ಗುಬ್ಬಿ : ಪಕ್ಷ ನಿಷ್ಠೆಯಿಂದ ಕಾಂಗ್ರೆಸ್ ಪಕ್ಷಕ್ಕೆ ದುಡಿಯುತ್ತಿರುವ ಮುರಳಿಧರ್ ಹಾಲಪ್ಪ ಅವರಿಗೆ ತುಮಕೂರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಬೇಕು ಎಂದು ಗುಬ್ಬಿ ತಾಲೂಕಿನ ಹಲವು ಕಾಂಗ್ರೆಸ್ ಮುಖಂಡರು ಒತ್ತಾಯ ಮಾಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಲವು ಮುಖಂಡರುಗಳು ಮಾತನಾಡಿ
ಬಿಜೆಪಿ ಪಕ್ಷದಲ್ಲಿರುವ ಮುದ್ದ ಹನುಮೇಗೌಡರಿಗೆ ಕಾಂಗ್ರೆಸ್ ಪಕ್ಷಕ್ಕೆ ಅವರು ಬಂದು ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಿದಲ್ಲಿ ನಾವು ಅವರನ್ನು ಸೋಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪಕ್ಷದಿಂದ ಪಕ್ಷಕ್ಕೆ ಬದಲಾವಣೆಯಾಗುವ ಮುದ್ದ ಹನುಮೇಗೌಡರಿಗೆ ಯಾವ ನೈತಿಕತೆ ಇದೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಕೂಡದು ಎಂದು ಒತ್ತಾಯಿಸಿದರು.
ಮುರಳಿಧರ್ ಹಾಲಪ್ಪನವರು ನಿμÉ್ಠಯಿಂದ ಕೆಲಸ ಮಾಡುತ್ತಿದ್ದು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಅಂತಹವರನ್ನು ಪಕ್ಷದ ಮುಖಂಡರು ಗೌರವಿಸಬೇಕು ಅವರದೇ ಆದಂತಹ ದೊಡ್ಡ ಅಭಿಮಾನಿ ಬಳಗ ಜಿಲ್ಲೆಯಲ್ಲಿದ್ದು ಅಂತವರಿಗೆ ಟಿಕೆಟ್ ನೀಡಿದರೆ ಖಂಡಿತವಾಗಿಯೂ ಗೆಲುವು ಪಡೆಯುತ್ತಾರೆ ಎಂದು ತಿಳಿಸಿದರು.
ಮುರಳೀಧರ ಹಾಲಪ್ಪನವರಿಗೆನಟಿಕೆಟ್ ನೀಡದಿದ್ದರೆ ಕಾಂಗ್ರೆಸ್ ಪಕ್ಷ ಸೋಲು ಅನುಭವಿಸಬೇಕಾಗುತ್ತದೆ ಎಂದ ಅವರು ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಿ ಮುದ್ದಹನುಮೇಗೌಡರನ್ನು ನಾವೇ ಆದರೆ ಅವರು ಅವಕಾಶವನ್ನು ಬಳಸಿಕೊಂಡು ಮತ್ತೆ ಬಿಜೆಪಿಯತ್ತ ಸಾಗಿದರು. ಬಿಜೆಪಿಯವರು ಇವರನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ಕಾರಣ ಮತ್ತೆ ಅವಕಾಶವನ್ನು ಬಳಸಿಕೊಳ್ಳಲು ಕಾಂಗ್ರೆಸ್ ನತ್ತ ಬರುತ್ತಿರುವುದು ಎಷ್ಟು ಸರಿ ಎಂಬುದು ಅವರೇ ಅರ್ಥ ಮಾಡಿ ಕೊಳ್ಳಬೇಕು ಎಂದರು.
ನಮ್ಮಲ್ಲಿರುವ ಜಿಲ್ಲಾ ಸಚಿವರುಗಳು ಶಾಸಕರುಗಳು ಮುರಳಿಧರ್ ಹಾಲಪ್ಪ ಅವರಿಗೆ ಟಿಕೆಟ್ ನೀಡುವಂತೆ ಎ ಐ ಸಿ ಸಿ ಗೆ ಒತ್ತಡ ಹಾಕಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಕುಂಟ ರಾಮನಹಳ್ಳಿ ರಾಮಣ್ಣ, ಲಿಂಗರಾಜು, ದೊಡ್ಡಯ್ಯ, ರಾಧಾ, ಶಿವಕುಮಾರ್, ಛಾಯಾಮಣಿ ಸೇರಿದಂತೆ ಇನ್ನಿತರರು ಹಾಜರಿದ್ದರು.