ಏಪ್ರಿಲ್ 13ರಿಂದ  ಅಂಚೆ ಮತಪತ್ರಗಳ ಮತದಾನ ಆರಂಭ

ತುಮಕೂರು: ನಾಳೆಯಿಂದ ಹೋಮ್ ವೋಟಿಂಗ್( ಏಪ್ರಿಲ್ 13ರಿಂದ 18ನೇ ದಿನಾಂಕದವರೆಗೆ) ಆರಂಭಿಸಲಾಗುತ್ತಿದೆ ಎಂದು ಮಹಾನಗರ ಪಾಲಿಕೆ ಆಯುಕ್ತೆ  ಅಶ್ವಿಜಾ  ತಿಳಿಸಿದರು.

ಮಹಾನಗರ ಪಾಲಿಕೆಯ ಆಯುಕ್ತರ ಕೊಠಡಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹಿರಿಯ ಮತದಾರರು ಹಾಗೂ 40%  ಅಂಗವೈಕಲ್ಯ ಹೊಂದಿರುವವರಿಗೆ ಮನೆಯಿಂದಲೇ ಮತದಾನ ಮಾಡಲು ಫಾರಂ 12 ರ ಮೂಲಕ ಅವಕಾಶ ಮಾಡಿಕೊಟ್ಟಿದ್ದೆವು. ಅದರಲ್ಲಿ 43 ವಿಶೇಷ ಚೇತನ ಮತದಾರರು ಹಾಗೂ 85ವರ್ಷ ಮೇಲ್ಪಟ್ಟ337  ಮತದಾರರು ಸೇರಿ ಒಟ್ಟು 380 ಮರದಾರರು ಮನೆಯಿಂದಲೇ ಮತದಾನ ಮಾಡುತ್ತಿದ್ದಾರೆ ಎಂದರು.

ಒಟ್ಟಾರೆ 380 ಮತದಾರರಿಗೆ ಏಪ್ರಿಲ್13ರಿಂದ 18 ರವರೆಗೆ ಹೋಮ್ ವೋಟಿಂಗ್ ಮಾಡಿಸುತ್ತಿದ್ದೇವೆ. ಇದಕ್ಕಾಗಿ 4 ತಂಡ ರಚನೆ ಮಾಡಲಾಗಿದೆ. ನಾಳೆ 7ಗಂಟೆಯಿಂದ ಆರಂಭಿಸಲಾಗುವುದು. ನಾಲ್ಕು ರೂಟ್ ಮಾಡಿಕೊಂಡು ಮೂರು ದಿನದಲ್ಲಿ ಕಂಪ್ಲೀಟ್ ಮಾಡಬೇಕು ಯೋಜನೆ ಹಾಕಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.

ತುಮಕೂರು ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 235 ಮತಗಟ್ಟೆಗಳಿದ್ದು, 36 ಮತಗಟ್ಟೆಗಳನ್ನು ಕ್ರಿಟಿಕಲ್ ಎಂದು ಗುರುತಿಸಿಲಾಗಿದೆ. ವಿಶೇಷವಾಗಿ 5 ಮಹಿಳಾ ಮತಗಟ್ಟೆಗಳು, 1ವಿಕಲಚೇತನ ಮತಗಟ್ಟೆಗಳು, 1 ಧ್ಯೇಯ ಅಧಾರಿತ ಮತಗಟ್ಟೆಗಳು, 1  ಯುವ ಅಧಿಕಾರಿಗಳ ಮತಗಟ್ಟೆ ಹಾಗೂ 1 ಸಾಂಪ್ರದಾಯಿಕ ಆಧಾರಿತ  ಮತಗಟ್ಟೆ ಸ್ಥಾಪಿಸಲಾಗಿದೆ ಎಂದರು.

Leave a Reply

Your email address will not be published. Required fields are marked *