ತುಮಕೂರು : ಇಂದು ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದರೆ, ಮತದಾನ ಮಾಡಲು ಹೋದ ಬಡವರ ಗುಡಿಸಲುಗಳು ಬೆಂಕಿಗೆ ಆಹುತಿಯಾಗಿ ಸರ್ವಸ್ವವನ್ನೂ ಕಳೆದುಕೊಂಡು ದಿಕ್ಕೇ ತೋಚದೆ ಕಣ್ಣಿರು ಹಾಕಿದ ಘಟನೆಯೊಂದು ಇಂದು ನಡೆಯಿತು.
ಅವರೆಲ್ಲಾ ಕೂಲಿ ಮಾಡಿ ಬದುಕುವವರು, ಸರ್ಕಾರ ನಮಗೆ ಸೈಟ್‍ಗಳನ್ನು ನೀಡುತ್ತದೆಂದು ಖಾಲಿ ಜಾಗದಲ್ಲಿ ಗುಡಿಸಲುಗಳನ್ನು ಕಟ್ಟಿಕೊಂಡಿದ್ದರು, ಇಂದು ಚುನಾವಣೆ ನಡೆಯುತಿದ್ದರಿಂದ ಮತದಾನ ಮಾಡಲು ಹೋದ ಸಂದರ್ಭದಲ್ಲಿ ಗುಡಿಸಲುಗಳಿಗೆ ಬೆಂಕಿ ಬಿದ್ದು ಅವರ ಬದಕನ್ನು ಸುಟ್ಟ ಬೆಂಕಿ, ಮತ್ತೊಂದು ಬೆಂಕಿಗೆ ಹಾಕಿ ಒಡಲನ್ನು ಸುಟ್ಟಿದೆ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಚಿಂಪುಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬೆಂಕಿಯ ಕೆನ್ನಾಲಿಗೆಗೆ ಸುಮಾರು 5 ಗುಡಿಸಲಿನಲ್ಲಿದ್ದ ಗ್ಯಾಸ್ ಸಿಲಿಂಡರ್ ಪೈಕಿ ಎರಡಕ್ಕೂ ಹೆಚ್ಚು ಗ್ಯಾಸ್ ಸಿಲಿಂಡರ್‍ಗಳು ಸ್ಪೋಟಗೊಂಡಿದ್ದು, ಗುಡಿಸಲಿನಲ್ಲಿದ್ದ ಜನರು ಮತದಾನ ಮಾಡಲು ಮತಗಟ್ಟೆಗೆ ತೆರಳಿದ್ದರಿಂದ ಯಾವುದೇ ಪ್ರಾಣಹಾನಿಯಾಗದೇ ಭಾರೀ ಅನಾಹುತ ತಪ್ಪಿದಂತಾಗಿದೆ.
ಗುಡಿಸಲಿಗೆ ಬಿದ್ದ ಬೆಂಕಿ ಕಾರಣ ಅಪಾರ ದಾಸ್ತಾನು ಬಟ್ಟೆ ಸಣ್ಣ ಪುಟ್ಟ ವಸ್ತುಗಳು ಸೇರಿದಂತೆ ಗುಡಿಸಲುಗಳಲಿದ್ದ ವಸ್ತುಗಳು ಸುಟ್ಟು ಕರಕಲಾಗಿವೆ. ಇದರಿಂದ ಕುಟುಂಬಸ್ಥರ ರೋಧನೆ ಮುಗಿಲು ಮುಟ್ಟಿತ್ತು.
ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕ್ಯಾಮೇನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಚಿಂಪುಗಾನ ಹಳ್ಳಿಯಲ್ಲಿ ದುರ್ಘಟನೆ ನಡೆದಿದೆ, ಸುಮಾರು ವರ್ಷಗಳಿಂದ ಖಾಲಿ ನಿವೇಶನಕ್ಕಾಗಿ ಗುಡಿಸಲು ಹಾಕಿಕೊಂಡಿದ್ದ ಸ್ಥಳದಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಗುಡಿಸಲು ಸುಟ್ಟು ಭಸ್ಮವಾಗಿವೆ ಎನ್ನಲಾಗಿದೆ.
ಗೃಹ ಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಪ್ರತಿನಿಧಿಸುವ ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈ ನಡೆದ ಘಟನೆ ನಡೆದಿದೆ.