ಹೌದು ಸ್ವಾಮಿ ನಾವು ಮಾಧ್ಯಮದವರು ನಾಯಿಗಳು, ನಿಯತ್ತಿನ ನಾಯಿಗಳು, ಆನೆ ಅನ್ನಿಸಿಕೊಂಡ ನಿನಗೆ ಯಾವ ನಿಯತ್ತಿದೆ ಎಂಬುದನ್ನು ಮಾಧ್ಯಮ ಎಂಬ ನಿಯತ್ತಿನ ನಾಯಿಗಳ ಮುಂದೆ ಬಂದು ಮಾತನಾಡಲು ಈಗ ನಿನಗೆ ಮುಖ ಇದೆಯೇ.
ಈ ನಿಯತ್ತಿನ ನಾಯಿಗಳಾದ ಮಾಧ್ಯಮಗಳಿಂದಲೇ ನೀನು ಕೋಡು ಮೂಡಿಸಿಕೊಂಡು ಮಾಧ್ಯಮ ನಾಯಿಗಳನ್ನು ತಿವಿಯಲು ಬರುತ್ತಿರುವುದು ಎಂಬುದನ್ನು ಮರೆಯಬೇಡ ಮೂಡ. ಈ ನಿಯತ್ತಿನ ನಾಯಿ ಮಾಧ್ಯಮಗಳಿಲ್ಲದಿದ್ದರೆ ನೀನು ಸಂಸದನೂ ಆಗುತ್ತಿರಲಿಲ್ಲ, ಕೇಂದ್ರ ಸಚಿವನೂ ಆಗುತ್ತಿರಲಿಲ್ಲ.

ಹಾಗಾದರೆ ನಾವು ನಾಯಿಗಳೇ ಇರಬಹುದು, ನೀನು ಆ ನಾಯಿಗಳ ಬಳಿಗೆ ಯಾಕೆ ಬಂದಿದ್ದೆ, ನೀನು ನಾಯಿ ಸಾಕಿದ್ದರೆ ನಾಯಿ ನಿಯತ್ತು ತಿಳಿಯುತಿತ್ತು, ನಾಯಿಗಳು ಬೊಗಳುವುದು ತನ್ನ ಮಾಲೀಕನಿಗೆ ಯಾವುದೇ ಧಕ್ಕೆಯಾಗದಿರಲಿ ಅಂತ ಬೊಗುಳುತ್ತವೆ.

ನಾಯಿಗಳಿರುವ ರಸ್ತೆಗೆ ಆನೆಯಾದ ನೀನು ಯಾವ ಕಾಡಿನಿಂದ ತಪ್ಪಿಸಿಕೊಂಡು ಬಂದೆ ಎಂಬುದು ಏನಾದರೂ ತಿಳಿದಿದೆಯೇ, ನಾಯಿ ಸಾಕಿಲ್ಲದ ನಿನಗೆ ಅದರ ಪ್ರೀತಿ, ಕರುಣೆ, ಮೈತ್ರಿ ಹೇಗೆ ತಿಳಿಯಬೇಕು, ಮಾಧ್ಯಮದ ನಾಯಿಗಳು ನಿನಗೆ ಕಚ್ಚುವ ಮುನ್ನ ನಿನ್ನ ಮೋಟು ಬಾಲವನನ್ನು ಮುದುರಿಕೊಂಡು ಇದ್ದರೆ ಒಳ್ಳೆಯದು, ಮಾಧ್ಯಮ ನಾಯಿಗಳು ಈಗ ಬೊಗಳಿರಬಹುದು ಅವು ಕಚ್ಚಿದರೆ ಹುಚ್ಚು ಹಿಡಿಯುವುದು ಖಚಿತ, ಅದಕ್ಕೂ ಮೊದಲು ರೇಬಿಸ್ ಇಂಜೆಕ್ಷನ್ನ್ನು ಜನರಲ್ ಆಸ್ಪತ್ರೆಯಲ್ಲಿ ತೆಗೆದುಕೊಳ್ಳುವುದು ಒಳ್ಳೆಯದು.
ಈ ದೇಶ ಪ್ರಜಾಪ್ರಭುತ್ವದ ತಳ ಹದಿಯ ಮೇಲೆ ನಿಂತಿರುವುದು, ನೀನು ಏನೇ ಆಗಬೇಕೆಂದರೂ ಅದು ಈ ದೇಶದ ಪ್ರಜೆಗಳಿಂದ ಆಗಬೇಕು, ಅಂತಹ ಪ್ರಜೆಗಳಿಗೆ ಕೊಟ್ಟಿರುವ ಸಂವಿಧಾನವನ್ನು ಬದಲಾಯಿಸಲು ಅದೇನು ಶಾಲಾ ಪಠ್ಯ ಪುಸ್ತಕವಲ್ಲ.
ಆ ಸಂವಿಧಾನದಿಂದಲೇ ನೀನು ಸಂಸದ, ಇತರೆ ಆಗಿರುವುದು, ಮಾಧ್ಯಮಗಳನ್ನು ನಾಯಿ ಎಂದು ಕರೆದೆಯಲ್ಲ, ಆ ನಾಯಿಗಳ ಮುಂದೆ ನೀನು ಬರುವುದಿಲ್ಲವೇ, ಆ ನಾಯಿಗಳು ನಿನಗೆ ಬೇಕಿಲ್ಲವೆ, ಎಲ್ಲಾ ಮಾಧ್ಯಮ ನಾಯಿಗಳು ನೀನು ಹಾಕುವ ಬಿಸ್ಕತ್ ತಿನ್ನಲು ಅವೇನು ಆನೆಯಂತೆ ಮದ್ದ ಅಲ್ಲ, ನಾಯಿಗಳಿಗೆ ಮೂಸುವ ಗ್ರಹಣ ಶಕ್ತಿ ಇದೆ, ಆ ಶಕ್ತಿ ಮಾಧ್ಯಮಗಳಿಗೂ ಇದೆ.
ನಾವು ಕೂಡ ಈ ದೇಶಕ್ಕಾಗಿ, ಈ ದೇಶದ ಪ್ರಜೆಗಳಿಗಾಗಿ ನಿಮ್ಮಂತಹ ಆನೆಗಳು ಎಲ್ಲೆಲ್ಲಿ ಏನೇನು ಮೇಯುತ್ತಿರ ಎಂದು ಕಾವಲು ಕಾಯುವ ನಿಯತ್ತಿನ ಮಾಧ್ಯಮ ನಾಯಿಗಳು ನಾವು.
ಹೌದು ನಾವು ನಾಯಿಗಳು ಈ ನಾಯಿಗಳ ಹತ್ತಿರ ನಿಮ್ಮ ಪಕ್ಷದವರು, ನಿಮ್ಮ ನಾಯಕರು ಬರುವುದು ಬೇಡ, ನಾನು ಆನೆ ನನ್ನ ಬಳಿ ಬನ್ನಿ ಎಂದು ಕರೆ ಕೊಡು ಯಾರ ಬಳಿ ನಿಮ್ಮ ನಾಯಕರು ಬರುತ್ತಾರೆ ಎಂಬುದನ್ನು ನೋಡೋಣ.
ಮಾಧ್ಯಮಗಳನ್ನು ನಾಯಿ ಎಂದ ಆನೆಯಾದ ನಿನಗೆ ಒಳ್ಳೆಯದಾಗಲಿ, ಸಂವಿಧಾನ ಬದಲಾಯಿಸುವ ತಾಕತ್ತು ಬರಲಿ, ಈ ಮಾಧ್ಯಮ ನಾಯಿಗಳ ಬಳಿ ಬರಬೇಡ ಕಚ್ಚಿ ಬಿಡುತ್ತವೆ ಹುಷಾರ್..!..?
-ವೆಂಕಟಾಚಲ.ಹೆಚ್.ವಿ.
ಹಿರಿಯ ಪತ್ರಕರ್ತರು.