ತುಮಕೂರು ಜಿಲ್ಲಾ ಜನರಲ್ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕರಾಗಿ ಡಾ|| ಅಸ್ಗರ್ ಬೇಗ್ ನೇಮಕವಾಗಿದ್ದಾರೆ.
ಡಾ||ವೀಣಾ ಅವರು ನಿವೃತ್ತಿ ಹೊಂದಿದ ಹಿನ್ನಲೆಯಲ್ಲಿ, ಡಾ|| ಅಸ್ಗರ್ ಬೇಗ್ ಅವರಿಗೆ ಸರ್ಕಾರವು ಪದೋನ್ನತಿ ನೀಡಿ, ಜಿಲ್ಲಾ ಜನರಲ್ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕರನ್ನಾಗಿ ನೇಮಿಸಲಾಗಿದೆ.
ಡಾ|| ಅಸ್ಗರ್ ಬೇಗ್ ಅವರು ಜಿಲ್ಲಾ ಆಸ್ಪತ್ರೆಯಲ್ಲಿ ನೇತ್ರತಜ್ಞರಾಗಿ(ಸಂಚಾರಿ) ಕಾರ್ಯನಿರ್ವಹಿಸುತ್ತಿದ್ದರು, ಇಡೀ ತುಮಕೂರು ಜಿಲ್ಲಾ ಜನರಲ್ ಆಸ್ಪತ್ರೆಗೆ ಅಲ್ಪಸಂಖ್ಯಾತರೊಬ್ಬರು ಜಿಲ್ಲಾ ಶಸ್ತ್ರ ಚಿಕಿತ್ಸಕರಾಗಿ ನೇಮಕವಾಗಿರುವುದು ಇದೇ ಮೊದಲ ಬಾರಿ.
ಇದರಿಂದ ಜಿಲ್ಲಾ ಜನರಲ್ ಆಸ್ಪತ್ರೆಗೆ ಒಂದು ಇತಿಹಾಸ ಇದಾಗಿದ್ದು, ವೈದ್ಯ ವೃತ್ತಿಯು ಎಲ್ಲಾ ವರ್ಗಕ್ಕೆ ಸೇರಿದ್ದು ಎಂಬುದು ಇದರಿಂದ ಸಾಭೀತಾಗಿದ್ದು, ಡಾ||ಅಸ್ಗರ್ ಬೇಗ್ ಅವರು ಉತ್ತಮ ಆಡಳಿತ ನೀಡಲಿ ಎಂದು ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ, ಆರೋಗ್ಯ ಸಹಾಯಕರು, ನೌಕರರು ಶುಭ ಹಾರೈಸಿದ್ದಾರೆ.