ತುಮಕೂರು ನಗರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಕಳೆದ 09 ವರ್ಷಗಳ ಸಾಧನೆಗಳನ್ನು ತಲುಪಿಸುವ ಸಲುವಾಗಿ ತುಮಕೂರು ನಗರದ ಕ್ಯಾತಸಂದ್ರ ವೃತ್ತ, ಮದಕರಿ ವೃತ್ತ, ಬಿ.ಜಿ.ಎಸ್ ವೃತ್ತ, ಬಸ್ಸ್ಟಾಂಡ್, ಜಿಲ್ಲಾಧಿಕಾರಿಗಳ ಕಛೇರಿ, ಬಿ.ಜಿ.ಪಾಳ್ಯ ವೃತ್ತ, ಸಂತೇಪೇಟೆ, ಅಂತರಸನಹಳ್ಳಿ ತರಕಾರಿ ಮಾರುಕಟ್ಟೆ, ಭೀಮಸಂದ್ರ ಈ ಸ್ಥಳಗಳಲ್ಲಿ ಜನವರಿ 12ರಿಂದ 15ರವರೆಗೆ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಯುವಕರು, ಮಹಿಳೆಯರು, ಬಡ ವರ್ಗದ ಜನರು, ರೈತರು ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಪಾಲ್ಗೊಳ್ಳಬೇಕು, ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲಿದೆ ಎಂದು ತುಮಕೂರು ನಗರದ ಶಾಸಕ ಜಿ.ಬಿ.ಜ್ಯೋತಿಗಣೇಶ್ ರವರು ತಿಳಿಸಿದ್ದಾರೆ.