“ವಾಯುಗುಣ ವೈಪರಿತ್ಯ ಕೃಷಿ ಸವಾಲುಗಳು ಮತ್ತು ಸಮಸ್ಯೆಗಳು ಮಾಲಿಕೆಯ” 4ನೇ ಸಮಾಲೋಚನ ಕಾರ್ಯಾಗಾರ ಫೆಬ್ರವರಿ 25ರ ಭಾನುವಾರದಂದು ಬೆಳಗ್ಗೆ 10 ಗಂಟೆಗೆ ಭಾರತೀಯ ವೈದ್ಯಕೀಯ ಸಂಘ ತುಮಕೂರು, ಟೌನ್ ಹಾಲ್ ಸರ್ಕಲ್ (ಬಾಲಗಂಗಾಧರನಾಥ ಸ್ವಾಮಿ ವೃತ್ತ) ಇಲ್ಲಿ ಹಮ್ಮಿಕೊಳ್ಳಲಾಗಿದೆ.
ಗಾಂಧಿ ಸಹಜ ಬೇಸಾಯ ಶಾಲೆ ರೂಪಿಸಿ ಆಯೋಜಿಸುತ್ತಿರುವ “ವಾಯುಗುಣ ವೈಪರಿತ್ಯ-ಕೃಷಿ ಸವಾಲುಗಳು ಸಮಸ್ಯೆಗಳು ಮಾಲಿಕೆಯ 4ನೇ ಸಮಾಲೋಚನ” ಕಾರ್ಯಾಗಾರ ಇದಾಗಿದೆ.
COP-28ರ ವಾಯುಗುಣ ವೈಪರಿತ್ಯ ಮತ್ತು ಆರೋಗ್ಯ ಘೋಷಣೆ ಎಂಬ ವಿಷಯದ ಮೇಲೆ ನಡೆಯಲಿರುವ ಈ ಸಮಾಲೋಚನ ಕಾರ್ಯಾಗಾರವನ್ನು ಗಾಂಧಿ ಸಹಜ ಬೇಸಾಯ ಶಾಲೆ, ಭಾರತೀಯ ವೈಧ್ಯಕೀಯ ಸಂಘ ಮತ್ತು ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘ ಸಂಯುಕ್ತವಾಗಿ ಸಂಘಟಿಸುತ್ತಿದೆ. ವಿಷಯ ಮಂಡನೆಕಾರರಾಗಿ ಡಾ|| ವಾಸು ಮತ್ತು ಸಿ ಯತಿರಾಜು, ಸಮಾಲೋಚನ ಚರ್ಚೆಯ ಅನುವುಗಾರರಾಗಿ ಡಾ||ಹೆಚ್.ವಿ. ರಂಗಸ್ವಾಮಿ, ಮುಂದಿನ ಕಾರ್ಯ ಯೋಜನೆಯ ಅನುವುಗಾರರಾಗಿ ಡಾ|| ಹೆಚ್ ಮಂಜುನಾಥ್ ಕಾರ್ಯಕ್ರಮದ ಸ್ವಾಗತ ಮತ್ತು ಪ್ರಸ್ತಾವನೆಯನ್ನು ಎನ್ ಎಸ್ ಪಂಡಿತ್ ಜವಾಹರ್ ನಡಸಿಕೊಡಲಿದ್ದಾರೆ.
ಮೇಲ್ಕಂಡ ವಿಷಯದ ಬಗ್ಗೆ ರೈತರು, ವೈಧ್ಯರು, ಆರೋಗ್ಯ ಕಾರ್ಯಕರ್ತರು ಹಾಗೂ ಜನಸಾಮಾನ್ಯ ಆಸಕ್ತ ಪಣದಾರ ಜನರೊಂದಿಗೆ ಈ ಸಮಾಲೋಚನಾ ಕಾರ್ಯಗಾರ ನಡೆಯಲಿದೆ. ಸಮಾಲೋಚನ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸಲು ಆಸಕ್ತರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.