ಥಿನಿಯರ ಡಾನ್ಸ್ ಮಾಡಿರುವ ವಿಡಿಯೋ, ಪೋಟೋಗಳು ವೈರಲ್ ಆಗಿವೆ.
ತುಮಕೂರು ನಗರದ ಗೆದ್ದಲಹಳ್ಳಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ದೀಪಾವಳಿ ಹಬ್ಬದಂದು ಜಿಲ್ಲಾಧಿಕಾರಿ, ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಯಾದ ಸಮಾಜ ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ ಇತರರು, ಹಾಸ್ಟಲ್ ಬಾಲಕಿಯರ ಹಾಗೂ ಯುವತಿಯರ ಜೊತೆಯಲ್ಲಿ ಡ್ಯಾನ್ಸ್ ಮಾಡುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ
ಜಿಲ್ಲಾ ಮಟ್ಟದ ಅಧಿಕಾರಿಗಳ ನಡೆಗೆ ಪ್ರಗತಿಪರರು,ಬುದ್ಧಿ ಜೀವಿಗಳು ತೀವ್ರ ವಿರೋಧ ವ್ಯಕ್ತ ಪಡಿಸಿದ್ದರೂ ಇದುವರೆವಿಗೂ ಯಾವುದೇ ದಲಿತ ಸಂಘಟನೆಗಳು ಈ ಘಟನೆಯನ್ನು ಖಂಡಿಸದಿರುವುದು ದುರದೃಷ್ಠಕರ.