ತುಮಕೂರು : ಈ ದೇಶದ ಪ್ರಧಾನ ಮಂತ್ರಿಯಾಗಲು ಯಾರಿದ್ದಾರೆ ಎಂಬ ದೇವೇಗೌಡರ ಹೇಳಿಕೆಗೆ ತಿರುಗೇಟು ನೀಡಿದ ಸಿ.ಎಂ. ಸಿದ್ದರಾಮಯ್ಯ.
ತುಮಕೂರಿನಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಸುಳಿವು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ.
ಈ ದೇಶದಲ್ಲಿ ಪ್ರಧಾನ ಮಂತ್ರಿಯಾಗಲು ಯಾರಿದ್ದಾರೆ ಅಂತಾ ಕೇಳ್ತಿರಲ್ಲಾ, ನಿಮಗೆ ನಾಚಿಕೆ ಯಾಗಲ್ವಾ…ದೇವೇಗೌಡ್ರೆ..!
ನೀವು ಪ್ರಧಾನಿಯಾಗುವಾಗ… ಈ ದೇಶದಲ್ಲಿ ಯಾರು ಪ್ರಧಾನ ಮಂತ್ರಿಯಾಗ್ತಾರೆ ಅಂತಾ ಘೋಷಣೆ ಮಾಡಿದ್ರಾ..? ನಿಮಗೆ ಅದೃಷ್ಟ ಇತ್ತು, ಸಿಕ್ತು. ಪ್ರಧಾನ ಮಂತ್ರಿಯಾದ್ರಿ.
*ಮಲ್ಲಿಕಾರ್ಜುನ ಖರ್ಗೆ ಮೋದಿಯವರಿಗಿಂತ ಏನು ಕಡಿಮೆ ಇದ್ದಾರೆ.*
*ರಾಹುಲ್ ಗಾಂಧಿ ಹೆಸರು ಪ್ರಸ್ಥಾಪಿಸದ ಸಿ ಎಂ ಸಿದ್ದರಾಮಯ್ಯ.*
ನಮ್ಮಲ್ಲಿ ಬಹಳ ಜನ ಪ್ರಧಾನ ಮಂತ್ರಿಯಾಗುವ ಯೋಗ್ಯತೆ ಹೊಂದಿದವರು ಇದ್ದಾರೆ.
ಒಂದು ಕಾಲದಲ್ಲಿ ಹೇಳ್ತಾ ಇದ್ರು. ನೆಹರು ಸತ್ತ ನಂತರ ಯಾರು ಪ್ರಧಾನ ಮಂತ್ರಿಯಾಗ್ತಾರೆ…?
ಲಾಲ್ ಬಹದ್ದೂರ್ ಶಾಸ್ತ್ರಿ, ರಾಜೀವ್ ಗಾಂಧಿ, ಇಂದಿರಾ ಗಾಂಧಿ, ಮನಮೋಹನ್ ಸಿಂಗ್ ಇವರೆಲ್ಲಾ ಪ್ರಧಾನ ಮಂತ್ರಿಯಾಗಿ ಒಳ್ಳೆ ಕೆಲಸ ಮಾಡಲಿಲ್ಲವಾ..?
ಈ ದೇಶದಲ್ಲಿ 140 ಕೋಟಿ ಜನರಿದ್ದಾರೆ, ಅವರಲ್ಲಿ ಪ್ರಧಾನ ಮಂತ್ರಿಯಾಗುವ ಯೋಗ್ಯತೆ ಇರುವವರು ಇದ್ದಾರೆ.
ದೇವೇಗೌಡ್ರೆ ನರೇಂದ್ರ ಮೋದಿ ಬಿಟ್ರೆ ಬೇರೆ ಯಾರೂ ಪ್ರಧಾನ ಮಂತ್ರಿ ಆಗುವ ಯೋಗ್ಯತೆ ಇಲ್ಲಾ…ಎನ್ನುವ ನಿಮ್ಮ ತಿಳುವಳಿಕೆ ಇದೆಯಲ್ಲಾ..
ಇದು ಸ್ವಾರ್ಥಕ್ಕೋಸ್ಕರ ಹೇಳುವಂತಹ ಮಾತುಗಳು ಎಂದರು.