ಯುದ್ಧಬೇಡ ವಿಶ್ವ ಶಾಂತಿಗೆ ಅಹಿಂಸಾ ವಿಶ್ವಸರ್ಕಾರ ಬರಬೇಕು-ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಅಭಿಮತ

ತುಮಕೂರು : ಹೆಣ್ಣು ಮಕ್ಕಳ ಬೆತ್ತಲೆ ಮೆರವಣಿಗೆ, ಆಸ್ಪತ್ರೆಗಳ ಮೇಲೆ ದಾಳಿ ಮಾಡಿ ಹಸುಗೂಸುಗಳ ಹತ್ಯೆ, ರಾಷ್ಟ್ರ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಾ ಇದ್ದು, ಯುದ್ಧಗಳಾಗಬಾರದು ಬುದ್ಧನ ಆಶಯದಂತೆ ಅಹಿಂಸೆ ನೆಲಸಲು, ವಿಶ್ವಶಾಂತಿಯಾಗಿರಲು ವಿಶ್ವ ಸರ್ಕಾರ ಬರಬೇಕು ಎಂದು ಹಿರಿಯ ಸಾಹಿತಿ ಪ್ರೊ. ಕಾಳೇಗೌಡ ನಾಗವಾರ ಅಭಿಪ್ರಾಯಪಟ್ಟರು.

ತುಮಕೂರು ವಿಶ್ವವಿದ್ಯಾನಿಲಯದ ಕುವೆಂಪು ಅಧ್ಯಯನ ಪೀಠವು ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕದ ಸಹಯೋಗದಲ್ಲಿ ವಿಶ್ವಮಾನವ ದಿನಾಚರಣೆಯ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಭೂಮಿ ಮೇಲೆ ಮನುಷ್ಯನಿಗೆ ಘನತೆ ಬಂದ ದಿನ ವಿಶ್ವಸಂಸ್ಥೆಯಂತೆ ವಿಶ್ವ ಸರ್ಕಾರವೂ ಇರುತ್ತದೆ, ಯುದ್ಧವಾಗಬಾರದು ವಿಶ್ವಶಾಂತಿಯಾಗಿರಬೇಕೆಂದರೆ ಅಹಿಂಸೆ ಇರಬೇಕು, ಅಹಿಂಸೆ ಪ್ರತಿಪಾದನೆಯಾಗಲು ಯುದ್ಧ ಬಯಸದ ವಿಶ್ವ ಸರ್ಕಾರ ಅಗತ್ಯವಿದೆ ಎಂಬುದೇ ಕುವೆಂಪು ಅವರ ಆಶಯವಾಗಿತ್ತು, ಎಲ್ಲರೂ ಸಂತೋಷದಿಂದ ಬಾಳಬೇಕೆಂಬುದೂ ಆಗಿತ್ತು, ನಮ್ಮೆಲ್ಲರ ಆಶಯವೂ ಅದೇ ಆಗಿದೆ ಎಂದು ಕಾಳೇಗೌಡ ಹೇಳಿದರು.

ರವೀಂದ್ರನಾಥ ಟಾಗೂರರು ತುಂಬಾ ದೊಡ್ಡ ಕವಿಗಳಾಗಿದ್ದರೂ ಅವರಲ್ಲಿ ಭಿನ್ನಾಭಿಪ್ರಾಯಗಳಿದುದ್ದರಿಂದ ಅವರನ್ನು ವಿಶ್ವ ಕವಿಗಳ ಸಾಲಿಗೆ ಸೇರಿಸಲಿಲ್ಲ, ಆದರೆ ಕುವೆಂಪುರವರು ವಿಶ್ವ ಚಿಂತನೆ ಇದ್ದುದರಿಂದ ಅವರ ಬರವಣಿಗೆಯಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ಅಂಬೇಡ್ಕರ್, ಲೋಹಿಯಾ ಮತ್ತು ಕುವೆಂಪು ಅವರು ವಿಶ್ವಚಿಂತನೆ ಇಟ್ಟುಕೊಂಡವರಾಗಿದ್ದರು ಎಂದು ಹೇಳಿದರು.

ಕುವೆಂಪು ಅವರು ಬ್ರಿಟಿಷರು ಬರದಿದ್ದರೆ ನಾನು ಸಗಣಿ ಬಾಚುತ್ತಿರಬೇಕಿತ್ತು, ಪ್ರಾಮಾಣಿಕ ಚಿಂತನೆ ಆರೋಗ್ಯವಂತಿರುವಂತೆ ಮಾಡುತ್ತದೆ, ಅಂತಹ ಪ್ರಾಮಾಣಿಕರು ಕುವೆಂಪು ಆಗಿದ್ದರು, ಅವರ ಮಗ ಪೂರ್ಣಚಂದ್ರ ತೇಜಸ್ವಿಯವರ ಮದುವೆಯನ್ನು ಅವರದೇ ಆದ ಮಂತ್ರ ಮಾಂಗಲ್ಯದ ಮೂಲಕ ಕೇವಲ 36 ಜನರ ಸಮ್ಮುಖದಲ್ಲಿ ನೆವೇರಿಸಿದರು, ಅಂದರೆ ದುಂದುವೆಚ್ಚ ಮತ್ತು ದುರಾಸೆ ಇರಬಾರದು ಎಂಬುದು ಕುವೆಂಪು ಚಿಂತನೆಯಾಗಿತ್ತು, ಬುದ್ದನ ಚಿಂತನೆಯಲ್ಲೂ ಸಹ ಆಸೆ ಇರಬೇಕು ದುರಾಸೆ ಇರಬಾರದು ಎಂದೇ ಹೇಳಿರುವುದು, ನಾವೇ ಮಾಡಿಕೊಂಡ ದೇವರಿಗೆ ಮೌಢ್ಯತೆಯನ್ನು ಬಿತ್ತಬಾರದು ಶಿವರಾಮ ಕಾರಂತರು ಹೇಳಿರುವಂತೆ ನಮ್ಮ ಅಳತೆಯನ್ನು ಮೀರದ ದೇವರು ಎಂದರೆ ಬುದ್ಧ ಮಾತ್ರ ಎಂದು ಹೇಳಿದ್ದಾರೆ ಎಂದು ತಿಳಿಸಿದರು.

ಕವಿ ಗದುಗಿನ ನಾರಾಯಣಪ್ಪ ಆಗಿನ ಕಾಲಕ್ಕೆ ಸೆಕ್ಯೂಲರ್ ಆಗಿದ್ದರು ಅವರನ್ನು ಕುವೆಂಪು ಹೆಚ್ಚು ಇಷ್ಟ ಪಡುತ್ತಿದ್ದರು, ನಾವು ಕುಮಾರವ್ಯಾಸನು ಬರೆದ ಅರಸವೆಂಬುವನು ರಾಕ್ಷಸ ಎಂಬುದನ್ನು ತುರ್ತುಪರಿಸ್ಥಿತಿ ಕಾಲದಲ್ಲಿ ದೇವರಾಜು ಅರಸು ಮುಖ್ಯಮಂತ್ರಿಯಾಗಿದ್ದಾಗ ನಾನೇ ಬರೆದಾಗ, ದೇವರಾಜ ಅರಸು ನಮ್ಮನ್ನು ಬಂಧಿಸಲಿಲ್ಲ, ಏಕೆಂದರೆ ಅವರು ಈ ಸಮಾಜದ ಒಳಿತನ್ನು ಅರಿತಿದ್ದರು, ನಮ್ಮಂತವರಿಗೆ ಚಂದ್ರಶೇಖರ ಪಾಟೀಲ್, ನಂಜುಂಡಸ್ವಾಮಿ, ಲಂಕೇಶ್, ಬುದ್ಧ ಗುರು ಕೆ.ಎಂ.ಶಂಕರಪ್ಪ ಗುರುಗಳಾಗಿದಂತಹವರು ಇವರಿಂದ ನಾವು ಕುವೆಂಪು ಚಿಂತನೆಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಯಿತು ಎಂದರು.

ಮನುಜಮತ ವಿಶ್ವಪಥದಂತಹ ಮಹಾನ್ ಚಿಂತನೆಗಳನ್ನು ಸಾರಿದ ಕುವೆಂಪು ಅವರ ವಿಚಾರ ಪ್ರವಾಹವನ್ನು ಚರ್ಚೆಯ ಮೂಲಕ ಕೇಂದ್ರೀಕರಿಸುವ ಕೆಲಸಗಳಾಗಬೇಕು. ಕುವೆಂಪು ಅವರ ಚಿಂತನೆಗಳಲ್ಲಿ, ಬರೆವಣಿಗೆಯಲ್ಲಿ ಸಾಂಸ್ಕøತಿಕ ಮಹತ್ವ, ಸಂವೇದನಾಶೀಲತೆ ನೆಲೆಸಿತ್ತು. ಬಸವಣ್ಣ, ಬುದ್ಧ, ಅಕ್ಕಮಹಾದೇವಿ, ಕುಮಾರವ್ಯಾಸ, ಹೀಗೆ ಕನ್ನಡ ಭಾಷಾ ಸಾಹಿತ್ಯಕ್ಕೆ ಪೂರಕವಾಗುವ ಎಲ್ಲ ಮಹನೀಯರ ಅಂಶಗಳನ್ನು ಕುವೆಂಪು ಅವರ ಸಾಹಿತ್ಯ ನೆಲೆಯಲ್ಲಿ ನಾವು ಕಾಣಬಹುದು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ವಿದ್ಯಾರ್ಥಿಗಳ ಮನೋವಿಕಾಸಕ್ಕಾಗಿ ಕುವೆಂಪು ಅವರ ವಿಚಾರಧಾರೆಗಳು ಅವಶ್ಯಕ. ಅವರ ಚಿಂತನೆಗಳನ್ನು, ಪ್ರತಿ ಪದ ಪ್ರಯೋಗದ ಆಳ-ಅಗಲವನ್ನು ಅಧ್ಯಯನ ಮಾಡಿ ಅರಿವಿಗೆ ತಂದುಕೊಳ್ಳಬೇಕು ಎಂದು ಹೇಳಿದರು.

ವಿವಿ ಸ್ನಾತಕೋತ್ತರ ಕನ್ನಡ ಅಧ್ಯಯನ ಮತ್ತು ಸಂಶೋಧನ ವಿಭಾಗದ ಅಧ್ಯಕ್ಷ ಪ್ರೊ. ನಿತ್ಯಾನಂದ ಬಿ. ಶೆಟ್ಟಿ ಮಾತನಾಡಿ, ಕುವೆಂಪು ಅವರು ಲೋಕದ ಚಿಂತನೆಗಳನ್ನು ಭಾμÉಯ ಮೂಲಕ ಪಲ್ಲಟಗೊಳಿಸುವ ಮಹತ್ಕಾರ್ಯವನ್ನು ಯಶಸ್ವಿಯಾಗಿ ನಿಭಾಯಿಸಿದ್ದರಿಂದ ಅವರ ಕೃತಿಗಳು ಆಧುನಿಕ ಚಿಂತನೆಗಳಲ್ಲಿ ಹಾಗೂ ವೈಚಾರಿಕವಾಗಿ ನೆಲೆಗೊಂಡವು ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷರಾದ ಮಲ್ಲಿಕಾಬಸವರಾಜು ಅವರು ಕುವೆಂಪು ಅವರಿಗೆ ಯುವಕರ ಮೇಲೆ ಹೆಚ್ಚು ಪ್ರೀತಿ, ಅವರು ವಿಶ್ವ ಮಾನವ ಸಂದೇಶವನ್ನು ಸಾರುವವರೆ ಯುವಕರೆ ಎಂದು ಅರಿತ್ತಿದ್ದರು ಎಂದು ಹೇಳಿದರು.

ತುಮಕೂರು ವಿವಿ ಕುವೆಂಪು ಅಧ್ಯಯನ ಪೀಠದ ಸಂಯೋಜಕಿ ಡಾ. ಗೀತಾ ವಸಂತ ಉಪಸ್ಥಿತರಿದ್ದರು, ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *