ತಿಪಟೂರು: ಕಾಂಗ್ರೆಸ್ ಪಕ್ಷದ ರಾಜ್ಯ ವಕ್ತಾರರು, ಜಿಲ್ಲೆಯ ಕಾಂಗ್ರೆಸ್ ಪಕ್ಷದ ಮುಖಂಡರು,ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಮುರಳಿಧರ್ ಹಾಲಪ್ಪನವರಿಗೆ, ಈ ಬಾರಿಯ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಟಿಕೆಟ್ ನೀಡಬೇಕೆಂದು ತಿಪಟೂರು ತಾಲ್ಲೂಕಿನ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಒತ್ತಾಯಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಎಪಿಎಂಸಿ ಮಾಜಿ ನಿರ್ದೇಶಕರಾದ ಜಿ ಮಲ್ಲೇನಹಳ್ಳಿ ಕಾಂತರಾಜು ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ಎಲ್ಲಾ ಸಮುದಾಯಗಳ ಏಳಿಗೆಗಾಗಿ ಮುರುಳಿಧರ್ ಹಾಲಪ್ಪನವರು ಶ್ರಮಿಸಿದ್ದಾರೆ, ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಸಂದರ್ಭದಲ್ಲಿ, ಸರ್ಕಾರದ ವತಿಯಿಂದ ರಾಜ್ಯದ್ಯಂತ ಅನೇಕ ಉದ್ಯೋಗ ಮೇಳಗಳನ್ನು ಮಾಡಿ ಅನೇಕ ನಿರುದ್ಯೋಗಿಗಳಿಗೆ ಉದ್ಯೋಗವನ್ನು ಕಲ್ಪಿಸಿ ಕೊಟ್ಟಿದ್ದಾರೆ, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸದೃಢಗೊಳ್ಳಲು ಪಕ್ಷ ಸಂಘಟನೆ ಮಾಡಿದ್ದಾರೆ, ಪ್ರತಿಯೊಬ್ಬರೊಂದಿಗೆ ಸ್ಪಂದಿಸುವ ಗುಣವನ್ನು ಹಾಲಪ್ಪ ಹೊಂದಿದ್ದಾರೆ ಈ ಬಾರಿ ಕಾಂಗ್ರೆಸ್ ಪಕ್ಷದ ವರಿಷ್ಠರು ಪಕ್ಷಕ್ಕಾಗಿ ದುಡಿದವರಿಗೆ ಕಾಂಗ್ರೆಸ್ ಪಕ್ಷದ ಲೋಕಸಭಾ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ.ಎಂ. ಶಾಂತಣ್ಣ ಮಾತನಾಡಿ, ಮುರಳಿಧರ್ ಹಾಲಪ್ಪನವರು ಜಿಲ್ಲೆಗೆ ಚಿರಪರಿಚಿತ ರಾಗಿದ್ದಾರೆ, ಸರಳ ವ್ಯಕ್ತಿತ್ವ ,ಸರ್ಕಾರದ ಸೌಲಭ್ಯಗಳನ್ನು ಜನತೆಗೆ ನೀಡಲು ಹತ್ತಿರವಾಗಿದ್ದಾರೆ, ರಾಜ್ಯದಲ್ಲಿ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಸಂದರ್ಭದಲ್ಲಿ ಜನಪರ ಕಾರ್ಯಕ್ರಮ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಹಗಲು ರಾತ್ರಿ ಶ್ರಮಿಸಿದ್ದಾರೆ, ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಜನತೆಗೆ ತಲುಪಿಸುತ್ತಿದ್ದಾರೆ, ಮುರಳಿಧರ್ ಹಾಲಪ್ಪನವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡಿದರೆ ಗೆಲುವು ಖಂಡಿತ ಎಂದರು.
ಕಾಂಗ್ರೆಸ್ ಪಕ್ಷದ ತಾಲೂಕು ಮುಖಂಡರಾದ ಜಿಎಸ್ ಷಡಕ್ಷರಿ ಮಾತನಾಡಿ, ಹಾಲಪ್ಪ ಪ್ರತಿಷ್ಠಾನ ವತಿಯಿಂದ ಜಿಲ್ಲೆಯಲ್ಲಿ ಹಾಗೂ ತಾಲೂಕಿನ ಕಿಬ್ಬನಹಳ್ಳಿ, ಕರಡಾಳುವಿನಲ್ಲಿ, ಸರ್ಕಾರದ ಸೌಲಭ್ಯಗಳು ರೈತರಿಗೆ ದೊರಕಲು ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದಾರೆ, ಹಾಲಪ್ಪನವರ ಸೇವೆ ಜಿಲ್ಲೆಗೆ ದೊರಕಬೇಕು, ಸಂಸದರಾಗಿ ಅವರು ಸೇವೆ ಮಾಡಬೇಕು ಎಂದರು.
ಕಾಂಗ್ರೆಸ್ ಮುಖಂಡ ಪುಟ್ಟರಾಜ ಮಾತನಾಡಿ, ಈ ಬಾರಿ ಕಾಂಗ್ರೆಸ್ ಪಕ್ಷದ ಲೋಕಸಭಾ ಟಿಕೆಟ್ ಅನ್ನು ಬೇರೆ ಪಕ್ಷದಿಂದ ಬಂದಿರುವ ಮುದ್ದ ಹನುಮಗೌಡರಿಗೆ ಪಕ್ಷ ಟಿಕೆಟ್ ನೀಡಬಾರದು, ಈ ಹಿಂದೆ ಕೆ ಷಡಕ್ಷರಿಯವರನ್ನು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮುದ್ದಹನುಮೇಗೌಡರು ಸೋಲಿಸಲು ಪ್ರಯತ್ನಿಸಿದ್ದಾರೆ, ಕರೋನಾ ಸಂದರ್ಭದಲ್ಲಿ ಮುರುಳಿಧರ್ ಹಾಲಪ್ಪನವರು ಪ್ರತಿ ಹಳ್ಳಿ ಹಳ್ಳಿಗೆ ಹೋಗಿ ಕಿಟ್ಟು ವಿತರಿಸಿದ್ದಾರೆ, ಪ್ರತಿ ವರ್ಗದ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ, ಎಐಸಿಸಿ, ಕೆಪಿಸಿಸಿ ಮುಖಂಡರುಗಳು, ಹಾಲಪ್ಪನವರಿಗೆ ಟಿಕೆಟ್ ನೀಡಬೇಕು ಎಂದು ಹೇಳಿದರು.
ನೆಲ್ಲಿಕೆರೆ ಗ್ರಾಮ ಪಂಚಾಯಿತಿ ಸದಸ್ಯರಾದ ಗಾಯತ್ರಮ್ಮ, ನಾಗರಘಟ್ಟದ ಮಾಜಿ ಸದಸ್ಯೆ ರತ್ನಮ್ಮ, ಮುಖಂಡರಾದ ಶ್ರೀನಿವಾಸ್, ಬೊಮ್ಲಾಪುರದ ಸೋಮಶೇಖರ್ ಮತ್ತಿತರರು ಹಾಲಪ್ಪನವರಿಗೆ ಟಿಕೆಟ್ ನೀಡುವಂತೆ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು, ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ತಮ್ಮಯ್ಯ, ಅಶ್ವತಪ್ಪ, ವಿಜ್ಞಸಂತೆ ರಾಜಣ್ಣ, ಲೋಕನಾಥ ಸಿಂಗ್ ಸೇರಿದಂತೆ ಮತ್ತಿತರರು ಇದ್ದರು.