
ತುಮಕೂರು: ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯವಾದ ಮತ್ತು ಅನುವಂಶೀಯ ನ್ಯೂನತೆಗಳ ಕಾರಣದಿಂದ ಕಾಣಿಸಿಕೊಳ್ಳುವ ರೋಗದಿಂದ ಮಾರಾಣಾಂತಿಕ ಶಸ್ತçಚಿಕಿತ್ಸಾ ರೋಗಗಳ ನಿವಾರಣೆ ಮತ್ತು ನಿಯಂತ್ರಣಕ್ಕೆ ಆಧುನಿಕ ವೈದ್ಯಕೀಯ ತಂತ್ರಜ್ಞಾನದ ಬಳಕೆಯನ್ನು ಅನುಸರಿಸಿಕೊಳ್ಳಲು ವೈದ್ಯ ಸಮುದಾಯ ಗಮನಹರಿಸುವ ಅಗತ್ಯವಿದೆ ಎಂದು ಇಂಡಿಯನ್ ಅಸೋಸಿಯೇಷನ್ ಆಫ್ಪೀಡಿಯಾಟ್ರಿಕ್ ಸರ್ಜನ್ಸ್ (ಭಾರತೀಯ ಮಕ್ಕಳ ಶಸ್ತçಚಿಕಿತ್ಸಕರು ಸಂಘ) ಅಧ್ಯಕ್ಷರು ಹಾಗೂ ಚೆನ್ನೈ ಪೋರೂರ್ನಲ್ಲಿರುವ ಶ್ರೀ ರಾಮಚಂದ್ರ ಉನ್ನತ ಶಿಕ್ಷಣ ಸಂಸ್ಥೆ & ಸಂಶೋಧನಾ ಕೇಂದ್ರದ ಪೀಡಿಯಾಟ್ರಿಕ್ ವಿಭಾಗದ ಪ್ರಾಧ್ಯಾಪಕ ಮತ್ತು ಹಿರಿಯ ಸಲಹೆಗಾರ ಆದ ಡಾ. ರಮೇಶ್ ಬಾಬು ಅಭಿಪ್ರಾಯಪಟ್ಟರು.
ನಗರದ ಅಗಳಕೋಟೆಯಲ್ಲಿರುವ ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಏರ್ಪಟ್ಟ ಇಂಡಿಯನ್ ಅಸೋಸಿಯೇಷನ್ ಆಫ್ ಪೀಡಿಯಾಟ್ರಿಕ್ ಸರ್ಜನ್ಸ್ಗಳ ಕರ್ನಾಟಕಘಟಕದ 18 ನೇ ವರ್ಷದ (ಪೆಸುಕಾನ್-23) ಮೂರು ದಿನಗಳ ರಾಷ್ಟಿçÃಯಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದಲ್ಲಿರುವ ಮಕ್ಕಳ ರೊಗಗಳ ಶಸ್ತç ಚಿಕಿತ್ಸಕರು ಮತ್ತು ತಜ್ಞರು ಪರಸ್ಪರರ ಅನುಭವಗಳನ್ನು ಹಂಚಿಕೊಳ್ಳುವ ಮತ್ತುಅವರ ಶಸ್ತçಚಿಕಿತ್ಸಾ ಕೌಶಲ್ಯಗಳನ್ನು ಹೆಚ್ಚಿಸುವಉದ್ದೇಶಕ್ಕಾಗಿಒಟ್ಟಾಗಿ ಸೇರಿತಮ್ಮಅನುಭವ ಮತ್ತು ಆಶಯಗಳನ್ನು ಸಾಕಾರಗೊಳಿಸಲುಇಂತಹ ಸಮ್ಮೇಳನಗಳು ಸಹಕಾರಿಯಾಗುತ್ತವೆಎಂದುಡಾ.ರಮೇಶ್ ಬಾಬು ಅಭಿಪ್ರಾಯಪಟ್ಟರು.
ಭವಿಷ್ಯದಮಕ್ಕಳಆರೋಗ್ಯದ ಕಾಳಜಿ ಹಿನ್ನೆಲೆಯಲ್ಲಿ ಮಕ್ಕಳ ಶಸ್ತçಚಿಕಿತ್ಸಾಕ್ಷೇತ್ರದಲ್ಲಿನಇತ್ತೀಚಿನವೈದ್ಯಕೀಯತಂತ್ರಗಳನ್ನು ಗ್ರಾಮೀಣ ಭಾಗಗಳಿಗೆ ಕೊಂಡೊಯ್ಯಲುವೈದ್ಯ ಸಮುದಾಯ ಪ್ರಾಮಾಣಿಕ ಮತ್ತು ಸಮರ್ಪಿತ ಸೇವೆಯ ಮೂಲಕ ಮಾನವಕುಲವನ್ನು ನೋವು ಮತ್ತು ಸಂಕಟದಿAದ ಮುಕ್ತಗೊಳಿಸುವ ಉದಾತ್ತಗುಣಗಳನ್ನು ಮೈಗೂಢಿಸಿಕೊಳ್ಳಬೇಕು ಎಂದುಅವರು ವೈದ್ಯರಲ್ಲಿ ಮನವಿ ಮಾಡಿದರು.
ಸಮ್ಮೇಳನ ಮುಖ್ಯಅತಿಥಿಯಾಗಿ ಮಾತನಾಡಿದ ಇಂಡಿಯನ್ ಅಸೋಸಿಯೇಷನ್ ಆಫ್ ಪೀಡಿಯಾಟ್ರಿಕ್ ಸರ್ಜನ್ಸ್ ಕಾರ್ಯದರ್ಶಿ ಹಾಗೂ ಮಧ್ಯಪ್ರದೇಶದ ಜಬಲ್ಪುರದಲ್ಲಿನ ನೇತಾಜಿ ಸುಭಾಷ್ಚಂದ್ರ ಬೋಸ್ ಸರ್ಕಾರಿ ವೈದ್ಯಕೀಯಕಾಲೇಜಿನ ಮಕ್ಕಳ ಶಸ್ತçಚಿಕಿತ್ಸಾ ವಿಭಾಗ ಪ್ರಾಧ್ಯಾಪಕಋಆದಡಾ.ವಿಕೇಶ್ಅಗರವಾಲ್, ನವಜಾತ ಶಿಶು ಮತ್ತು 5 ವರ್ಷದೊಳಗಿನ ಶಿಶುಗಳ ಮರಣದರವನ್ನು ಕಡಿತಗೊಳಿಸಲು ಮತ್ತು ಮಕ್ಕಳ ಆರೋಗ್ಯವನ್ನು ಸುಧಾರಿಸಲುಆಧುನಿಕ ವೈಜ್ಞಾನಿಕ ವಿಧಾನಗಳನ್ನು ಅನುಸರಿಸಲು ವೈದ್ಯರು ಕಾಳಜಿ ವಹಿಸಬೇಕು ಎಂದುಕರೆ ನೀಡಿದರು.
ಇಂಡಿಯನ್ ಅಸೋಸಿಯೇಷನ್ ಆಫ್ ಪೀಡಿಯಾಟ್ರಿಕ್ ಸರ್ಜನ್ಸ್ ಕರ್ನಾಟಕ ಶಾಖೆಯ ಅಧ್ಯಕ್ಷರಾದ ಡಾ.ನರೇಂದ್ರಬಾಬು ಮಾತನಾಡಿ,ಪ್ರತಿ ಮಗುವಿನ ಬಗ್ಗೆ ಸೂಕ್ತ ಕಾಳಜಿ ವಹಿಸಿ, ಅವುಗಳ ಬೆಳವಣಿಗೆಯನ್ನು ಸಮಪರ್ಕವಾಗಿ ಗಮನಿಸಬೇಕು ಮತ್ತುಯಾವುದೇಏರು-ಪೇರುಗಳ ಬಂದತಕ್ಷಣ, ಗುರುತಿಸಿ, ಸರಿಯಾದ ಸಮಯದಲ್ಲಿಚಿಕಿತ್ಸೆ ಪಡೆದುಕೊಳ್ಳಲು ಪೋಷಕರು ಮುಂದಾಗಬೇಕು. ಯಾವುದೇಕಾಯಿಲೆಯನ್ನು ವಿಳಂಬವಿಲ್ಲದೇವೈದರ ಗಮನಕ್ಕೆ ತಂದು ಪತ್ತೆ ಹಚ್ಚಿ, ಶಸ್ತçಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.
ಇAಡಿಯನ್ ಅಸೋಸಿಯೇಷನ್ ಆಫ್ ಪೀಡಿಯಾಟ್ರಿಕ್ ಸರ್ಜನ್ಸ್ಕರ್ನಾಟಕ ಶಾಖೆಯ ಕಾರ್ಯದರ್ಶಿ, ಸಂಘಟನಾ ಅಧ್ಯಕ್ಷ ಹಾಗೂ ಶ್ರೀ ಸಿದ್ದಾರ್ಥ ವೈದ್ಯಕೀಯಕಾಲೇಜಿನ ಮಕ್ಕಳ ವಿಭಾಗದ ಮುಖ್ಯಸ್ಥರಾದಡಾ.ಸುಬ್ರಮಣ್ಯಕಟ್ಟೆಪುರಅವರು ಸಮಾವೇಶದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿ, ತಮ್ಮ ವಿಭಾಗದಲ್ಲಿ ಸಂಕೀರ್ಣವಾದ ಮಕ್ಕಳ ರೋಗಗಳಿಗೆ ಕಡಿಮೆ ವೆಚ್ಚದಲ್ಲಿಉತ್ತಮಗುಣಮಟ್ಟದಚಿಕಿತ್ಸೆ ನೀಡಲಾಗುತ್ತಿದೆ. ಮಕ್ಕಳ ಆರೋಗ್ಯರಕ್ಷಣೆ ಮತ್ತುಮಗುವಿನ ಆರೋಗ್ಯಕ್ಕೆ ಸಂಬAಧಿಸಿದAತೆ ಸರ್ಕಾರಿ ಸೇವೆಗಳನ್ನು ಅಳವಡಿಸಿಕೊಳ್ಳುತ್ತಿರುವ ಬಗ್ಗೆ ವಿವರಿಸಿ, ಮಕ್ಕಳ ವಿಶೇಷ ಕಾಯಿಲೆಗಳ ಕುರಿತುಅಧ್ಯಯನ ನಡೆಸಿ, ಚಿಕಿತ್ಸೆ ಮಾಡುವುದಕ್ಕೆ ವಿಶೇಷ ಆದ್ಯತೆ ನೀಡುತ್ತಿರುವುದಾಗಿ ತಿಳಿಸಿದರು.
ಸಮ್ಮೇಳನದಲ್ಲಿ ಸಾಹೇ ವಿವಿ ಉಪಕುಲಪತಿಡಾ.ಲಿಂಗೇಗೌಡ ಕೆ.ಬಿ., ಕುಲಸಚಿವಡಾ. ಎಮ್.ಝೆಡ್.ಕುರಿಯನ್, ವೈದ್ಯಕೀಯಕಾಲೇಜಿನಉಪ ಪ್ರಾಂಶುಪಾಲ ಡಾ.ಜಿ.ಎನ್.ಪ್ರಭಾಕರ್ ಮತ್ತು ಹಿರಿಯ ವೈದ್ಯರಾದ ಯತ್ರೀಂದ್ರಾನAಜಯ್ಯ ಹಾಜರಿದ್ದರು
ಮೂರು ದಿನಗಳ ಈ ರಾಷ್ಟಿçÃಯ ಸಮಾವೇಶದಲ್ಲಿದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ 100ಕ್ಕೂ ಹೆಚ್ಚು ತಜ್ಞ ವೈದ್ಯರು ಮಕ್ಕಳ ರೊಗಗಳು ಮತ್ತುಚಿಕಿತ್ಸಾ ವಿಧಾನಗಳಲ್ಲಿನ ಆಧುನಿಕತಂತ್ರಜ್ಞಾನ ಸೇರಿದಂತೆ ಹಲವು ವಿಷಯಗಳ ಕುರಿತುತಮ್ಮ ಪ್ರಬಂಧ ಮಂಡಿಸಿ, ಸಂವಾದ ನಡೆಸಿದರು.