ತುಮಕೂರು : ಮತಗಟ್ಟೆಗೆ ಹೋಗಿ ಮತದಾನ ಮಾಡಿ ಹಿಂತಿರುತ್ತಿದ್ದಾಲೇ, ಹೃದಯಘಾತವಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ತುಮಕೂರಿನಲ್ಲಿ ನಡೆದಿದೆ.ಮೃತರನ್ನು ರಮೇಶ್ ಎಂದು ಗುರುತಿಸಲಾಗಿದೆ.
ನಗರದ ಎಸ್.ಎಸ್.ಪುರಂನ ಎಸ್.ವಿ.ಕೆ. ಶಾಲೆಯಲ್ಲಿ ಸ್ಥಾಪಿಸಲಾಗಿದ್ದ ಬೂತ್ ನಂಬರ್ 149ರಲ್ಲಿ ಕೆ.ಎಸ್.ರಮೇಶ್ ಅವರು ಬೆಳಗ್ಗೆ 11.30ರ ಸಮಯದಲ್ಲಿ ತಮ್ಮ ಪತ್ನಿಯೊಂದಿಗೆ ತೆರಳಿ ಮತ ಚಲಾಯಿಸಿ ಹೊರಬರುವಾಗಲೇ ಹೃದಯಾಘಾತದಿಂದ ಕುಸಿದು ಬಿದ್ದಾಗ ಕೂಡಲೇ ಕೆ.ಎಸ್.ರಮೇಶ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾರೆ.
ರಮೇಶ್ ಎಸ್.ಎಸ್.ಪುರಂನ ಮುಖ್ಯರಸ್ತೆಯಲ್ಲಿ ಬಟ್ಟೆ ಅಂಗಡಿ ನಡೆಸುತ್ತಿದ್ದರು.