ತುಮಕೂರು : ತುಮಕೂರು ಲೋಕಸಭಾ ಚುನಾವಣೆ ಯ ಮತದಾನ ಮಧ್ಯಾಹ್ನ 3 ಗಂಟೆಗೆ ಶೇಕಡ. 56.63 ರಷ್ಟು ಮತದಾನವಾಗಿದೆ.
ಮಧ್ಯಾಹ್ನ 3 ಗಂಟೆಯ ವೇಳೆಗೆ ತುಮಕೂರು ಲೋಕಸಭಾ ವ್ಯಾಪ್ತಿಯ ಚಿ.ನಾ.ಹಳ್ಳಿ 56.15%, ಗುಬ್ಬಿ 60.75%, ಕೊರಟಗೆರೆ 57.85%, ಮಧುಗಿರಿ 55.25%, ತಿಪಟೂರು 60.25%, ತುಮಕೂರು 49.73%, ತುಮಕೂರು ಗ್ರಾಮಾಂತರ 57.35% ಮತ್ತು ತುರುವೇಕೆರೆ58.72% ಶೇಕಡ ಮತದಾನವಾಗಿದ್ದು ಒಟ್ಟು 56.63%ರಷ್ಟು ಮತದಾನವಾಗಿದೆ.
ಬೆಳಿಗ್ಗೆ ಬಿರುಸಿನ ಮತದಾನ ನಡೆಯಿತು, ಮಧ್ಯಾಹ್ನ ಬಿಸಿಲೇರಿದಂತೆ ಮತದಾನಕ್ಕೆ ಮತದಾರರು ಅಷ್ಟಾಗಿ ಬಾರದಿರುವುದು ಕಂಡು ಬಂದಿತು.
ಇದುವರೆವಿಗೂ ಎಲ್ಲಿಯೂ ಇವಿಎಂ ಕೈ ಕೊಟ್ಟಿರುವುದಾಗಲಿ, ಅಹಿತಕರ ಘಟನೆ ನಡೆದಿರುದಿರುವುದಿಲ್ಲ. ಇಲ್ಲಿಯವರೆಗೂ ಶಾಂತಿಯುತ ಮತದಾನವಾಗಿದೆ.
ಇನ್ನ ಎರಡೂವರೆ ಗಂಟೆಯಲ್ಲಿ ಶೇಕಡ ಎಷ್ಟು ಮತದಾನವಾಗಲಿದೆ ಎಂಬುದನ್ನು ನೋಡಬೇಕಾಗಿದೆ.