ತುಮಕೂರು:ನಗರದ ಟೌನ್ಹಾಲ್ ಮುಂಭಾಗದಲ್ಲಿ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ವತಿಯಿಂದ ಭೀಮ ಕೋರೆಗಾಂವ್ 206ನೇ ವಿಜಯೋತ್ಸವವನ್ನು ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.
ಭೀಮ ಕೋರೆಗಾಂವ್ 206ನೇ ವಿಜಯೋತ್ಸವಕ್ಕೆ ನಗರಪಾಲಿಕೆಯ ಮೇಯರ್ ಶ್ರೀಮತಿ ಪ್ರಭಾವತಿ ಸುಧೀಶ್ವರ್ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಕೋರೆಗಾಂವ್ ಸ್ಥಬ್ದ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಅವರು,ಭೀಮ ಕೋರೆಗಾಂವ್ ವಿಜಯೋತ್ಸವ ಇಡೀ ನಾಡಿನ ಶೋಷಿತ ಸಮುದಾಯಗಳ ವಿಜಯೋತ್ಸವ ವಾಗಿದೆ.ಐದುನೂರು ಮಂದಿ ಮಹರ್ ಸೈನಿಕರು, 28 ಸಾವಿರ ಶಸ್ತ್ರ ಸಜ್ಜಿತ ಮರಾಠರ ಪ್ರಶ್ವೆ ಸೈನಿಕರನ್ನು ಸದೆ ಬಡಿದ ದಿನವನ್ನು ಭೀಮ ಕೋರೆಗಾಂವ್ ವಿಜಯೋತ್ಸವವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.ಇತಿಹಾಸದಲ್ಲಿ ಹುದುಗಿ ಹೋಗಿದ್ದ ಸತ್ಯವನ್ನು ನಮ್ಮ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೆಕ್ಕಿ ತೆಗೆದು,ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.ಇದು ನಮ್ಮೆಲ್ಲರ ಸ್ವಾಭಿಮಾನವನ್ನು ಎತ್ತಿ ಹಿಡಿದ ದಿನವಾಗಿದೆ ಎಂದರು.
ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ಮಾತನಾಡಿ,206 ವರ್ಷಗಳ ಹಿಂದೆ ಮರಾಠರ ಪೇಶ್ವೆ ಸೈನಿಕರು, ಆಚರಿಸುತಿದ್ದ ಅಸ್ಪøಷ್ಯತೆಯ ವಿರುದ್ದ ಸಿಡಿದ್ದೇದು,ಶೋಷಿತ ವಲಯದ ಸೈನಿಕರ ವಿರುದ್ದ ದಂಡೆತ್ತಿ ಬಂದ ಸುಮಾರು 28 ಸಾವಿರ ಶಸ್ತ್ರ ಸಜ್ಜಿತ ಮರಾಠ ಸೈನ್ಯವನ್ನು ಐದು ಸಂಖ್ಯೆಯ ಮಹರ್ ಸೈನಿಕರು ಬಗ್ಗೆ ಬಡಿದ ದಿನ.ನಮ್ಮ ಸೈನಿಕರು ಸ್ವಾಭಿಮಾನಕ್ಕಾಗಿ ತಮ್ಮ ಶೌರ್ಯ ಮೆರದ ದಿನವನ್ನು ಭೀಮ ಕೋರೆಗಾಂವ್ ಹೋರಾಟದ ವಿಜಯೋತ್ಸವವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.ಇತಿಹಾಸದಲ್ಲಿ ಮುಚ್ಚಿ ಹೋಗಿದ್ದ ಈ ಪುಟವನ್ನು ತೆರದವರು ಡಾ.ಬಿ.ಆರ್.ಆಂಬೇಡ್ಕರ್,ಈ ದಿನವನ್ನು ಅಂಬೇಡ್ಕರ್ ಬದುಕಿದ್ದಷ್ಟು ದಿನವೂ ಮಹಾರಾಷ್ಟ್ರದ ನಾಗಪುರಕ್ಕೆ ತೆರಳಿ ಕೋರೆಗಾಂವ್ ಸ್ಮಾರಕಕ್ಕೆ ಪೂಜೆ ಸಲ್ಲಿಸುವ ಕೆಲಸ ಮಾಡುತಿದ್ದರು.ಅದೇ ಪದ್ದತಿಯನ್ನು ನಾಡಿನ ಎಲ್ಲಾ ದಲಿತ,ಸ್ವಾಭಿಮಾನಿ ಶೋಷಿತರು ಮುಂದುವೆರೆಸಿಕೊಂಡು ಬರುತ್ತಿದ್ದೇವೆ.ಈ ಯುದ್ದದಲ್ಲಿ ಸಾವನ್ನಪ್ಪಿದ ನೂರಾರು ಮಹರ್ ಸೈನಿಕರ ಸ್ಪೂರ್ತಿ ನಮ್ಮದಾಗಲಿ ಎಂದರು.
ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಉಪಾಧ್ಯಕ್ಷ ಇಂದ್ರಕುಮಾರ್ ಡಿ ಮಾತನಾಡಿ,ಶೋಷಿತ ಸಮುದಾಯಕ್ಕೂ ಒಂದು ವೀರೋಚಿತ ಇತಿಹಾಸವಿದೆ. ನಾವು ಹೇಡಿಗಳಲ್ಲ. ನಮ್ಮಲ್ಲಿಯೂ ಶೌರ್ಯ, ಪರಾಕ್ರಮವಿದೆ ಎಂದು ಇಡೀ ಜಗತ್ತಿಗೆ ಪರಿಚಯಿಸಿದ ದಿನ ಈ ಭೀಮ ಕೋರೆಗಾಂವ್ ವಿಜಯೋತ್ಸವದ ದಿನವಾಗಿದೆ. ಇಡೀ ಶೋಷಿತ ಸಮುದಾಯ ಇದನ್ನು ಹಬ್ಬದ ರೀತಿ ಆಚರಿಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ,ಪಾಲಿಕೆ ಸದಸ್ಯರಾದ ನಯಾಜ್ಅಹಮದ್,ಹೆಚ್.ಡಿ.ಕೆ.ಮಂಜು ನಾಥ್,ವಕೀಲ ಟಿ.ಆರ್.ನಾಗೇಶ್,ಮುಖಂಡರಾದ ಸುರೇಶಕುಮಾರ್,ಗುರುಪ್ರಸಾದ್ ಟಿ.ಆರ್.ನಾಗರಾಜು, ದರ್ಶನ್,ಮಾರುತಿ.ಸಿ, ನಾರಾಯಣ.ಎಸ್,ಶಬ್ಬೀರ ಅಹಮದ್,ರಾಮಚಂದ್ರರಾವ್ .ಎಸ್,ಆಟೋ ಶಿವರಾಜು,ಶ್ರೀನಿವಾಸ್.ಎನ್.,ಗಂಗಾಧರ್ ಜಿ.ಆರ್., ಮನು.ಟಿ., ನೀತಿನ್,ಜಗದೀಶ್ ಮತ್ತಿತರರು ಪಾಲ್ಗೊಂಡಿದ್ದರು.