ಷರತ್ತುಗಳಿಲ್ಲದೆ ಕಾಂಗ್ರೆಸ್ ಸೇರಿದ ಎಸ್.ಪಿ.ಮುದ್ದಹನುಮೇಗೌಡ

ತುಮಕೂರು: ಯಾವುದೇ ಷರತ್ತುಗಳನ್ನು ಹಾಕದೆ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುದ್ದಹನುಮೇಗೌಡರನ್ನು ಪಕ್ಷದ ಬಾವುಟ ನೀಡುವುದರ ಮೂಲಕ ಸೇರ್ಪಡೆ ಮಾಡಿಕೊಂಡು, ಯಾವುದೇ ಷರತ್ತು ಹಾಕದೇ ಮುದ್ದಹನುಮೇಗೌಡರು ಪಕ್ಷಕ್ಕೆ ಸೇರಿದ್ದಾರೆ, ನಾವು ಯಾರಿಗೆ ಟಿಕೆಟ್ ನೀಡಿದರೂ ಅವರ ಪರವಾಗಿ ಕೆಲಸ ಮಾಡಬೇಕು ಎಂದು ಡಿಕೆಶಿ ಹೇಳಿದರು.

ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಮುದ್ದಹನುಮೇಗೌಡರ ಬಗ್ಗೆ ಸಹನುಭೂತಿ, ಕೋಪ ಎರಡೂ ಇದೆ, ಬಿಜೆಪಿಗೆ ಹೋಗಬೇಡಿ, ನಿಮಗೆ ಸರಿ ಹೋಗುವುದಿಲ್ಲ ಎಂದರೂ ಹೋಗಿದ್ದರು, ಮುಂದಿನದು ಎಲ್ಲರಿಗೂ ತಿಳಿದ ವಿಷಯ ಎಂದರು.

ಈ ಸಂದರ್ಭದಲ್ಲಿ ಮಾರ್ಮಿಕವಾಗಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂರ್ಯಮುಳುಗುವ ಹೊತ್ತಿನಲ್ಲಿ ಪಕ್ಷಕ್ಕೆ ಮರಳಿದ್ದೀರ ಎಂದಷ್ಟೇ ಹೇಳಿದರು.

ಇದಕ್ಕೂ ಮುನ್ನ ಡಾ.ಜಿ.ಪರಮೇಶ್ವರ್ ಅವರನ್ನು ಅವರ ಮನೆಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದಾಗ, ಜಿಲ್ಲೆಯಲ್ಲಿ ಹಲವರು ನಿಮಗೆ ವಿರೋಧಿಸುತ್ತಿದ್ದಾರೆ, 2014ರಲ್ಲಿ ನಾನೇ ಅಧ್ಯಕ್ಷನಾಗಿದ್ದರಿಂದ ನಿಮ್ಮನ್ನು ಕರೆ ತಂದು, ಹಣವನ್ನೂ ಖರ್ಚು ಮಾಡಿ ಗೆಲ್ಲಿಸಿದೆ, ಆದರೂ ಪಕ್ಷ ಬಿಟ್ಟು ಹೋದ್ರೀ, ಈಗ ನನ್ನ ಕ್ಷೇತ್ರದ ಮತದಾರರಿಗೆ ಮಾತ್ರ ಓಟಾಕಿ ಎಂದು ಹೇಳಬಹುದು ಮಿಕ್ಕ ಕ್ಷೇತ್ರಗಳಿಗೆ ಹೇಳಲಾಗುವುದಿಲ್ಲ, ಟಿಕೆಟ್ ತರುವುದು ನಿಮ್ಮ ಸಾಮಥ್ರ್ಯ ಎಂದು ಹೇಳಿದರೆನ್ನಲಾಗಿದೆ.

Leave a Reply

Your email address will not be published. Required fields are marked *