ಬಸ್‍ನಲ್ಲಿ ಆಸಿಡ್ ಸಿಡಿದು ಐವರಿಗೆ ಗಾಯ-ಎಸ್.ಪಿ. ಭೇಟಿ

ತುಮಕೂರು:ಮಹಿಳೆಯೊಬ್ಬರು ಮನೆಯ ಶೌಚಾಲಯ ಸ್ವಚ್ಚಗೊಳಿಸಲು ಬಸ್‍ನಲ್ಲಿ ಆಸೀಡ್ ತೆಗೆದುಕೊಂಡು ಹೋಗುವ ವೇಳೆ ಸಿಡಿದು ಐದಾರು ಜನರು ಗಾಯಗೊಂಡಿರುವ ಘಟನೆ ಬುಧವಾರ ಸಂಜೆ ಗೂಳೂರು ಸಮೀಪದ ಪೋದಾರ್ ಶಾಲೆಯ ಬಳಿ ನಡೆದಿದೆ.

ನಗರದ ಮರಳೂರು ದಿಣ್ಣೆಯ ಜನತಾ ಕಾಲೋನಿಯಲ್ಲಿ ವಾಸವಾಗಿರುವ ಶಕೀಲ ಭಾನು ಎಂಬ ಮಹಿಳೆ,ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ಬಳಿ ಕುಣಿಗಲ್ ನಿಂದ ತುಮಕೂರಿಗೆ ಬರುವ ಗಣೇಶ್ ಬಸ್ ಹತ್ತಿದ್ದು,ಅವರ ಬಳಿ ಬ್ಯಾಗೊಂದು ಇದ್ದು,ಬಸ್ಸಿನ ಡ್ರೈವರ್ ಸೀಟಿನ ಹಿಂಬದಿಯಲ್ಲಿ ಕುಳಿತಿದ್ದರು.ಬಸ್ಸು ಹೊನ್ನುಡಿಕೆಯಿಂದ ಗೂಳೂರು ದಾಟಿ ಪೋದಾರ್ ಶಾಲೆಯ ಬಳಿ ಬರುವ ವೇಳೆಗೆ ಒತ್ತಡಕ್ಕೆ ಒಳಗಾಗಿ ಬ್ಯಾಗಿನಲ್ಲಿ ಇರಿಸಿದ್ದ ಅಸೀಡ್ ಇದ್ದ ಬಾಟಲಿ ಸಿಡಿದು ಆಕೆಯ ಅಕ್ಕಪಕ್ಕ ಕುಳಿತಿದ್ದ ಭಾಗ್ಯಮ್ಮ ಸೇರಿದಂತೆ ಐದಾರು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್.ವಿ., ನಗರ ಡಿವೈಎಸ್ಪಿ ಚಂದ್ರಶೇಖರ್,ಗ್ರಾಮಾಂತರ ಇನ್ಸ್‍ಪೆಕ್ಟರ್ ಮೋಹನ್ ಅವರುಗಳು ಸ್ಥಳಕ್ಕೆ ಭೇಟಿ ನೀಡ ಪರಿಶೀಲನೆ ನಡೆಸಿರುವುದಲ್ಲದೆ, ಗಾಯಾಳು ಚಿಕಿತ್ಸೆ ಪಡೆಯುತಿರುವ ಸರಕಾರಿ ಆಸ್ಪತ್ರೆಗೂ ಭೇಟಿ ನೀಡಿ ಗಾಯಾಳುಗಳಿಂದ ಘಟನೆ ಕುರಿತು ಮಾಹಿತಿ ಪಡೆದಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್.ವಿ. ಮಾತನಾಡಿ,ಖಾಸಗಿ ಬಸ್ಸೊಂದು ಕುಣಿಗಲ್‍ನಿಂದ ತುಮಕೂರಿಗೆ ಬರುವ ವೇಳೆ ಗೂಳೂರು ಸಮೀಪದ ಪೋದಾರ್ ಶಾಲೆಯ ಬಳಿ ಅಸೀಡ್ ಬಾಟಲಿಯಿಂದ ಹೊರ ಚಲ್ಲಿದ ಅಸೀಡ್ ಸಿಡಿದು ಐದಾರು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಹೊನ್ನುಡಿಕೆ ಗುಜರಿ ಶಾಫ್‍ನಲ್ಲಿ ಕೆಲಸ ಮಾಡುವ ಶಕೀಲಭಾನು ಎಂಬ ಮಹಿಳೆ ಮನೆಯಲ್ಲಿನ ಟಾಯ್ಲೆಟ್ ಸ್ವಚ್ಚಗೊಳಿಸಲು ಅರ್ಧ ಲೀಟರ್ ಪ್ಲಾಸ್ಟಿಕ್ ಕೂಲ್ ಡ್ರಿಂಕ್ಸ್ ಬಾಟಲಿಯಲ್ಲಿ ತೆಗೆದುಕೊಂಡು ಹೋಗುವಾಗ ಈ ಘಟನೆ ನಡೆದಿದೆ. ಆಕೆಯಿಂದ ಅಸೀದ್ ತುಂಬಿದ್ದ ಬಾಟಲಿ ವಶಪಡಿಸಿಕೊಳ್ಳಲಾಗಿದೆ. ಪ್ರಥಮ ಚಿಕಿತ್ಸೆಗಾಗಿ ಎಲ್ಲಾ ಗಾಯಾಳುಗಳನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಅಲ್ಲದೆ,ಅಸೀಡ್ ತೆಗೆದುಕೊಂಡು ಹೋಗುತ್ತಿದ್ದ ಮಹಿಳೆಯ ಪೂರ್ವಾಪರ ಹುಡುಕುವ ಪ್ರಯತ್ನ ನಡೆದಿದೆ.ಕೈಗಾರಿಕಾ ಉದ್ದೇಶಕ್ಕಾಗಿ ಅಸಿಡ್ ಬಳಕೆಯಾಗುತ್ತಿರುವ ಮಾಹಿತಿ ಇದೆ. ಸ್ಕ್ರಾಪ್ ಅಂಗಡಿಗೆ ಅಸೀಡ್ ಬಳಕೆಗೆ ಪರವಾನಗಿ ಇತ್ತೇ ಎಂಬುದನ್ನು ಸಹ ನಮ್ಮ ಅಧಿಕಾರಿಗಳು ಪರಿಶೀಲನೆ ನಡೆಸುತಿದ್ದಾರೆ ಎಂದು ವಿವರ ನೀಡಿದರು.

Leave a Reply

Your email address will not be published. Required fields are marked *